For Quick Alerts
  ALLOW NOTIFICATIONS  
  For Daily Alerts

  'ಇದು ಸಂಭ್ರಮದ ಸಮಯವಲ್ಲ' ಎಂದು ಖುಷಿಯನ್ನ ದೂರ ತಳ್ಳಿದ ಧನಂಜಯ್

  By Bharath Kumar
  |
  ಕೊಡಗು ಜನರ ಪರಿಸ್ಥಿತಿಗೆ ಮರುಗಿದ ಡಾಲಿ ಧನಂಜಯ..! | Filmibeat Kannada

  ಆಗಸ್ಟ್ 23....ಧನಂಜಯ್ ಅವರ ಹುಟ್ಟುಹಬ್ಬ. ಧನಂಜಯ್ ಅವರ ಅಭಿಮಾನಿಗಳು ಆ ದಿನವನ್ನ 'ಡಾಲಿ ಡೇ' ಎಂದು ಸಂಭ್ರಮಿಸಲು ಸಿದ್ಧವಾಗಿದ್ದಾರೆ. ಆದ್ರೆ, ನಟ ಧನಂಜಯ್ ಈ ಸಂಭ್ರಮವನ್ನ ಬೇಡವೆಂದು ಮನವಿ ಮಾಡಿಕೊಂಡಿದ್ದಾರೆ.

  ಹೌದು, ಕೊಡಗು ಜಿಲ್ಲೆಯಲ್ಲಿ ಉಂಟಾದ ಭಾರಿ ಅನಾಹುತದಿಂದ ಅಲ್ಲಿನ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಬದುಕು ಬೀದಿಗೆ ಬಂದಿದೆ. ಇಂತಹ ಸಮಯದಲ್ಲಿ ನಾನು ಸಂಭ್ರಮಿಸುವುದು ಸರಿಯಲ್ಲ ಎಂದು ಯೋಚಿಸಿ ತಮ್ಮ ಹುಟ್ಟುಹಬ್ಬವನ್ನ ಸೆಲೆಬ್ರೆಟ್ ಮಾಡದಿರಲು ನಿರ್ಧರಿಸಿದ್ದಾರೆ.

  ಕೊಡಗಿನ ಮಕ್ಕಳಿಗೆ ಹೃದಯಪೂರ್ವಕವಾಗಿ ನೆರವಾದ ಕನ್ನಡ ಸಿನಿತಾರೆಯರುಕೊಡಗಿನ ಮಕ್ಕಳಿಗೆ ಹೃದಯಪೂರ್ವಕವಾಗಿ ನೆರವಾದ ಕನ್ನಡ ಸಿನಿತಾರೆಯರು

  ಆದ್ರೆ, ಅಭಿಮಾನಿಗಳನ್ನ ನಿರಾಸೆ ಮಾಡಲು ಇಷ್ಟವಿಲ್ಲದ ಧನಂಜಯ್, ಆ ದಿನ ನಿಮ್ಮನ್ನ ಭೇಟಿ ಮಾಡುತ್ತೇನೆ. ಯಾವುದೇ ಕೇಕ್, ಪಟಾಕಿ, ಕಟೌಟ್ ಗಳನ್ನ ಹಾಕುವುದು ಬೇಡ. ಕೊಡಗು ಜನರ ಕ್ಷೇಮಾಭಿವೃದ್ಧಿಗಾಗಿ ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಆ ದಿನ ಅವರಿಗೆ ನೆರವಾಗೋಣ ಎಂದು ಕರೆ ಕೊಟ್ಟಿದ್ದಾರೆ.

  ಈ ವಿಷ್ಯವನ್ನ ಸ್ವತಃ ಧನಂಜಯ್ ಅವರೇ ವಿಡಿಯೋ ಮೂಲಕ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ಧನಂಜಯ್ ಅವರ ಈ ಮನವಿಯನ್ನ ಅಭಿಮಾನಿಗಳು ಹೇಗೆ ಸ್ವೀಕರಿಸ್ತಾರೋ ಕಾದುನೋಡಬೇಕಿದೆ.

  ಸಿ.ಎಂ ಪರಿಹಾರ ನಿಧಿಗೆ 10 ಲಕ್ಷ ರೂಪಾಯಿ ನೀಡಿದ ನಟ ಶಿವರಾಜ್ ಕುಮಾರ್ ಸಿ.ಎಂ ಪರಿಹಾರ ನಿಧಿಗೆ 10 ಲಕ್ಷ ರೂಪಾಯಿ ನೀಡಿದ ನಟ ಶಿವರಾಜ್ ಕುಮಾರ್

  ಸದ್ಯ, ರಾಮ್ ಗೋಪಾಲ್ ವರ್ಮಾ ನಿರ್ಮಾಣದ 'ಭೈರವಗೀತಾ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ದರ್ಶನ್ ಅಭಿನಯದ 'ಯಜಮಾನ' ಸಿನಿಮಾವನ್ನ ಮುಗಿಸಿದ್ದಾರೆ.. ಅದಾದ ಬಳಿಕ ನಿರ್ದೇಶಕ ಸೂರಿ ಅವರ 'ಪಾಪ್ ಕಾರ್ನ್ ಮಂಕಿ ಟೈಗರ್' ಪ್ರಾಜೆಕ್ಟ್ ನ್ನ ಕೈಗೆತ್ತಿಕೊಳ್ಳಲಿದ್ದಾರೆ.

  English summary
  Kannada actor Dhananjaya will not celebrate his birthday on august 23rd. becuse of kodagu flood. This was announced by the actor.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X