For Quick Alerts
  ALLOW NOTIFICATIONS  
  For Daily Alerts

  'ಅವರ ಕರ್ಮ ಅವರಿಗೆ ಧಕ್ಕುತ್ತದೆ' ಶ್ರುತಿ ಹರಿಹರನ್‌ಗೆ ಪರೋಕ್ಷ ಟಾಂಗ್: ಧ್ರುವ ಶೇರ್ ಮಾಡಿದ ವೀಡಿಯೋದಲ್ಲೇನಿದೆ?

  |

  2018ರ ಮೀಟೂ ಅಭಿಯಾನ ವಿಶ್ವದೆಲ್ಲೆಡೆ ಭಾರೀ ಸಂಚಲನ ಸೃಷ್ಟಿಸಿತ್ತು. ಇದೇ ಅಭಿಯಾನ ಕರ್ನಾಟಕದಲ್ಲೂ ಭಾರಿ ಸಂಚನ ಸೃಷ್ಟಿಸಿತ್ತು. ನಟಿ ಶೃತಿ ಹರಿಹರನ್ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ನೀಡಿದ ಆರೋಪ ಮಾಡಿದ್ದರು. ಈ ಆರೋಪ ಹಲವು ವಿವಾದಕ್ಕೂ ಕಾರಣವಾಗಿತ್ತು. ಅಲ್ಲದೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದರು. ಇದೇ ಕೇಸ್ ಬಗ್ಗೆ ಈಗ ಮತ್ತೆ ಚರ್ಚೆಯಾಗುತ್ತಿದೆ.

  ಮೂರು ವರ್ಷಗಳ ಬಳಿಕ ಸೂಕ್ತ ಸಾಕ್ಷಿಗಳು ಸಿಗದ ಕಾರಣ ಪೊಲೀಸರು ಬಿ ರಿಪೋರ್ಟ್ ಸಿದ್ಧಪಡಿಸಿದ್ದಾರೆ. ಇದಕ್ಕೂ ಮುನ್ನ ನಟಿ ಶ್ರುತಿ ಹರಿಹರನ್‌ಗೆ ಪೊಲೀಸರು ನೋಟಿಸ್ ನೀಡಿದ್ದು, 'ವಿಸ್ಮಯ' ನಟಿಗೆ ಹಿನ್ನೆಡೆಯಾಗಿದೆ ಎನ್ನಲಾಗಿದೆ. ಈ ಬೆನ್ನಲೇ ಕೆಲವು ದಿನಗಳ ಹಿಂದೆ ಧ್ರುವ ಸರ್ಜಾ ಹಾಗೂ ಮೇಘನಾ ರಾಜ್ ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದರು. ಈಗ ಧ್ರುವ ಸರ್ಜಾ ಮತ್ತೊಂದು ವಿಡಿಯೋವನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋ ಈಗ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

  'ಕಾಂಪ್ರಮೈಸ್ ಅನ್ನುವ ವರ್ಡ್ ಇಲ್ಲಿ ಇಲ್ಲವೇ ಇಲ್ಲ'

  'ಕಾಂಪ್ರಮೈಸ್ ಅನ್ನುವ ವರ್ಡ್ ಇಲ್ಲಿ ಇಲ್ಲವೇ ಇಲ್ಲ'

  2018ರಲ್ಲಿ ಮೀಟೂ ಪ್ರಕರಣದ ಅಭಿಯಾನದಲ್ಲಿ ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಲೈಂಗಿಕ ಕಿರುಕುಳ ಆರೋಪ ಬಿಸಿಬಿಸಿ ಚರ್ಚೆಗೆ ಕಾರಣವಾಗಿತ್ತು. ಶ್ರುತಿ ಹರಿಹರನ್ ಆರೋಪವನ್ನು ಸರ್ಜಾ ಕುಟುಂಬ ತೀವ್ರವಾಗಿ ಖಂಡಿಸಿತ್ತು. ಒಂದು ಕಡೆ ಪೊಲೀಸ್ ಸ್ಟೇಷನ್‌ನಲ್ಲಿ ಕೇಸ್ ದಾಖಲಾಗಿದ್ದರೆ. ಇನ್ನೊಂದು ಕಡೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಂಧಾನ ನಡೆಸಲು ಪ್ರಯತ್ನ ನಡೆಸಲಾಗುತ್ತು. ಫಿಲ್ಮ್ ಚೇಂಬರ್ ಪದಾಧಿಕಾರಿಗಳು ಹಾಗೂ ಅಂಬರೀಶ್ ನೇತೃತ್ವದಲ್ಲಿ ಇಬ್ಬರ ಜೊತೆ ಪ್ರತ್ಯೇಕವಾಗಿ ಮಾತುಕತೆ ನಡೆಸಲಾಗಿತ್ತು. ಆದರೆ, ಸಂಧಾನಕ್ಕೆ ಶ್ರುತಿ ಹಾಗೂ ಅರ್ಜುನ್ ಸರ್ಜಾ ಇಬ್ಬರೂ ಒಪ್ಪಿರಲಿಲ್ಲ. ಆ ವೇಳೆ ಅರ್ಜುನ್ ಸರ್ಜಾ ಮಾಧ್ಯಮಗಳಿಗೆ 'ಕಾಂಪ್ರಮೈಸ್ ಅನ್ನುವ ಮಾತೇ ಇಲ್ಲ' ಅಂತ ಹೇಳಿಕೆ ನೀಡಿದ್ದರು. ಅದೇ ವಿಡಿಯೋವನ್ನು ಧ್ರುವ ಸರ್ಜಾ ಮತ್ತೆ ಶೇರ್ ಮಾಡಿದ್ದಾರೆ.

  ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇ ಬೇಕು

  "ಎಲ್ಲರಿಗೂ ಇದೊಂದು ಉದಾಹರಣೆಯಾಗಬೇಕು. ಎಷ್ಟೋ ಜನ ಅಮಾಯಕರು ಇದಕ್ಕೆ ಬಲಿಯಾಗಬಾರದು. ನಾನು ಓಕೆ ತಡೆದುಕೊಳ್ಳುತ್ತೇನೆ. ತಡೆದುಕೊಳ್ಳದೆ ಇರುವವರು ತುಂಬಾ ಜನ ಇರುತ್ತಾರೆ. ಈಗಾಗಲೇ ಇದು ಕೋರ್ಟ್‌ಗೆ ಹೋಗಿ ಆಗಿದೆ. ನಾನು ತಪ್ಪು ಮಾಡಿದರೆ ನನಗೆ, ಬೇರೆಯವರು ತಪ್ಪು ಮಾಡಿದರೆ ಅವರಿಗೆ. ಶಿಕ್ಷೆ ಅನ್ನುವುದು ಖಂಡಿತ ಆಗಬೇಕು." ಎಂದು ಫಿಲ್ಮ್ ಚೇಂಬರ್‌ನಲ್ಲಿ ಅರ್ಜುನ್ ಹೇಳಿದ್ದರು. ಅದೇ ವಿಡಿಯೋವನ್ನು ಧ್ರುವ ಸರ್ಜಾ ಶೇರ್ ಮಾಡಿ ಸರ್ಜಾ ಕುಟುಂಬದ ಬೆಂಬಲಕ್ಕೆ ನಿಂತಿದ್ದವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

  ಶ್ರುತಿ ಅರ್ಜುನ್ ಸರ್ಜಾ ಸಂಧಾನ ವಿಫಲ: ಅಂಬಿಗೆ ಸೋಲು

  ಶ್ರುತಿ ಅರ್ಜುನ್ ಸರ್ಜಾ ಸಂಧಾನ ವಿಫಲ: ಅಂಬಿಗೆ ಸೋಲು

  ಮೀಟೂ ಪ್ರಕರಣದಲ್ಲಿ ಶ್ರುತಿ ಮಾಡಿದ್ದ ಆರೋಪದಿಂದ ಚಿತ್ರರಂಗ ಬೆಚ್ಚಿಬಿದ್ದಿತ್ತು. ಸರ್ಜಾ ಅಭಿಮಾನಿಗಳು ರೊಚ್ಚಿಗೆದ್ದಿದ್ದರು. ಹೀಗಾಗಿ ಅಂಬರೀಷ್ ಮುಂದಾಳತ್ವದಲ್ಲಿ ಸಂಧಾನ ಸಭೆ ನಡೆದಿತ್ತು. ಆದರೆ, ರೆಬೆಲ್ ಸ್ಟಾರ್ ನಾಯಕತ್ವದಲ್ಲೂ ಇಬ್ಬರನ್ನೂ ಸಮಾಧಾನ ಪಡಿಸಲು ಯತ್ನಿಸಿದ್ದರೂ, ಅದು ಸಾಧ್ಯವಾಗಲಿಲ್ಲ. ಮೊದಲ ಬಾರಿಗೆ ವಿವಾದವನ್ನು ಬಗೆಹರಿಸಲು ರೆಬಲ್ ಸ್ಟಾರ್ ಅಂಬರೀಶ್ ಸೋತಿದ್ದರು.

  'ಮಾರ್ಟಿನ್' ಚಿತ್ರದಲ್ಲಿ ಧ್ರುವ ಸರ್ಜಾ ಫುಲ್ ಬ್ಯುಸಿ

  'ಮಾರ್ಟಿನ್' ಚಿತ್ರದಲ್ಲಿ ಧ್ರುವ ಸರ್ಜಾ ಫುಲ್ ಬ್ಯುಸಿ

  ಆಕ್ಷನ್ ಪ್ರಿನ್ ಧ್ರುವ ಸರ್ಜಾ ಈಗ 'ಮಾರ್ಟಿನ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಎ. ಪಿ ಅರ್ಜುನ್ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದು, ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಉದಯ್ ಕೆ ಮೆಹ್ತಾ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ನಂದ ಕಿಶೋರ್ ನಿರ್ದೇಶಿಸಿದ ಪೊಗರು ಚಿತ್ರದ ಬಳಿಕ ಧ್ರುವ ಪ್ಯಾನ್ ಇಂಡಿಯಾ ಚಿತ್ರದಲ್ಲಿ ನಟಿಸುತ್ತಿದ್ದಾರೆ.

  English summary
  Dhruva sarja shared instagram video after b report in sruthi hariharan arjun sarja me too case. Dhruva shared Arjun Sarja's old video and commented like One gets SERVED with what one DESERVES.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X