For Quick Alerts
  ALLOW NOTIFICATIONS  
  For Daily Alerts

  ಟಾಲಿವುಡ್ ನಲ್ಲಿ ಭೈರವನಾಗಿ ನಟರಾಕ್ಷಸನ ಅಬ್ಬರ ಶುರು

  By Pavithra
  |

  ಸ್ಪೆಷಲ್ ಸ್ಟಾರ್ ಧನಂಜಯ ಟಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದಾರೆ. 'ಟಗರು' ಸಿನಿಮಾ ನೋಡಿ ಸಂತಸ ವ್ಯಕ್ತ ಪಡಿಸಿದ್ದ ನಿರ್ದೇಶಕ ರಾಮ್ ಗೋಪಾಲ್ ವರ್ಮ ನಟ ಧನಂಜಯ ಅವರನ್ನು ಹೈದ್ರಾಬಾದ್ ಗೆ ಕರೆಸಿ ಮಾತನಾಡಿದ್ದರು. ಸಿನಿಮಾ ನೋಡಿದ ಸಂದರ್ಭದಲ್ಲಿ ಡಾಲಿಗಾಗಿ ಚಿತ್ರ ನಿರ್ಮಾಣ ಮಾಡುವುದಾಗಿ ತಿಳಿಸಿದ್ದರು.

  ಅದರಂತಯೇ ಧನಂಜಯ ಅವರನ್ನು ತಮ್ಮ ಬ್ಯಾನರ್ ನಲ್ಲಿ ಟಾಲಿವುಡ್ ಅಂಗಳಕ್ಕೆ ಪರಿಚಯ ಮಾಡುತ್ತಿದ್ದಾರೆ. ಧನಂಜಯ ಅಭಿನಯದ ತೆಲುಗು ಸಿನಿಮಾ ಸೆಟ್ಟೇರಲು ಸಜ್ಜಾಗಿದ್ದು ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲೂ ಸಿನಿಮಾ ನಿರ್ಮಾಣವಾಗಲಿದ್ಯಂತೆ.

  'ಡಾಲಿ' ಧನಂಜಯ್ ಗೆ ವರ್ಮಾ ಕೊಟ್ರು ಬಂಪರ್ ಆಫರ್.!'ಡಾಲಿ' ಧನಂಜಯ್ ಗೆ ವರ್ಮಾ ಕೊಟ್ರು ಬಂಪರ್ ಆಫರ್.!

  ರಾಮ್ ಗೋಪಾಲ್ ವರ್ಮ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾದ ಟೈಟಲ್ ಏನು? ಧನಂಜಯ ಯಾವ ರೀತಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯಾರು ನಿರ್ದೇಶನ ಮಾಡುತ್ತಿದ್ದಾರೆ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ..

  ಟಾಲಿವುಡ್ ನಲ್ಲಿ ಡಾಲಿ

  ಟಾಲಿವುಡ್ ನಲ್ಲಿ ಡಾಲಿ

  ನಟ ಧನಂಜಯ ತೆಲುಗು ಚಿತ್ರದಲ್ಲಿ ಅಭಿನಯ ಮಾಡುವುದು ಕನ್ಫರ್ಮ್ ಆಗಿದೆ. ಸಿನಿಮಾವನ್ನು ರಾಮ್ ಗೋಪಾಲ್ ವರ್ಮ ತಮ್ಮ ಬ್ಯಾನರ್ ನಲ್ಲಿ ನಿರ್ಮಾಣ ಮಾಡುತ್ತಿದ್ದು ರಿಷಿ ಕಂಬೈನ್ಸ್ ವರ್ಮಾ ಜೊತೆ ಕೈ ಜೋಡಿಸಲಿದ್ದಾರೆ.

  ಭೈರವನಾಗಿ ಬದಲಾದ ಡಾಲಿ

  ಭೈರವನಾಗಿ ಬದಲಾದ ಡಾಲಿ

  ಧನಂಜಯ ಅಭಿನಯದ ಸಿನಿಮಾಗೆ 'ಭೈರವ-ಗೀತಾ' ಎನ್ನುವ ಹೆಸರಿಸಲು ಸಿದ್ದತೆ ಮಾಡಿಕೊಂಡಿದ್ದಾರಂತೆ. ಕನ್ನಡ ಹಾಗೂ ತೆಲುಗಿನಲ್ಲಿ ಚಿತ್ರ ನಿರ್ಮಾಣವಾಗುತ್ತಿದ್ದು ನವ ನಿರ್ದೇಶಕ ಸಿದ್ಧಾರ್ಥ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

  ಡಾಲಿ-ಮಾಸ್ತಿ-ವರ್ಮ ಭೇಟಿ

  ಡಾಲಿ-ಮಾಸ್ತಿ-ವರ್ಮ ಭೇಟಿ

  ನಟ ಧನಂಜಯ ಹಾಗೂ ಡೈಲಾಗ್ ರೈಟರ್ ಮಾಸ್ತಿ ಅವರನ್ನು ಹೈದ್ರಾಬಾದ್ ಗೆ ಕರೆಸಿಕೊಂಡ ರಾಮ್ ಗೋಪಾಲ್ ವರ್ಮ ಕನ್ನಡಕ್ಕೆ ಸಂಭಾಷಣೆ ಬರೆಯಲು ಮಾಸ್ತಿ ಅವರ ಜೊತೆ ಚರ್ಚೆ ನಡೆಸಿದ್ದಾರಂತೆ. ಸದ್ಯ ಅಧಿಕೃತವಾಗಿ ಮಾಹಿತಿ ಹೊರಬಂದಿಲ್ಲವಾದರೂ ಧನಂಜಯ ಅಭಿನಯದ ತೆಲುಗು ಚಿತ್ರದ ಕನ್ನಡ ಅವತರಣಿಕೆಯಲ್ಲಿ ಮಾಸ್ತಿ ಕೂಡ ಕೆಲಸ ಮಾಡಲಿದ್ದಾರೆ ಎನ್ನುತಿವೆ ಮೂಲಗಳು.

  ಇದೇ ತಿಂಗಳು ಚಿತ್ರೀಕರಣ

  ಇದೇ ತಿಂಗಳು ಚಿತ್ರೀಕರಣ

  ಭೈರವ-ಗೀತಾ ಸಿನಿಮಾದ ಚಿತ್ರೀಕರಣ ಜೂನ್ 15 ರಂದು ಶುರುವಾಗಲಿದ್ಯಂತೆ. ಜೂನ್ 20 ರಂದು ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡುವ ಪ್ರಯತ್ನದಲ್ಲಿದೆ ಸಿನಿಮಾತಂಡ.

  ಸ್ಯಾಂಡಲ್ ವುಡ್ ಜೊತೆ ಟಾಲಿವುಡ್

  ಸ್ಯಾಂಡಲ್ ವುಡ್ ಜೊತೆ ಟಾಲಿವುಡ್

  ಟಾಲಿವುಡ್ ನಲ್ಲಿ ನಿರ್ಮಾಣವಾಗುತ್ತಿರುವ 'ಭೈರವ-ಗೀತಾ' ಸಿನಿಮಾ ಕಥೆ ತೆಲುಗು ಹಾಗೂ ಕನ್ನಡ ಎರಡು ಜನರಿಗೂ ಕನೆಕ್ಟ್ ಆಗುವಂತಿದೆಯಂತೆ. ತೆಲುಗು ಚಿತ್ರದ ಜೊತೆಯಲ್ಲಿ ಧನಂಜಯ ಸೂರಿ ನಿರ್ದೇಶನದ 'ಪಾಪ್ ಕಾರ್ನ್ ಮಂಕಿ ಟೈಗರ್' ಸಿನಿಮಾದಲ್ಲಿಯೂ ಅಭಿನಯ ಮಾಡುತ್ತಿದ್ದಾರೆ.

  English summary
  Kannada actor Dhananjaya is acting in Telugu cinema. The film is named Bhairava Geeta. Ram Gopal Varma is producing the cinema.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X