For Quick Alerts
  ALLOW NOTIFICATIONS  
  For Daily Alerts

  'ಗಿಫ್ಟ್ ಬಾಕ್ಸ್' ಪೋಸ್ಟರ್ ಬಿಡುಗಡೆ ಮಾಡಲಿದ್ದಾರೆ 'ಡಾಲಿ' ಧನಂಜಯ್

  |

  ಹಳ್ಳಿ ಚಿತ್ರ ಪ್ರೊಡಕ್ಷನ್ ಅವರ ಎರಡನೇ ಪ್ರಾಜೆಕ್ಟ್ 'ಗಿಫ್ಟ್ ಬಾಕ್ಸ್' ಚಿತ್ರದ ಪೋಸ್ಟರ್ ಜನವರಿ 4 ರಂದು ಬಿಡುಗಡೆಯಾಗಲಿದೆ. ಕನ್ನಡದ ಖ್ಯಾತ ನಟ ಧನಂಜಯ್ ಅವರು ಚಿತ್ರದ ಪೋಸ್ಟರ್ ರಿಲೀಸ್ ಮಾಡಲಿದ್ದಾರೆ.

  ಜನವರಿ 4 ರಂದು ಸಂಜೆ 6 ಗಂಟೆಗೆ ವಿಜಯನಗರದ ಕಲ್ಪ ಕ್ಷೇತ್ರದಲ್ಲಿ ಈ ಕಾರ್ಯಕ್ರಮ ಜರುಗಲಿದೆ. ಇದೇ ವೇಳೆ "ಸಿನಿಮಾಗಳಲ್ಲಿ ಬಿತ್ತಿ ಪತ್ರಗಳ (ಪೋಸ್ಟರ್) ಪ್ರಾಮುಖ್ಯತೆ" ಕುರಿತು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ.

  "ಸಿನೆಮಾಗಳಲ್ಲಿ ಬಿತ್ತಿ ಪತ್ರಗಳ (ಪೋಸ್ಟರ್)ಗಳ ಪ್ರಾಮುಖ್ಯತೆ" ಕುರಿತು ಮಾತನಾಡಲು ಶ್ರೀ ಎನ್.ಎಸ್.ಶಂಕರ್, ವಿಮರ್ಶಕರು ಮತ್ತು ಚಲನಚಿತ್ರ ನಿರ್ದೇಶಕರು ಹಾಗೂ ಶ್ರೀ ಬಾದಲ್ ನಂಜುಂಡಸ್ವಾಮಿ, ಕಲಾವಿದರು ಮತ್ತು ಕಥೆಗಾರರು ಆಗಮಿಸುತ್ತಿದ್ದಾರೆ.

  'ಗಿಫ್ಟ್ ಬಾಕ್ಸ್' ಚಿತ್ರವು ವಿಭಿನ್ನವಾದ ಕಥಾ ವಸ್ತುವನ್ನು ಒಳಗೊಂಡ ಚಿತ್ರವಾಗಿದ್ದು, ಸದ್ಯದಲ್ಲೆ ತೆರೆಕಾಣಲಿದೆ. ಈ ಚಲನಚಿತ್ರವನ್ನು ಹಳ್ಳಿಚಿತ್ರ ಪ್ರೊಡಕ್ಷನ್ ನಿರ್ಮಾಣ ಮಾಡಿದ್ದು, ರಘು ಎಸ್.ಪಿ ನಿರ್ದೇಶಿಸಿದ್ದಾರೆ.

  ಸಂಗೀತ: ವಾಸು ದೀಕ್ಷಿತ್, ಸಂಕಲನ: ಗುರುಸ್ವಾಮಿ, ಛಾಯಾಗ್ರಹಣ: ರಾಘವೇಂದ್ರ, ಸಿಂಕ್ ಸೌಂಡ್ ಮತ್ತು ದ್ವನಿ ವಿನಾಸ: ಮಹಾವೀರ್ ಸಾಬಣ್ಣನವರ್ ನಿರ್ವಹಿಸಿದ್ದಾರೆ. ಮುಖ್ಯ ಭೂಮಿಕೆಯಲ್ಲಿ ರೇಣುಕ್ ಮಠದ್, ಅಮಿತಾ ಕುಲಾಲ್, ದೀಪ್ತಿ ಮೋಹನ್, ಮುರಳಿ ಗುಂಡಣ್ಣ, ಲಕ್ಷ್ಮಿ ಚಂದ್ರಶೇಖರ್, ಶಿವಾಜಿರಾವ್ ಜಾದವ್ ಮತ್ತು ಇಂದಿರಾ ನಾಯರ್ ನಟಿಸಿದ್ದಾರೆ.

  English summary
  Kannada actor dhananjay will release giftbox movie poster on january 4th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X