For Quick Alerts
  ALLOW NOTIFICATIONS  
  For Daily Alerts

  ಹರಿ ಸಂತು-ಧನ್ವೀರ್ ಜೋಡಿಯ 'ಬೈ 2 ಲವ್' ಆರಂಭ

  |

  'ಬಜಾರ್' ಸಕ್ಸಸ್ ನಂತರ ಧನ್ವೀರ್ ಹೊಸ ಪ್ರಾಜೆಕ್ಟ್ ಅಧಿಕೃತವಾಗಿ ಆರಂಭವಾಗಿದೆ. ಹರಿಸಂತೋಷ್ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ಬೈ ಟು ಲವ್' ಚಿತ್ರದ ಮುಹೂರ್ತ ಇಂದು (ಡಿಸೆಂಬರ್ 25) ರಂದು ನೆರವೇರಿದೆ.

  ಸ್ಟಾರ್ಟ್ ಆಯ್ತು ಬೈ 2 ಲವ್ | Filmibeat Kannada

  ಕ್ರಿಸ್‌ಮಸ್ ಹಬ್ಬದ ವಿಶೇಷವಾಗಿ ಬಂಡಿಮಹಾಂಕಾಳ್ಳಮ್ಮನ ದೇವರ ಸನ್ನಿಧಿಯಲ್ಲಿ 'ಬೈ 2 ಲವ್' ಚಿತ್ರದ ಮುಹೂರ್ತ ನೆರವೇರಿದೆ.

  ಬಂಪರ್‌ಗೂ ಮೊದಲೇ ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಂಡ ಧನ್ವೀರ್!ಬಂಪರ್‌ಗೂ ಮೊದಲೇ ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಂಡ ಧನ್ವೀರ್!

  ಕೆವಿಎನ್ ಪ್ರೊಡಕ್ಷನ್ ಮತ್ತು ಸುಪ್ರೀತ್ ಪ್ರೊಡಕ್ಷನ್ ಜಂಟಿಯಾಗಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ಇಂದಿನ ಮುಹೂರ್ತ ಸಮಾರಂಭದಲ್ಲಿ ನಟ, ನಟಿ, ನಿರ್ದೇಶಕ, ನಿರ್ಮಾಪಕ ನಿಶಾ ವೆಂಕಟ್ ಹಾಗೂ ತಂತ್ರಜ್ಞರು ಪಾಲ್ಗೊಂಡಿದ್ದರು.

  ಧನ್ವೀರ್‌ಗೆ ಜೋಡಿಯಾಗಿ ಕಿಸ್ ಖ್ಯಾತಿಯ ಶ್ರೀಲೀಲಾ ನಟಿಸುತ್ತಿದ್ದಾರೆ. 'ಟಗರು' ಖ್ಯಾತಿಯ ಮಹಿಂದ್ರಾ ಸಿಂಹ ಅವರ ಛಾಯಾಗ್ರಾಹಣ, ಅಜನೀಶ್ ಲೋಕನಾಥ್ ಸಂಗೀತ ಹಾಗೂ ಕೆ ಎಂ ಪ್ರಕಾಶ್ ಸಂಕಲನವನ್ನು ಬೈ 2 ಲವ್ ಸಿನಿಮಾ ಒಳಗೊಂಡಿದೆ.

  ಅಂದ್ಹಾಗೆ, 'ಬಜಾರ್' ಸಿನಿಮಾ ಮುಗಿದ ಬಳಿಕ 'ಬಂಪರ್' ಎಂಬ ಚಿತ್ರವನ್ನು ಧನ್ವೀರ್ ಮತ್ತು ಹರಿ ಸಂತು ಘೋಷಿಸಿದ್ದರು. ಇದೀಗ, ಆ ಚಿತ್ರ ಶುರು ಮಾಡುವುದಕ್ಕೂ ಮುಂಚೆ ಮತ್ತೊಂದು ಸಿನಿಮಾ ಕೈಗೆತ್ತಿಕೊಂಡಿದ್ದಾರೆ.

  English summary
  Dhanveer and sreeleela to starrer 'By2 Love' starts today at bandi mankalamma temple.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X