»   » ಧನಂಜಯನನ್ನ ಪೂರ್ತಿಯಾಗಿ ತೆಗೆದುಕೊಂಡ ಟ್ರೋಲ್ ಹುಡುಗರು

ಧನಂಜಯನನ್ನ ಪೂರ್ತಿಯಾಗಿ ತೆಗೆದುಕೊಂಡ ಟ್ರೋಲ್ ಹುಡುಗರು

Posted By:
Subscribe to Filmibeat Kannada

ಕನ್ನಡ ಸಿನಿಮಾ ಪ್ರೇಕ್ಷಕರಿಗೆ ನಿಮಗೆ ಧನಂಜಯ ಗೊತ್ತಾ ಅಂದ್ರೆ ಒಂದು ಕ್ಷಣ ಯೋಚನೆ ಮಾಡುತ್ತಾರೆ, ಆದರೆ ಡಾಲಿ ಗೊತ್ತಾ ಅಂದ್ರೆ ಒಂದು ಸೆಕೆಂಡ್ ಕೂಡ ಹಾಳು ಮಾಡದೆ ಡಾಲಿಯ ಡೈಲಾಗ್ ಹೇಳಲು ಶುರು ಮಾಡಿ ಬಿಡುತ್ತಾರೆ. ಅಷ್ಟರ ಮಟ್ಟಿಗೆ ಡಾಲಿ ಹವಾ ಕ್ರಿಯೆಟ್ ಆಗಿದೆ.

ಕೇವಲ ಕನ್ನಡ ಸಿನಿಮಾರಂಗದಲ್ಲಿ ಮಾತ್ರವಲ್ಲದೆ ಪರಭಾಷೆಯ ಪ್ರೇಕ್ಷಕರಿಗೂ ಡಾಲಿ ತುಂಬಾನೇ ಇಷ್ಟವಾಗಿದ್ದಾನೆ. ಅಷ್ಟರ ಮಟ್ಟಿಗೆ ಆ ಪಾತ್ರ ಹಾಗೂ ಅದನ್ನ ನಿರೂಪಣೆ ಮಾಡಿದ ರೀತಿ ಮೆಚ್ಚುಗೆ ಆಗಿತ್ತು. ಟಗರು ಯಶಸ್ಸು ಪಡೆದುಕೊಂಡಿರುವ ಹಿನ್ನಲೆಯಲ್ಲಿ ರಾಜ್ಯದ ಆಯ್ದ ಜಿಲ್ಲೆಗಳಿಗೆ ಭೇಟಿ ನೀಡಿ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದ್ದು ಆಯ್ತು.

ಡಾಲಿಯನ್ನ ಹತ್ತಿರದಿಂದ ನೋಡಿದ ಅಭಿಮಾನಿಗಳು ಮತ್ತು ಹುಡುಗರು ಧನಂಜಯರನ್ನ ಪೂರ್ತಿ ಆಗಿ ತೆಗೆದೊಂಡಿದ್ದಾರೆ. ಧನು ಲೈಫ್ ಹಿಸ್ಟರಿ ತಿಳಿದುಕೊಂಡು 'ಟಾಪರ್ ರೌಡಿ ಆದ ಕತೆ' ಅಂತ ಟ್ರೋಲ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಡಾಲಿ ಬಗ್ಗೆ ಅಂತ ವಿಚಾರ ಸಿಕ್ಕಿದಾದರೂ ಏನು ಅಂತೀರಾ, ಮುಂದೆ ಓದಿ

ಟ್ರೋಲ್ ಪೇಜ್ ನಲ್ಲಿ ಡಾಲಿ ಹವಾ

ಡಾಲಿ ಧನಂಜಯ ಈಗ ಸಖತ್ ಫೇಮಸ್ ಆಗಿದ್ದಾರೆ. ಸಿನಿಮಾರಂಗದಲ್ಲಿ ಟಾಪ್ ಲೀಸ್ಟ್ ನಲ್ಲಿರುವ ಧನಂಜಯ ಶಾಲಾ ದಿನಗಳಲ್ಲೂ ಟಾಪ್ ನಲ್ಲಿಯೇ ಇದ್ದವರು. ಎಸ್,ಎಸ್, ಎಲ್, ಸಿ ನಲ್ಲಿ ಜಿಲ್ಲೆಯಲ್ಲೇ ಅತೀ ಹೆಚ್ಚು ಅಂಕ ಗಳಿಸಿದ್ದರು.

ಟಾಪರ್ ರೌಡಿ ಆದ ಕತೆ

ಧನಂಜಯ ಎಸ್ ಎಸ್ ಎಲ್ ಸಿ ನಲ್ಲಿ ರಾಜ್ಯಕ್ಕೆ ಮೊದಲು ಬಂದ ವಿಚಾರ ಅಂದಿನ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅದರ ಪೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಟ್ರೋಲ್ ಪೇಜ್ ಗಳಲ್ಲಿ ರೌಡಿ ಟಾಪರ್ ಆದ ಕತೆ ಎಂದು ವೈರಲ್ ಆಗುತ್ತಿದೆ.

ವಿದ್ಯಾಭ್ಯಾಸದಲ್ಲಿ ಟಾಪರ್

ಧನಂಜಯ ಕೇವಲ ಎಸ್ ಎಸ್ ಎಲ್ ಸಿ ನಲ್ಲಿ ಮಾತ್ರವಲ್ಲದೆ ಏಳನೇ ತರಗತಿ, ಸೆಕೆಂಡ್ ಇಯರ್, ಇಂಜಿನಿಯರಿಂಗ್ ಎಲ್ಲಾದರಲ್ಲಿಯೂ ಉತ್ತಮ ಅಂಕಗಳಿಸಿ ಶಾಲೆಯಲ್ಲಿ ಒಳ್ಳೆ ಹೆಸರು ಮಾಡಿದವರು.

ಮುಂದಿನ ಸಿನಿಮಾ ಯಾವುದು

ಧನಂಜಯ ಟಗರು ಸಿನಿಮಾದ ನಂತರ ಯಾವ ಚಿತ್ರದಲ್ಲಿ ಅಭಿನಯಿಸುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲಿಯೂ ಇದೆ. ಸಾಕಷ್ಟು ಸಿನಿಮಾಗಳ ಹೆಸರು ಕೇಳಿ ಬರುತ್ತಿದೆ ಆದರೂ ಇಂತದ್ದೇ ಚಿತ್ರದಲ್ಲಿ ಆಕ್ಟ್ ಮಾಡುತ್ತಿದ್ದಾರೆ ಎನ್ನುವ ಅಧಿಕೃತ ಮಾಹಿತಿ ಇಲ್ಲ.

English summary
Kannada actor Dhananjaya's SSLC exam results news is becoming viral. Dhananjaya played the role of Dalí Tagaru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X