»   » ಜಿಂಗ್ ಚಕ್ ಪ್ರಥಮ್ ಜೊತೆಯಾದ ಡಿಂಕ್ ಚಕ್ ಪೂಜಾ

ಜಿಂಗ್ ಚಕ್ ಪ್ರಥಮ್ ಜೊತೆಯಾದ ಡಿಂಕ್ ಚಕ್ ಪೂಜಾ

Posted By:
Subscribe to Filmibeat Kannada
ಪ್ರಥಮ್ ಜೊತೆಯಾದ ಡಿಂಕ್ ಚಕ್ ಪೂಜಾ | Filmibeat Kannada

ಬಿಗ್ ಬಾಸ್ ಮನೆ ಒಳಗೆ ಹೋಗಿ ರಾಜ್ಯದೆಲ್ಲೆಡೆ ಸುದ್ದಿ ಆಗಿದ್ದ ನಟ ನಿರ್ದೇಶಕ ಪ್ರಥಮ್ ಯಾವಾಗಲೂ ಸುದ್ದಿಯಲ್ಲಿ ಇರಲು ಬಯಸುವ ನಾಯಕ. ಏನೇ ಮಾಡಿದರು ವಿಭಿನ್ನ ರೀತಿಯಲ್ಲೇ ಮಾಡುವ ಪ್ರಥಮ್ ನುಡಿದಂತೆ ನಡೆದುಕೊಂಡಿದ್ದಾರೆ.

ನನ್ನ ಸಿನಿಮಾಗೆ ದೇಶದಲ್ಲೇ ಪ್ರಖ್ಯಾತಿ ಪಡೆದುಕೊಂಡಿರುವ ನಟಿಯನ್ನ ಕರೆ ತರುತ್ತೇನೆ ಎಂದು ಹೇಳಿದ್ದ ಪ್ರಥಮ್ ಆ ಕೆಲಸಕ್ಕೆ ಮುಂದಾಗಿದ್ದಾರೆ. ಅಭಿಮಾನಿಗಳಿಗೆ ತಮ್ಮ ಹುಟ್ಟುಹಬ್ಬದ ವಿಶೇಷವಾಗಿ ಸಿಹಿ ಸುದ್ದಿಯನ್ನ ನೀಡಿದ್ದಾರೆ.

ನ್ಯಾಷನಲ್ ಕ್ರಶ್ ಮರೆತು ಬಿಡಿ, ಈಗ ಬರ್ತಾರೆ ಇಂಟರ್ ನ್ಯಾಷನಲ್ ಕ್ರಶ್ !

ಪ್ರಥಮ್ ನಿರ್ದೇಶನ ಮಾಡುತ್ತಿರುವ 'ಪ್ರಥಮ್ಸ್ ಬಿಲ್ಡಪ್' ಚಿತ್ರಕ್ಕೆ ನಾಯಕಿಯನ್ನ ಆಯ್ಕೆ ಮಾಡಿದ್ದಾರೆ. ತನ್ನ ಸ್ಟೈಲ್ ಆಫ್ ಸಿಂಗಿಂಗ್ ನಿಂದಲೇ ಫೇಮಸ್ ಆಗಿದ್ದ ಡಿಂಗ್ ಚಕ್ ಪೂಜಾ ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾರಂಗವನ್ನ ಪ್ರವೇಶ ಮಾಡಲಿದ್ದಾರೆ. ಪ್ರಥಮ್ ಜೊತೆ ಅಭಿನಯಿಸುವ ಮೂಲಕ ಪೂಜಾ ಸ್ಯಾಂಡಲ್ ವುಡ್ ಗೆ ಎಂಟ್ರಿ ಪಡೆದುಕೊಳ್ಳುತ್ತಿದ್ದಾರೆ. ಈ ವಿಚಾರವನ್ನ ಪೂಜಾ ಅವರೇ ಎಲ್ಲರಿಗೂ ತಿಳಿಸಿದ್ದಾರೆ. ಹಾಗಾದರೆ ಸಿನಿಮಾ ಯಾವಾಗಿನಿಂದ ಶುರು? ಪೂಜಾ ಬೆಂಗಳೂರಿಗೆ ಬರುವುದು ಯಾವಾಗ? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ

ಕನ್ನಡ ಚಿತ್ರದಲ್ಲಿ ಡಿಂಕ್ ಚಕ್ ಪೂಜಾ

ಯೂಟ್ಯೂಬ್ ನಲ್ಲಿ ಸೆನ್ಸೇಷನ್ ಕ್ರಿಯೆಟ್ ಮಾಡಿ ಅಂತರಾಷ್ಟ್ರಿಯ ಮಟ್ಟದಲ್ಲಿ ಸುದ್ದಿ ಮಾಡಿದ್ದ ಗಾಯಕಿ ಡಿಂಕ್ ಚಕ್ ಪೂಜಾ ಈಗ ಸ್ಯಾಂಡಲ್ ವುಡ್ ನಲ್ಲಿ ಸುದ್ದಿ ಆಗುತ್ತಿದ್ದಾರೆ. ಪ್ರಥಮ್ ನಿರ್ದೇಶನ ಮಾಡಿ ನಿರ್ಮಾಣ ಮಾಡುತ್ತಿರುವ 'ಪ್ರಥಮ್ಸ್ ಬಿಲ್ಡಪ್' ಚಿತ್ರದಲ್ಲಿ ಅಭಿನಯಿಸಲು ಬರ್ತಿದ್ದಾರೆ.

ಕನ್ನಡ ಕಲಿತ ಡಿಂಕ್ ಚಕ್ ಪೂಜಾ

ಡಿಂಕ್ ಚಕ್ ಪೂಜಾ ಅಂತಾನೇ ಫೇಮಸ್ ಆಗಿರುವ ಈಕೆ ಕನ್ನಡ ಭಾಷೆಯನ್ನು ಕಲಿಯುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಪ್ರಥಮ್ ಹುಟ್ಟುಹಬ್ಬಕ್ಕೆ ಕನ್ನಡದಲ್ಲೇ ಶುಭಾಶಯ ಹೇಳುವ ಮೂಲಕ ಕನ್ನಡ ಸಿನಿಮಾದಲ್ಲಿ ಅಭಿನಯಿಸುತ್ತಿದ್ದೇನೆ ಎಂದಿದ್ದಾರೆ.

ಜಿಂಗ್ ಚಕ್ ಜೊತೆಯಲ್ಲಿ ಡಿಂಕ್ ಚಕ್

ಇದೇ ಮೊದಲ ಬಾರಿಗೆ ಡಿಂಕ್ ಚಕ್ ಪೂಜಾ ಕನ್ನಡ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು. 'ಪ್ರಥಮ್ಸ್ ಬಿಲ್ಡಪ್' ಚಿತ್ರದಲ್ಲಿ ಪ್ರಥಮ್ ಅವರಿಗೆ ಈಕೆಯೇ ನಾಯಕಿ. ಅಷ್ಟೇ ಅಲ್ಲದೆ 'ಪ್ರಥಮ್ಸ್ ಬಿಲ್ಡಪ್' ಸಿನಿಮಾದಲ್ಲಿ ಒಂದು ಹಾಡನ್ನು ಹಾಡುವ ಸಾಧ್ಯತೆಗಳು ಇವೆಯಂತೆ.

ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭ

ಶಿವರಾಜ್ ಕುಮಾರ್ ಅವರಿಂದ 'ಪ್ರಥಮ್ಸ್ ಬಿಲ್ಡಪ್' ಸಿನಿಮಾದ ಶೀರ್ಷಿಕೆಯನ್ನ ಅನಾವರಣ ಮಾಡಿಸಿದ್ದ ಪ್ರಥಮ್ ಮುಂದಿನವಾರದಿಂದ ಶೂಟಿಂಗ್ ಆರಂಭಿಸಲು ಮುಂದಾಗಿದ್ದಾರೆ. ಚಿತ್ರದ ಟೈಟಲ್ ಹಾಗೂ ನಾಯಕ , ನಾಯಕಿ ಬಗ್ಗೆ ಮಾತ್ರ ಸುದ್ದಿ ಹೊರ ಹಾಕಿರುವ ಪ್ರಥಮ್ ಚಿತ್ರದಲ್ಲಿ ಅಭಿನಯಿಸುವ ಮಿಕ್ಕ ಕಲಾವಿದರ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿಲ್ಲ.

English summary
Internationally-acclaimed Singer Dhinchak pooja' is acting in Pratham's Buildup Kannada film, Bigg Boss Pratham is directing the movie. Pratham's Buildup film shooting start form next week

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada