Don't Miss!
- News
ಮಹಾರಾಷ್ಟ್ರದಲ್ಲಿ 1 ಸಾವಿರ ಲಂಚ ಪಡೆದ ನಾಗರೀಕ ಅಧಿಕಾರಿ ಬಂಧನ
- Sports
ರಾಯ್ಪುರದಲ್ಲಿ ರಾರಾಜಿಸಿದ ರೋಹಿತ್ ಪಡೆ: 8 ವಿಕೆಟ್ಗಳ ಅಮೋಘ ಗೆಲುವಿನೊಂದಿಗೆ ಸರಣಿ ವಶಕ್ಕೆ
- Automobiles
ಮತ್ತಷ್ಟು ತಡವಾಗಲಿದೆ ಹೊಸ ಹ್ಯುಂಡೈ ಕ್ರೆಟಾ ಫೇಸ್ಲಿಫ್ಟ್ ಎಸ್ಯುವಿ ಬಿಡುಗಡೆ
- Finance
NRI PAN Card: ಎನ್ಆರ್ಐ ಪ್ಯಾನ್ ಕಾರ್ಡ್ಗೆ ಆನ್ಲೈನ್ ಅರ್ಜಿ ಸಲ್ಲಿಸುವುದು ಹೇಗೆ?
- Technology
2023ರಲ್ಲಿ ಸ್ಮಾರ್ಟ್ಫೋನ್ ಖರೀದಿಸುವ ಮುನ್ನ ನೀವು ಗಮನಿಸಲೇಬೇಕಾದ ವಿಚಾರಗಳು!
- Lifestyle
ದೇಹದಲ್ಲಿ ಮೆಗ್ನೇಸಿಯಂ ಕಡಿಮೆಯಾದ್ರೆ ಹೃದ್ರೋಗ ಖಚಿತ..! ಈ ಹತ್ತು ಆಹಾರಗಳು ನಿಮ್ಮ ಡಯಟ್ನಲ್ಲಿರಲಿ..
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Once Upon A Time in 'ಜಮಾಲಿಗುಡ್ಡ'ದಲ್ಲಿ ಡಾಲಿ: ರಿಲೀಸ್ ಡೇಟ್ ಫಿಕ್ಸ್!
ಡಾಲಿ ಧನಂಜಯ ತುಂಬಾ ಖುಷಿಯಿಂದ ಒಪ್ಪಿಕೊಂಡ ಸಿನಿಮಾ 'ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ'. ಈ ಸಿನಿಮಾ ಸದ್ದಿಲ್ಲದೆ ಸಿನಿಮಾದ ಚಿತ್ರೀಕರಣ ಮುಗಿಸಿದೆ. ಧನಂಜಯ್ ವೃತ್ತಿ ಬದುಕಿನ ವಿಭಿನ್ನ ಸಿನಿಮಾವಿದು. ಇವರ ಪಾತ್ರ ಪಯಣದಲ್ಲಿಯೇ ಸಾಗುತ್ತೆ.
ಸಿನಿಮಾ ಟೈಟಲ್ ಮೊದಲೇ ಗಮನ ಸೆಳೆದಿದೆ. Once Upon A Time in 'ಜಮಾಲಿಗುಡ್ಡ' ಟೈಟಲ್ ನೋಡಿದರೇ ಇದು ರೆಗ್ಯೂಲರ್ ಸಿನಿಮಾ ಅಲ್ಲ ಅನ್ನೋದು ಗೊತ್ತಾಗುತ್ತೆ. ಇನ್ನು ಧನಂಜಯ್ ಗೆಟಪ್, ಕಾಸ್ಟ್ಯೂಮ್ ನೋಡಿದರಂತೂ ಈ ಸಿನಿಮಾ ರಗಡ್ ಆಗಿದೆ ಅಂತ ಅನಿಸದೆ ಇರೋದಿಲ್ಲ.
ಡಾಲಿ ಧನಂಜಯ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ಕೊಡುತ್ತಲೇ ಇದ್ದಾರೆ. ವಿಲನ್ ಆಗಿರಲಿ, ಹೀರೊ ಆಗಿರಲಿ ಧನಂಜಯ್ ಎಲ್ಲದಕ್ಕೂ ಸೈ. ಡಾಲಿಯ ಅಭಿನಯ ನೋಡಿ ಅಭಿಮಾನಿಗಳೇ ನಟ ರಾಕ್ಷಸ ಅಂತ ಬಿರುದು ಕೊಟ್ಟಿದ್ದಾರೆ. ಈ ಮಧ್ಯೆ ಡಾಲಿ ಬತ್ತಳಿಕೆಯಿಂದ ವಿಭಿನ್ನ ಸಿನಿಮಾಗಳು ಬರುತ್ತಿವೆ. ಅದರಲ್ಲೊಂದು Once Upon A Time in 'ಜಮಾಲಿಗುಡ್ಡ'.
Once Upon A Time in 'ಜಮಾಲಿಗುಡ್ಡ' ಸಿನಿಮಾದ ಚಿತ್ರೀಕರಣ ಸಂಪೂರ್ಣ ಮುಗಿದಿದೆ. ಬೆಂಗಳೂರು, ಚಿಕ್ಕಮಗಳೂರು, ಕುದುರೆಮುಖ, ಶಿವಮೊಗ್ಗ ಸೇರಿದಂತೆ ಎಂಭತ್ತು ದಿನಗಳ ಕಾಲ ಭರ್ಜರಿ ಶೂಟಿಂಗ್ ನಡೆದಿದೆ. ಸದ್ಯ ಡಬ್ಬಿಂಗ್ ನಡೆಯುತ್ತಿದ್ದು, ಅದೂ ಕೂಡ ಅಂತಿಮ ಹಂತದಲ್ಲಿದೆ. ಈ ಕಾರಣಕ್ಕೆ ಚಿತ್ರತಂಡ ಕಾನ್ಫಿಡೆಂಟ್ ಆಗಿ ಸೆಪ್ಟೆಂಬರ್ 9 ರಂದು ಸಿನಿಮಾವನ್ನು ಬಿಡುಗಡೆ ಮಾಡಲು ಮುಂದಾಗಿದೆ.
ಅಂದ್ಹಾಗೆ Once Upon A Time in 'ಜಮಾಲಿಗುಡ್ಡ' 90ರ ದಶಕದಲ್ಲಿ ನಡೆಯುವ ವಿಭಿನ್ನಕಥೆ. ಬಾರ್ ಸಪ್ಲೇಯರ್ ಪಾತ್ರದಲ್ಲಿ ಡಾಲಿ ಧನಂಜಯ್ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ಸಿನಿಮಾದಲ್ಲಿ ಡಾಲಿ ಧನಂಜಯ್ ಫಸ್ಟ್ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಡಾಲಿ ಜೊತೆ ಅದಿತಿ ಪ್ರಭುದೇವ ವಿಭಿನ್ನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪ್ರಕಾಶ್ ಬೆಳವಾಡಿ, ಭಾವನ ರಾಮಣ್ಣ, ಕಾಮಿಡಿ ಕಿಲಾಡಿಗಳು ಸಂತು, ತ್ರಿವೇಣಿ, ಪ್ರಾಣ್ಯ, ನಂದ ಗೋಪಾಲ್ ಸೇರಿದಂತೆ ಹಲವರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Recommended Video

ಶ್ರೀಹರಿ ನಿರ್ಮಾಣ ಮಾಡುತ್ತಿರುವ ಈ ಚಿತ್ರವನ್ನು ಕುಶಾಲ್ ಗೌಡ ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ಇದೇ ನಿರ್ದೇಶಕರು 'ಕನ್ನಡಕ್ಕಾಗಿ ಒಂದನ್ನು ಒತ್ತಿ' ಎಂಬ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಈ ಸಿನಿಮಾಗೆ ಸದ್ಯ ಕಥೆ, ಚಿತ್ರಕಥೆಯನ್ನೂ ಸಹ ಕುಶಾಲ್ ಗೌಡ ಅವರೆ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಕಾರ್ತಿಕ್ ಛಾಯಾಗ್ರಹಣ ಹಾಗೂ ಹರೀಶ್ ಕೊಮ್ಮೆ ಸಂಕಲನವಿದೆ. ರಗಡ್ ಲುಕ್ ಅಂದಾಕ್ಷಣ ಒಂದು ವರ್ಗಕ್ಕೆ ಸೀಮಿತವಲ್ಲ ಕುಟುಂಬ ಸಮೇತ ನೋಡಬಹುದಾದ ಸುಂದರ ಕಥೆ ಎನ್ನುತ್ತಿದೆ ಚಿತ್ರತಂಡ.