ಯುವರತ್ನನ ಪವರ್ ಹೆಚ್ಚಿಸಲು ಡಾಲಿ ಜೊತೆ ಚಿಟ್ಟೆನೂ ಎಂಟ್ರಿ.!
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಯುವರತ್ನ ಸಿನಿಮಾ ದಿನದಿಂದ ಕುತೂಹಲ ಹೆಚ್ಚಿಸುತ್ತಿದೆ. ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡ್ತಿರುವ ಈ ಚಿತ್ರದಲ್ಲಿ ಪುನೀತ್ ಎದುರು ಧನಂಜಯ್ ವಿಲನ್ ಆಗ್ತಾರೆ ಎಂಬ ಸುದ್ದಿ ಇತ್ತೀಚಿಗಷ್ಟೆ ಬಹಿರಂಗವಾಗಿತ್ತು.
ಈಗ ಡಾಲಿ ಜೊತೆ ಚಿಟ್ಟೆ ಕೂಡ ಯುವರತ್ನ ತಂಡಕ್ಕೆ ಎಂಟ್ರಿಯಾಗಿದ್ದಾನೆ. ಹೌದು, ಟಗರು ಚಿತ್ರದಲ್ಲಿ ಡಾಲಿ ಧನಂಜಯ್ ಜೊತೆ ಚಿಟ್ಟೆ ವಸಿಷ್ಠ ಸಿಂಹ ಕೂಡ ಮಿಂಚಿದ್ದರು. ಇವರಿಬ್ಬರ ಜೋಡಿಯನ್ನ ಪ್ರೇಕ್ಷಕರು ಕೂಡ ಅಷ್ಟೇ ಇಷ್ಟಪಟ್ಟಿದ್ದರು.
ಅದೇ ಜೋಡಿ ಈಗ ಮತ್ತೆ ಒಂದಾಗಿದೆ. ಪುನೀತ್ ಸಿನಿಮಾಗಾಗಿ ಡಾಲಿ ಮತ್ತು ಚಿಟ್ಟೆ ಇಬ್ಬರು ಒಟ್ಟಿಗೆ ಬರ್ತಿದ್ದಾರೆ. ಧನಂಜಯ್ ವಿಲನ್ ಪಾತ್ರವಾಗಿದ್ದು, ಬಹುಶಃ ವಸಿಷ್ಠ ಸಿಂಹ ಕೂಡ ವಿಲನ್ ಆಗಿಯೇ ಎಂಟ್ರಿಯಾಗಿರಬಹುದು.

ಇಂದಿನಿಂದ ಯುವರತ್ನ ಶೂಟಿಂಗ್ ಆರಂಭವಾಗಿದ್ದು, ರಾಜಕುಮಾರ ಸಿನಿಮಾ ನಿರ್ಮಿಸಿದ್ದ ವಿಜಯ್ ಕಿರಗಂದೂರ್ ಈ ಚಿತ್ರಕ್ಕೂ ಬಂಡವಾಳ ಹಾಕ್ತಿದ್ದಾರೆ.
ಇನ್ನುಳಿದಂತೆ ಸಯೀಶಾ ಸೈಗಲ್ ಈ ಚಿತ್ರಕ್ಕೆ ನಾಯಕಿಯಾಗುವ ಸಾಧ್ಯತೆ ಹೆಚ್ಚಿದೆ. ಆದ್ರೆ, ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಸದ್ಯ ಪುನೀತ್ ಅಭಿನಯದ ನಟಸಾರ್ವಭೌಮ ಸಿನಿಮಾ ಉತ್ತಮ ಪ್ರದರ್ಶನವಾಗ್ತಿದೆ.


Click it and Unblock the Notifications











