For Quick Alerts
  ALLOW NOTIFICATIONS  
  For Daily Alerts

  ಧ್ರುವ ಸರ್ಜಾ ದಂಪತಿಗೆ ಕೊರೊನಾ ನೆಗೆಟಿವ್: ಅಣ್ಣನ ಆಶೀರ್ವಾದ ಎಂದ ನಟ

  |

  ನಟ ಧ್ರುವ ಸರ್ಜಾ ಮತ್ತು ಪತ್ನಿ ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿದ್ದಾರೆ. ಹೀಗೆಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

  Danish Sait ಬಡಿಸಲಿರುವ French Biryani ಹಿಂದಿನ ಕಥೆ ಕೇಳಿ | Filmibeat Kannada

  ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾ ಅವರಿಗೆ ಜುಲೈ 15 ಕೊರೊನಾ ವೈರಸ್ ಪಾಸಿಟಿವ್ ಆಗಿತ್ತು. ಅಂದೇ ಅವರಿಬ್ಬರು ಆಸ್ಪತ್ರೆಗೆ ದಾಖಲಾಗಿದ್ದರು.

  ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಸರ್ಜಾಗೂ ಕೊರೊನಾ ಪಾಸಿಟಿವ್ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಸರ್ಜಾಗೂ ಕೊರೊನಾ ಪಾಸಿಟಿವ್

  ನಂತರ ಕೇವಲ ಎರಡೇ ದಿನಕ್ಕೆ ಅಂದರೆ ಜುಲೈ 17 ಕ್ಕೆ ಆಸ್ಪತ್ರೆಯಿಂದ ಇಬ್ಬರೂ ಡಿಸ್ಚಾರ್ಜ್ ಆಗಿದ್ದರು. ಅದೇ ದಿನ ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದು ಮಾತನಾಡಿದ್ದ ಧ್ರುವ ಸರ್ಜಾ ತಾವು ಹಾಗೂ ತಮ್ಮ ಪತ್ನಿ ಪ್ರೇರಣ ಆರೋಗ್ಯದಿಂದ್ದಿವೇ ಎಂದು ಹೇಳಿದ್ದರು.

  ಕೊರೊನಾ ವರದಿ ನೆಗೆಟಿವ್ ಬಂದಿದೆ

  ಕೊರೊನಾ ವರದಿ ನೆಗೆಟಿವ್ ಬಂದಿದೆ

  ಆದರೆ ಇಂದು ಮತ್ತೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡಿರುವ ಧ್ರುವ ಸರ್ಜಾ, 'ನಾನು ಮತ್ತು ಪತ್ನಿ ಕೊರೊನಾ ಪರೀಕ್ಷೆಗೆ ಒಳಗಾಗಿದ್ದು, ನೆಗೆಟಿವ್ ವರದಿ ಬಂದಿದೆ' ಎಂದು ಹೇಳಿದ್ದಾರೆ.

  'ಅಣ್ಣನ ಆಶೀರ್ವಾದ ನಮ್ಮ ಮೇಲಿದೆ'

  'ಅಣ್ಣನ ಆಶೀರ್ವಾದ ನಮ್ಮ ಮೇಲಿದೆ'

  'ನಿಮ್ಮ ಎಲ್ಲ ಪ್ರಾರ್ಥನೆಗಳಿಗೆ ಹಾಗೂ ನಮ್ಮ ಅಣ್ಣನ ಆಶೀರ್ವಾದ ನಮ್ಮ ಮೇಲಿದ್ದಿದ್ದರಿಂದ ಆರೋಗ್ಯ ಇಷ್ಟು ಬೇಗ ಸುಧಾರಿಸಿದೆ, ಎಲ್ಲಾ ಕಠಿಣ ಘಟ್ಟಗಳಲ್ಲಿ ನಮ್ಮ ಜೊತೆ ನಿಲ್ಲುವ ಮಾವ ಅರ್ಜುನ್ ಸರ್ಜಾ ಅವರಿಗೆ ಧನ್ಯವಾದಗಳು' ಎಂದು ಧ್ರುವ ಹೇಳಿದ್ದಾರೆ.

  ನಟ ಧ್ರುವ ಸರ್ಜಾ ಮತ್ತು ಪತ್ನಿಗೆ ಕೊರೊನಾ ವೈರಸ್ ಸೋಂಕುನಟ ಧ್ರುವ ಸರ್ಜಾ ಮತ್ತು ಪತ್ನಿಗೆ ಕೊರೊನಾ ವೈರಸ್ ಸೋಂಕು

  ವೈದ್ಯರಿಗೆ ವಿಶೇಷ ಧನ್ಯವಾದ

  ವೈದ್ಯರಿಗೆ ವಿಶೇಷ ಧನ್ಯವಾದ

  'ನಮ್ಮ ವೈದ್ಯ ಸುರ್ಜಿತ್ ಪಾಲ್ ಸಿಂಗ್ ಹಾಗೂ ಆರೋಗ್ಯ ಸಹಾಯಕ ರಾಜ್‌ಕುಮಾರ್ ಎ ಅವರಿಗೂ ವಿಶೇಷ ಧನ್ಯವಾದಗಳು' ಎಂದು ತಮಗೆ ಸಹಾಯ ಮಾಡಿದವರನ್ನು ನೆನಪಿಸಿಕೊಂಡಿದ್ದಾರೆ ಧ್ರುವ ಸರ್ಜಾ.

  ಅರ್ಜುನ್ ಸರ್ಜಾ ಪುತ್ರಿಗೆ ಕೊರೊನಾ

  ಅರ್ಜುನ್ ಸರ್ಜಾ ಪುತ್ರಿಗೆ ಕೊರೊನಾ

  ಅರ್ಜುನ್ ಸರ್ಜಾ ಅವರ ಪುತ್ರಿ ಐಶ್ವರ್ಯಾ ಸರ್ಜಾ ಅವರಿಗೂ ಕೊರೊನಾ ಪಾಸಿಟಿವ್ ಆಗಿದ್ದು, ವೈದ್ಯರ ಸಲಹೆ ಮೇರೆಗೆ ಮನೆಯಲ್ಲೇ ಐಸೋಲೇಶನ್‌ಗೆ ಒಳಗಾಗಿದ್ದಾರೆ.

  ಕೊರೊನಾ ಗೆದ್ದು ಬಂದ ಧ್ರುವ ಸರ್ಜಾ ಹೇಳಿದ ಕಿವಿಮಾತುಕೊರೊನಾ ಗೆದ್ದು ಬಂದ ಧ್ರುವ ಸರ್ಜಾ ಹೇಳಿದ ಕಿವಿಮಾತು

  English summary
  Actor Dhruva Sarja and his wife Prerana tested coronavirus negative. He thanked fans, doctors, Arjun Sarja and his late brother Chiranjeevi Sarja.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X