For Quick Alerts
  ALLOW NOTIFICATIONS  
  For Daily Alerts

  ಧ್ರುವ ಸರ್ಜಾ ಮೊದಲ ಸಂಭಾವನೆ ಎಷ್ಟು? ಅದರಲ್ಲಿ ಏನ್ ಮಾಡಿದ್ರು.?

  By Bharath Kumar
  |
  ಧ್ರುವ ಸರ್ಜಾಗೆ ಸಿಕ್ಕ ಮೊದಲ ಸಂಭಾವನೆ ಎಷ್ಟು ಹಾಗು ಆ ದುಡ್ಡನ್ನ ಏನ್ ಮಾಡಿದ್ರು? | Filmibeat Kannada

  ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕನ್ನಡದ ಬಹುಬೇಡಿಕೆಯ ನಟ. 'ಅದ್ಧೂರಿ', 'ಬಹುದ್ದೂರ್' ಮತ್ತು 'ಭರ್ಜರಿ' ಚಿತ್ರಗಳ ನಂತರ ಹ್ಯಾಟ್ರಿಕ್ ಬಾರಿಸಿ ಬಾಕ್ಸ್ ಆಫೀಸ್ ನಲ್ಲಿ ಹೊಸ ಅಧಿಪತ್ಯ ಸ್ಥಾಪನೆ ಮಾಡಿಕೊಂಡಿದ್ದಾರೆ.

  ಇದರ ಪರಿಣಾಮ ಧ್ರುವ ಸರ್ಜಾ ಸಿನಿಮಾಗಳಿಗೆ ಈಗ ಕೋಟಿಗಟ್ಟಲೆ ಬೇಡಿಕೆ ಇದೆ. ಅಷ್ಟೇ ಅಲ್ಲದೇ, ಧ್ರುವ ಸರ್ಜಾ ಕಾಲ್ ಶೀಟ್ ಪಡೆಯೋಕು ಕೂಡ ನಿರ್ಮಾಪಕರ ಕಷ್ಟಪಡಬೇಕಾಗಿದೆ ಎನ್ನಲಾಗಿದೆ.

  ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಯಾರ ಕಣ್ಣಿಗೂ ಬೀಳ್ತಿಲ್ಲ ಯಾಕೆ.? ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಯಾರ ಕಣ್ಣಿಗೂ ಬೀಳ್ತಿಲ್ಲ ಯಾಕೆ.?

  ಧ್ರುವ ಸರ್ಜಾ ಅವರು ಸಂಭಾವನೆ ಮೊದಲಿಗಿಂತ ಹೆಚ್ಚಾಗಿದೆ. ದರ್ಶನ್, ಸುದೀಪ್, ಯಶ್ ಗೆ ಸಮನಾಗಿ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಸುದ್ದಿಗಳು ಚರ್ಚೆಯಾಗಿದ್ದವು. ಧ್ರುವ ಈಗ ಎಷ್ಟು ಕೋಟಿ ಸಂಭಾವನೆ ಪಡೆಯುತ್ತಾರೆ ಎಂಬುದು ಗೌಪ್ಯವಾಗಿದ್ದರೂ, ಅವರ ಪಡೆದ ಮೊದಲ ಸಂಭಾವನೆ ಎಷ್ಟು ಎಂಬುದನ್ನ ಮಾತ್ರ ಬಿಟ್ಟುಕೊಟ್ಟಿದ್ದಾರೆ. ಹಾಗಿದ್ರೆ, ಧ್ರುವ ಸರ್ಜಾ ಸಂಭಾವನೆ ಎಷ್ಟು.? ಸಿಕ್ಕಿದ ಹಣದಲ್ಲಿ ಏನ್ ಮಾಡಿದ್ರು ಅಂತ ಮುಂದೆ ಓದಿ....

  ಧ್ರುವ ಸರ್ಜಾ ಮೊದಲ ಸಂಭಾವನೆ

  ಧ್ರುವ ಸರ್ಜಾ ಮೊದಲ ಸಂಭಾವನೆ

  ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಮೊದಲ ಚಿತ್ರಕ್ಕೆ ಪಡೆದ ಸಂಭಾವನೆ 50 ಸಾವಿರದ ಒಂದು ರೂಪಾಯಿ. ಇದು ಸುಮಾರು ಆರೇಳು ವರ್ಷಗಳ ಹಿಂದೆ. ಧ್ರುವ ಅಭಿನಯದ ಮೊದಲ ಸಿನಿಮಾ 'ಅದ್ಧೂರಿ'. ಎಪಿ ಅರ್ಜುನ್ ನಿರ್ದೇಶನದ 'ಅದ್ಧೂರಿ' ಸಿನಿಮಾವನ್ನ ಕೀರ್ತಿ ಸ್ವಾಮಿ ಮತ್ತು ಶಂಕರ್ ರೆಡ್ಡಿ ಎಂಬುವವರು ನಿರ್ಮಾಣ ಮಾಡಿದ್ದರು.

  ಆ ಸಂಭಾವನೆ ಹಣವನ್ನ ಏನು ಮಾಡಿದ್ರು.?

  ಆ ಸಂಭಾವನೆ ಹಣವನ್ನ ಏನು ಮಾಡಿದ್ರು.?

  ಧ್ರುವ ಸರ್ಜಾ ಅವರಿಗೆ ಸಿಕ್ಕ ಮೊದಲ ಸಂಭಾವನೆ ಐದು ನಿಮಿಷದಲ್ಲಿ ಖರ್ಚಾಯಿತು. ಧ್ರುವ ತಮ್ಮ ತಂದೆ 5 ಸಾವಿರ, ಅಜ್ಜಿಗೆ 5 ಸಾವಿರ, ಅಂಕಲ್ ಅರ್ಜುನ್ ಸರ್ಜಾ ಅವರಿಗೆ 5 ಸಾವಿರ ನೀಡಿದ್ರಂತೆ. ನಂತರ ಅರ್ಜುನ್ ಸರ್ಜಾ ಅವರು ಬಟ್ಟೆ ತಗೋ ಎಂದು ಹೇಳಿ ಕಳಿಸಿದ್ದರು ಎಂದು ಧ್ರುವ ಸರ್ಜಾ ಸಂದರ್ಶನವೊಂದರದಲ್ಲಿ ಹೇಳಿಕೊಂಡಿದ್ದಾರೆ.

  ನಾನವನಲ್ಲ.. ನಾನವನಲ್ಲ.. ಅಂತಿದ್ದಾರೆ ಧ್ರುವ ಸರ್ಜಾನಾನವನಲ್ಲ.. ನಾನವನಲ್ಲ.. ಅಂತಿದ್ದಾರೆ ಧ್ರುವ ಸರ್ಜಾ

  ಈಗ ದುಬಾರಿ ನಟ

  ಈಗ ದುಬಾರಿ ನಟ

  ಒಂದು ಸಮಯದಲ್ಲಿ ಕೇವಲ 50 ಸಾವಿರ ಪಡೆದುಕೊಂಡಿದ್ದ ನಟ ಈಗ ಕೋಟ್ಯಾಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಈ ಹಿಂದೆ ವರದಿಯಾಗಿದ್ದ ಪ್ರಕಾರ ಒಂದು ಚಿತ್ರಕ್ಕೆ 6 ಕೋಟಿ ತೆಗೆದುಕೊಳ್ಳುತ್ತಾರೆ ಎನ್ನಲಾಗಿತ್ತು. ಆದ್ರೆ, ಆ ಬಗ್ಗೆ ಯಾವುದೇ ಅಧಿಕೃತವಾಗಿಲ್ಲ.

  'ಪೊಗರು' ಚಿತ್ರದಲ್ಲಿ ಬ್ಯುಸಿ

  'ಪೊಗರು' ಚಿತ್ರದಲ್ಲಿ ಬ್ಯುಸಿ

  ನಂದ ಕಿಶೋರ್ ನಿರ್ದೇಶನದ 'ಪೊಗರು' ಚಿತ್ರದಲ್ಲಿ ಧ್ರುವ ಸರ್ಜಾ ಅಭಿನಯಿಸುತ್ತಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಮತ್ತಷ್ಟು ಸನ್ನಿವೇಶಗಳನ್ನ ಬಾಕಿ ಉಳಿಸಿಕೊಂಡಿದೆಯಂತೆ. ಅದನ್ನ ಮುಗಿಸಿ ಆದಷ್ಟೂ ಬೇಗ ತೆರೆಮೇಲೆ ಬರುವ ತಯಾರಿ ನಡೆಸುತ್ತಿದೆ.

  English summary
  The young action prince with hat trick crown Dhruva Sarja is in news on remuneration aspect. In the media it was reported that the remuneration of Dhruva Sarja after Bharjari’s success is Rs.6 crores. but you know, Dhruva sarja first remuneration.? read the story to know.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X