»   » ಗಾಂಧಿನಗರ ಬೆಚ್ಚಿಬೀಳಿಸೋಕೆ ಬರ್ತಿದ್ದಾಳೆ ಹಾರಿಕ

ಗಾಂಧಿನಗರ ಬೆಚ್ಚಿಬೀಳಿಸೋಕೆ ಬರ್ತಿದ್ದಾಳೆ ಹಾರಿಕ

Posted By:
Subscribe to Filmibeat Kannada

ಇನ್ನು ಕೆಲವೇ ದಿನಗಳಲ್ಲಿ ಕನ್ನಡಿಗರು ಬೆಚ್ಚಿಬೀಳಲಿದ್ದಾರಂತೆ. ಕೂತಲ್ಲೇ ಸಿನಿಪ್ರಿಯರು ಬೆವತು ನೀರಾಗುವ ಪರಿಸ್ಥಿತಿ ಉಂಟಾಗಲಿದ್ಯಂತೆ. ನಿದ್ದೆ ಮಾಡೋಕೂ ಆಗದೆ ಕನಸಲ್ಲೂ ದಿಗಿಲು ಶುರುವಾಗುತ್ತಂತೆ. ಇದಕ್ಕೆಲ್ಲಾ ಕಾರಣ ಯಾರು ಗೊತ್ತಾ? 'ಹಾರಿಕ' ಅನ್ನುವ ಹೊಸ ಪ್ರೇತ!

ಭೂತ-ಪ್ರೇತದಂತಹ ಮೈಜುಂ ಅನಿಸುವ ಕಥೆಗಳನ್ನಿಟ್ಟುಕೊಂಡು ಗಾಂಧಿನಗರದಲ್ಲಿ ರೆಡಿಯಾಗುವ ಸಿನಿಮಾಗಳು ತೀರಾ ಕಡಿಮೆ. ಅಂತದ್ರಲ್ಲಿ ಹೊಚ್ಚ ಹೊಸ ತಂಡವೊಂದು 'ಹಾರಿಕ' ಅನ್ನುವ ಔಟ್ ಅಂಡ್ ಔಟ್ ಹಾರರ್ ಸಿನಿಮಾ ರೆಡಿಮಾಡುವುದಕ್ಕೆ ಚಾಲನೆ ನೀಡಿದೆ.

Dhruva Sarja gives kick-start to Horror-flick Harika1

ವಿಶೇಷ ಅಂದ್ರೆ ಈ ಹಾರರ್ ಚಿತ್ರಕ್ಕೆ ನಾಯಕನಾಗಿರುವುದು ಉದಯ ಮ್ಯೂಸಿಕ್ ವಾಹಿನಿಯ ಆಂಕರ್ ಪವನ್ ಕುಮಾರ್ ಅಲಿಯಾಸ್ ಪಚ್ಚಿ ಪವನ್. 'ಬೆಸುಗೆ' ಅನ್ನುವ ಕಾರ್ಯಕ್ರಮದಿಂದ ಬ್ರೇಕಪ್ ಆದ ಜೋಡಿಗಳನ್ನು ಒಂದು ಮಾಡುತ್ತಿದ್ದ ಪವನ್, ಲವ್ ಸ್ಟೋರಿ ಸಿನಿಮಾ ಬಿಟ್ಟು ಹಾರರ್ ಚಿತ್ರಕ್ಕೆ ನಾಯಕನಾಗಿ ಆಯ್ಕೆಯಾಗಿದ್ದಾರೆ.

ಈಗಾಗಲೇ 'ಒಂದು ರೂಪಾಯಿಯಲ್ಲಿ ಎರಡು ಪ್ರೀತಿ', 'ಹುಚ್ಚುಡುಗ್ರು', 'ಮಂಡ್ಯ ಸ್ಟಾರ್' ಚಿತ್ರಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿರುವ ಪವನ್, 'ಹಾರಿಕ' ಮೂಲಕ ನಾಯಕನ ಪಟ್ಟಕ್ಕೆ ಬಡ್ತಿಪಡೆದಿದ್ದಾರೆ. ಪವನ್ ಗೆ ಜೋಡಿಯಾಗಿ ಅರ್ಪಿತಾ ಅಭಿನಯಿಸಲಿದ್ದಾರೆ.

Dhruva Sarja gives kick-start to Horror-flick Harika2

ನಂಜುಂಡೇಶ್ವರ ಮೂವಿ ಮೇಕರ್ ಅನ್ನುವ ಬ್ಯಾನರ್ ನಡಿ ಗೋಕಲ್ ರಘು ನಿರ್ಮಿಸುತ್ತಿರುವ 'ಹಾರಿಕ' ಚಿತ್ರಕ್ಕೆ ಯುವ ಪ್ರತಿಭೆ ಕಾರ್ತಿಕ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಎರಡು ಕುಟುಂಬಗಳು ಮತ್ತು ಎರಡು ಪುಟಾಣಿಗಳ ಸುತ್ತ ಸುತ್ತುವ ಹಾರಿಕ ಚಿತ್ರಕಥೆಯಲ್ಲಿ ರಾತ್ರಿ 10 ಗಂಟೆಯ ನಂತ್ರ ನಡೆಯುವ ಭಯಾನಕ ಘಟನೆಗಳೇ ಚಿತ್ರದ ಹೈಲೈಟ್.

ಧೃವ ಸರ್ಜಾ ಮುಹೂರ್ತಕ್ಕೆ ಚಾಲನೆ ನೀಡಿದ್ದು, ಇದೇ ಬುಧವಾರದಿಂದ ಚಿತ್ರ ಸೆಟ್ಟೇರಲಿದೆ. ಚಿಕ್ಕಮಗಳೂರು ಮತ್ತು ಉಡುಪಿಯಲ್ಲಿ ಶೂಟಿಂಗ್ ನಡೆಯಲಿದ್ದು, ಮುಂದಿನ ವರ್ಷ ತೆರೆಗೆ ತರುವ ಪ್ಲಾನ್ ನಲ್ಲಿದೆ ಚಿತ್ರತಂಡ. (ಫಿಲ್ಮಿಬೀಟ್ ಕನ್ನಡ)

English summary
Dhruva Sarja gives kick-start to Kannada Horror-flick Harika. New comer Karthik Directorial Debute Harika, starring Udaya Music Anchor Pavan Kumar and Arpitha.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada