For Quick Alerts
  ALLOW NOTIFICATIONS  
  For Daily Alerts

  ದೊರೆಗಳ ದರ್ಪಕ್ಕೆ ಜ್ವಾಲಾಮುಖಿಯಾದ 'ಡಾಲಿ'

  By Pavithra
  |

  ಕನ್ನಡ ಸಿನಿಮಾರಂಗದ ಸ್ಪೆಷಲ್ ಸ್ಟಾರ್ ಡಾಲಿ ಧನಂಜಯ ಟಾಲಿವುಡ್ ಸಿನಿಮಾರಂಗಕ್ಕೆ ಕಾಲಿಟ್ಟಾಗಿದೆ. 'ಟಗರು' ಚಿತ್ರದಲ್ಲಿನ ಡಾಲಿ ಪಾತ್ರದ ಅಭಿನಯವನ್ನು ಕಂಡು ರಾಮ್ ಗೋಪಾಲ್ ವರ್ಮ ಧನಂಜಯ ಅವರನ್ನು ತೆಲುಗು ಸಿನಿಮಾರಂಗಕ್ಕೆ ಪರಿಚಯಿಸುತ್ತಿದ್ದಾರೆ.

  ರಾಮ್ ಗೋಪಾಲ್ ವರ್ಮ ಸಿನಿಮಾಗಳಲ್ಲಿ ಸಹಾಯಕ ನಿರ್ದೆಶಕನಾಗಿ ಕೆಲಸ ಮಾಡಿದ್ದ ಸಿದ್ದಾರ್ಥ್ ಧನಂಜಯ ಅಭಿನಯದ ಚೊಚ್ಚಲ ತೆಲುಗು ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಡಾಲಿ ತೆಲುಗು ಸಿನಿಮಾಗಾಗಿ ಮಾಡಿರುವ ಫಸ್ಟ್ ಲುಕ್ ನೋಡಿ ಕನ್ನಡ ಸಿನಿಮಾರಂಗವರು ಹಾಗೂ ಅಭಿಮಾನಿಗಳು ಖುಷಿ ಆಗಿದ್ದಾರೆ.

  'ಭೈರವ-ಗೀತಾ' ಚಿತ್ರಕ್ಕಾಗಿ ಧನಂಜಯ ಈಗಾಗಲೇ ಹೈದ್ರಾಬಾದ್ ಗೆ ಪ್ರಯಾಣ ಬೆಳೆಸಿದ್ದು ಚಿತ್ರತಂಡ ಅಧಿಕೃತವಾಗಿ ಇಂದು ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದೆ. 'ಭೈರವ-ಗೀತಾ' ಚಿತ್ರದ ಮೋಷನ್ ಪೋಸ್ಟರ್ ವಿಶೇಷವೇನು? ಚಿತ್ರೀಕರಣ ಆರಂಭ ಯಾವಾಗ? ಇಲ್ಲಿದೆ ಸಂಪೂರ್ಣ ಮಾಹಿತಿ . ಮುಂದೆ ಓದಿ

  ಭೈರವ-ಗೀತಾ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ

  ಧನಂಜಯ ಅಭಿನಯದ ತೆಲುಗಿನ ಭೈರವ-ಗೀತಾ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಆಗಿದೆ. ಎರಡು ದಿನಗಳ ಹಿಂದೆಯಷ್ಟೇ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದ ಆರ್ ಜಿ ವಿ ಇಂದು ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್ ಮಾಡಿದ್ದಾರೆ.

  ದೊರೆಗಳ ದರ್ಪಕ್ಕೆ ಜ್ವಾಲಾಮುಖಿ

  ದೊರೆಗಳ ದರ್ಪಕ್ಕೆ ಜ್ವಾಲಾಮುಖಿ

  ದೊರೆಗಳ ದರ್ಪ ಜ್ವಾಲೆಯಾದಾಗ.. ದಣಿದವರ ಧೈರ್ಯ ಜ್ವಾಲಾಮುಖಿಯಾಗುತ್ತದೆ... ಎನ್ನುವ ಸಾಲಿಗಳನ್ನ ಭೈರವ-ಗೀತಾ ಚಿತ್ರದ ಮೋಷನ್ ಪೋಸ್ಟರ್ ನಲ್ಲಿ ಬಳಸಿಕೊಳ್ಳಲಾಗಿದೆ.

  ಇಂಪ್ರೆಸ್ ಮಾಡುತ್ತಿದೆ ಹಿನ್ನಲೆ ಸಂಗೀತ

  ಇಂಪ್ರೆಸ್ ಮಾಡುತ್ತಿದೆ ಹಿನ್ನಲೆ ಸಂಗೀತ

  ಸದ್ಯ ಬಿಡುಗಡೆ ಆಗಿರುವ ಮೋಷನ್ ಪೋಸ್ಟರ್ ನಲ್ಲಿ ಈ ಹಿಂದಿನ ಆರ್ ಜಿ ವಿ ಸಿನಿಮಾಗಳ ರೀತಿಯಲ್ಲಿ ಹಿನ್ನಲೆ ಸಂಗೀತ ಗಮನ ಸೆಳೆಯುತ್ತಿದೆ. ಧನಂಜಯ ಲುಕ್ ಕಣ್ಣುಗಳನ್ನ ಸೆಳೆದರೆ ಹಿನ್ನಲೆ ಸಂಗೀತ ಚಿತ್ರದ ಬಗ್ಗೆ ಕುತೂಹಲ ಮೂಡಿಸುವಂತಿದೆ.

  ಚಿತ್ರೀಕರಣದಲ್ಲಿ ಧನಂಜಯ

  ಚಿತ್ರೀಕರಣದಲ್ಲಿ ಧನಂಜಯ

  ನಟ ಧನಂಜಯ ಈಗಾಗಲೇ 'ಭೈರವ-ಗೀತಾ' ಚಿತ್ರದ ಶೂಟಿಂಗ್ ನಲ್ಲಿ ಭಾಗಿ ಆಗಿದ್ದಾರೆ. ತೆಲುಗು ಹಾಗೂ ಕನ್ನಡ ಎರಡು ಭಾಷೆಯಲ್ಲಿ ಸಿನಿಮಾ ಬಿಡುಗಡೆ ಆಗಲಿದ್ದು ಕನ್ನಡದ ಸಂಭಾಷಣೆ ಬರೆಯುವ ಜವಾಬ್ದಾರಿ ಟಗರು ಖ್ಯಾತಿಯ ಮಾಸ್ತಿ ವಹಿಸಿಕೊಂಡಿದ್ದಾರೆ.

  English summary
  Kannada actor Dhananjay starrer Telugu movie motion poster was released. the film titled was Bhairava Geetha, Ram Gopal Varma producing the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X