For Quick Alerts
  ALLOW NOTIFICATIONS  
  For Daily Alerts

  ಧ್ರುವ ಸರ್ಜಾ ಮತ್ತು ಪ್ರೇರಣ ನಿಶ್ಚಿತಾರ್ಥದಲ್ಲಿ ಕಂಡು ಬಂದ ವಿಶೇಷಗಳು

  |

  ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಪ್ರೇರಣಾ ಶಂಕರ್ ನಿಶ್ಚಿತಾರ್ಥ ಇಂದು ಬನಶಂಕರಿಯ ಧರ್ಮಗಿರಿ ದೇವಸ್ಥಾನದಲ್ಲಿ ನಡೆಯುತ್ತಿದೆ. ಶಾಸ್ತ್ರೋಕ್ತವಾಗಿ ಎಂಗೇಜ್ ಮೆಂಟ್ ಕಾರ್ಯಕ್ರಮ ಜರುಗುತ್ತಿದ್ದು, ನಟ ಅರ್ಜುನ್ ಸರ್ಜಾ ಕುಟುಂಬದವರು ಮತ್ತು ಪ್ರೇರಣಾ ಕುಟುಂಬದವರು ಭಾಗಿಯಾಗಿದ್ದಾರೆ.

  ಧ್ರುವ ಮತ್ತು ಪ್ರೇರಣಾ ನಿಶ್ಚಿತಾರ್ಥ ತುಂಬಾ ವಿಶೇಷವಾಗಿ ನಡೆಯುತ್ತಿದೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳ ಎಂಗೇಜ್ ಮೆಂಟ್ ಅಂದ್ರೆ, ಖಾಸಗಿ ಹೋಟೆಲ್ ಅಥವಾ ದೊಡ್ಡ ಕನ್ವೆನ್ಷನ್ ಹಾಲ್ ಗಳಲ್ಲಿ ವಿಜೃಂಭಣೆಯಿಂದ ಮಾಡ್ತಾರೆ. ಆದ್ರೆ, ಧ್ರುವ ಈ ವಿಷ್ಯದಲ್ಲಿ ಸ್ವಲ್ಪ ವಿಭಿನ್ನ.

  11 ಗಂಟೆಗೆ ಉಂಗುರು ಬದಲಿಸಿಕೊಳ್ಳಲಿರುವ ಧ್ರುವ-ಪ್ರೇರಣಾ

  ಶಾಸ್ತ್ರ, ಸಂಪ್ರದಾಯಗಳು ಜೊತೆ, ನಾದಸ್ವರದ ಮಧ್ಯೆ, ಬಂಧ-ಬಳಗದ ಸಮ್ಮುಖದಲ್ಲಿ ಧ್ರುವ ನಿಶ್ಚಿತಾರ್ಥ ನೆರವೇರುತ್ತಿದೆ. ನಿಶ್ಚಿತಾರ್ಥಕ್ಕಾಗಿ ವಿಶೇಷ ಸೆಟ್ ನಿರ್ಮಾಣ ಮಾಡಿ, ಗೋ ಪೂಜೆ ಮಾಡಿ, ನಾದಸ್ವರ, ಮಂತ್ರಘೋಷಗಳ ಮಧ್ಯೆ ಉಂಗುರು ಬದಲಿಸಿಕೊಳ್ಳುತ್ತಿದ್ದಾರೆ. ಹಾಗಿದ್ರೆ, ಧ್ರುವ ಎಂಗೇಜ್ ಮೆಂಟ್ ಸ್ಪೆಷಲ್ ಏನು? ಮುಂದೆ ಓದಿ.....

  ಆಂಜನೇಯ ದೇವಸ್ಥಾನದಲ್ಲಿ ನಿಶ್ಚಿತಾರ್ಥ

  ಆಂಜನೇಯ ದೇವಸ್ಥಾನದಲ್ಲಿ ನಿಶ್ಚಿತಾರ್ಥ

  ಸಾಮಾನ್ಯವಾಗಿ ಮದುವೆ, ನಿಶ್ಚಿತಾರ್ಥ ಕಾರ್ಯಕ್ರಮಗಳನ್ನ ಆಂಜನೇಯ ದೇವಸ್ಥಾನದಲ್ಲಿ ಮಾಡುವುದು ತೀರಾ ಕಡಿಮೆ. ಆದ್ರೆ, ಈ ವಿಚಾರದಲ್ಲಿ ಸರ್ಜಾ ಕುಟುಂಬ ವಿಶೇಷವಾಗಿದೆ. ಮೊದಲಿನಿಂದಲೂ ಆಂಜನೇಯನ ಪರಮ ಭಕ್ತರಾಗಿರುವ ಸರ್ಜಾ ಕುಟುಂಬ, ಧ್ರುವ ನಿಶ್ಚಿತಾರ್ಥವನ್ನ ಆಂಜನೇಯನ ಸನ್ನಿಧಾನದಲ್ಲಿ ನೆರವೇರಿಸುತ್ತಿದೆ. ಬನಶಂಕರಿಯ ಧರ್ಮಗಿರಿಯ ಆಂಜನೇಯ ದೇವಸ್ಥಾನದಲ್ಲಿ ಇವರಿಬ್ಬರ ಎಂಗೇಜ್ ಮೆಂಟ್ ನಡೆಯುತ್ತಿದೆ.

  ದೇಸಿ ಸಂಪ್ರದಾಯದಂತೆ ಸೆಟ್ ನಿರ್ಮಾಣ

  ದೇಸಿ ಸಂಪ್ರದಾಯದಂತೆ ಸೆಟ್ ನಿರ್ಮಾಣ

  ನಟ, ನಿರ್ದೇಶಕ ಕಲಾವಿದ ಅರುಣ್ ಸಾಗರ್ ಅವ್ರು ಧ್ರುವ ಎಂಗೇಜ್ ಮೆಂಟ್ ಗಾಗಿ ವಿಶೇಷವಾದ ಸೆಟ್ ನಿರ್ಮಾಣ ಮಾಡಿದ್ದಾರೆ. ದೇಸಿ ಸಂಪ್ರದಾಯದಂತೆ ಸಾವಿರಾರು ತೆಂಗಿನ ಗರಿಗಳನ್ನು ಬಳಸಿಕೊಂಡು ಮಂಟಪ ನಿರ್ಮಾಣ ಮಾಡಿದ್ದಾರೆ. ಇಡೀ ದೇವಸ್ಥಾನ ಸಂಪೂರ್ಣವಾಗಿ ಹಚ್ಚ ಹಸಿರಿನಿಂದ ಶೃಂಗಾರಗೊಳಿಸಿದ್ದು, ಪರಿಸರ ದೇವತೆಗಳ ಆಶೀರ್ವಾದದೊಂದಿಗೆ ಸಂಭ್ರಮ ನಡೆಯುತ್ತಿದೆ.

  ಧ್ರುವಗೆ ಪ್ರೀತಿಯ ಪಾಠ ಮಾಡಿದ ಈ ಟೀಚರ್ ಯಾರು?

  ಗೋವುಗಳ ಪೂಜೆ

  ಗೋವುಗಳ ಪೂಜೆ

  ಅರ್ಜುನ್ ಸರ್ಜಾ ಹುಟ್ಟುಹಬ್ಬದ ವಿಶೇಷವಾಗಿ ಮಗಳು ಐಶ್ವರ್ಯಾ, ಗಿರ್ ತಳಿಯ ಹಸುವೊಂದನ್ನು ಉಡುಗೊರೆಯಾಗಿ ನೀಡಿದ್ದರು. ಇದೀಗ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಗೋವುಗಳನ್ನ ಕರಿಸಿ, ಗೋ ಪೂಜೆ ಮಾಡಲಾಗ್ತಿದೆ. ಗೋವಿನಲ್ಲಿ ಮುಕ್ಕೋಟಿ ದೇವರು ಇರ್ತಾರೆ ಎಂಬ ನಂಬಿಕೆ ಹಿಂದೂ ಸಂಪ್ರದಾಯದಲ್ಲಿದೆ.

  ನಟ ಧ್ರುವ ಸರ್ಜಾ - ಪ್ರೇರಣಾ ನಿಶ್ಚಿತಾರ್ಥಕ್ಕೆ ತಯಾ

  ವಜ್ರದ ವಿಶೇಷವೇನು?

  ವಜ್ರದ ವಿಶೇಷವೇನು?

  ಬಾಲ್ಯ ಗೆಳತಿಯನ್ನ ಮದುವೆಯಾಗುತ್ತಿರುವ ಧ್ರುವ ಸರ್ಜಾ, ನಿಶ್ಚಿತಾರ್ಥಕ್ಕಾಗಿ ದುಬಾರಿ ಬೆಲೆಯ ವಜ್ರದ ಉಂಗುರವನ್ನು ಖರೀದಿಸಿದ್ದಾರೆ. ಬರೋಬ್ಬರಿ 24 ಲಕ್ಷ ರೂ. ಮೌಲ್ಯದ ಉಂಗುರವನ್ನ ವಜ್ರದ ಹರಳುಗಳಿಂದಲೇ ಮಾಡಲಾಗಿದೆ. 1.45 ಕ್ಯಾರೆಟ್ ​ನ ಒಂದು ದೊಡ್ಡ ಹರಳು ಸೇರಿ ಒಟ್ಟು 26 ವಜ್ರದ ಹರಳುಗಳು ಉಂಗುರದಲ್ಲಿವೆ.

  ನಿಶ್ಚಿತಾರ್ಥಕ್ಕಾಗಿ 21 ಲಕ್ಷ ಮೌಲ್ಯದ ವಜ್ರದ ಉಂಗುರ ಖರೀದಿಸಿದ ಧ್ರುವ ಸರ್ಜಾ

  English summary
  Kannada actor dhruva sarja and prerana shankar engagement held on today (december 9th). here is the speciality of engagement.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X