For Quick Alerts
  ALLOW NOTIFICATIONS  
  For Daily Alerts

  ತೆಲುಗು ಸ್ಟಾರ್ ನಾನಿ ಸಿನಿಮಾದಲ್ಲಿ 'ದಿಯಾ' ಹೀರೋ ದೀಕ್ಷಿತ್

  |

  ದಿಯಾ ಸಿನಿಮಾ ಮೂಲಕ ಕನ್ನಡಿಗರ ಹೃದಯ ಗೆದ್ದ ದೀಕ್ಷಿತ್ ಶೆಟ್ಟಿ ಇದೀಗ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ದಿಯಾ ಸಿನಿಮಾ ಬಳಿಕ ದೀಕ್ಷಿತ್ ಶೆಟ್ಟಿಗೆ ಸಿನಿಮಾ ಅವಕಾಶಗಳು ಹೆಚ್ಚಾಗಿದ್ದು, ಕನ್ನಡದ ಜೊತೆಗೆ ಪರಭಾಷೆಯಲ್ಲೂ ಬ್ಯುಸಿಯಾಗಿದ್ದಾರೆ. ದಿಯಾ ಬಳಿಕ ದೀಕ್ಷಿತ್ ಶೆಟ್ಟಿ ತೆಲುಗು ಪ್ರೇಕ್ಷಕರ ಮುಂದೆ ಹೋಗಿದ್ದರು. ತೆಲುಗಿನಲ್ಲಿ ದೀಕ್ಷಿತ್ ಮೊದಲ ಬಾರಿಗೆ ಮುಗ್ಗುರು ಮೊನಗಲ್ಲು ಸಿನಿಮಾದಲ್ಲಿ ನಟಿಸುವ ಮೂಲಕ ತೆಲುಗು ಪ್ರೇಕ್ಷಕರ ಮನಗೆದ್ದರು.

  ದಿಯಾ ಚಿತ್ರ ಕನ್ನಡದ ಜೊತೆಗೆ ಪರಭಾಷೆಯ ಪ್ರೇಕ್ಷಕರನ್ನು ಸೆಳೆದ ಸಿನಿಮಾ. ಹಾಗಾಗಿ ದೀಕ್ಷಿತ್ ಶೆಟ್ಟಿ ತೆಲುಗಿನಲ್ಲಿ ಫೇಮಸ್ ಆಗಿದ್ದಾರೆ. ಇದು ಅವರಿಗೆ ತೆಲುಗಿನಿಂದ ಆಫರ್ ಹುಡುಕಿ ಬರಲು ಕಾರಣವಾಯಿತು. ಮುಗ್ಗುರು ಮೊನಗಲ್ಲು ಸಿನಿಮಾದ ಬಳಿಕ ದೀಕ್ಷಿತ್ ಮತ್ತೊಂದು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಹೌದು, ಖ್ಯಾತ ನಟ ನಾನಿ ನಟನೆಯ ಮುಂದಿನ ಸಿನಿಮಾದಲ್ಲಿ ಎನ್ನುವುದೇ ವಿಶೇಷ.

  ನಟ ನಾನಿ 'ಮೀಟ್​ ಕ್ಯೂಟ್​' ಎನ್ನುವ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದನ್ನು ನಾನಿ ಅವರೇ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದ ಪ್ರಮುಖ ಪಾತ್ರಕ್ಕೆ ದೀಕ್ಷಿತ್​ ಆಯ್ಕೆ ಮಾಡಿಕೊಳ್ಳಲಾಗಿದೆ. ದೀಕ್ಷಿತ್‌ಗೆ ಜತೆಯಾಗಿ ಆಕಾಂಕ್ಷಾ ಸಿಂಗ್​ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ದೀಕ್ಷಿತ್​ ಪಾತ್ರ ತುಂಬಾನೇ ಪ್ರಾಮುಖ್ಯತೆ ವಹಿಸಲಿದೆಯಂತೆ.

  ನಾನಿ ಟಾಲಿವುಡ್‌ನಲ್ಲಿ ಬಹುಬೇಡಿಕೆಯ ನಟ. ಅವರ ಸಿನಿಮಾ ಮೇಲೆ ಅಭಿಮಾನಿಗಳಿಗೆ ದೊಡ್ಡ ನಿರೀಕ್ಷೆ ಇರುತ್ತದೆ. ಇನ್ನು, ನಾನಿ ಸಿನಿಮಾದಲ್ಲಿ ದೀಕ್ಷಿತ್ ನಟಿಸಿದರೆ ವೃತ್ತಿಜೀವನಕ್ಕೆ ದೊಡ್ಡ ಮೈಲೇಜ್​ ಸಿಗಲಿದೆ. ಈ ಸಿನಿಮಾವನ್ನು ನಾನಿ ನಿರ್ಮಾಣ ಮಾಡಿದರೆ, ಅವರ ಸಹೋದರಿ ದೀಪ್ತಿ ಗಂಟಾ ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಇನ್ನೂ ಕೆಲ ಖ್ಯಾತ ಕಲಾವಿದರು ನಟಿಸುವ ಸಾಧ್ಯತೆ ಇದೆ. ಹೆಚ್ಚಿನ ಮಾಹಿತಿ ಇನ್ನು ಬಹಿರಂಗವಾಗಿಲ್ಲ.

  ನಟ ದೀಕ್ಷಿತ್ ಶೆಟ್ಟಿ ಮೊದಲ ಕಿರುತೆರೆಯಲ್ಲಿ ಖ್ಯಾತಿಗಳಿಸಿದ್ದರು. ಬಳಿಕ 'ದಿಯಾ' ಸಿನಿಮಾ ಮೂಲಕ ದೊಡ್ಡ ಪರದೆ ಮೇಲೆ ಮಿಂಚಿದ್ದರು. ಈ ಸಿನಿಮಾ ದೊಡ್ಡ ಮಟ್ಟದ ಸಕ್ಸಸ್ ತಂದುಕೊಟ್ಟಿತು. ದಿಯಾ ಸಿನಿಮಾ 2020ರ ಆರಂಭದಲ್ಲಿ ತೆರೆಕಂಡಿತ್ತು. ಕೆ.ಎಸ್​. ಅಶೋಕ್​ ಈ ಸಿನಿಮಾ ನಿರ್ದೇಶನ ಮಾಡಿದ್ದರು. ಪೃಥ್ವಿ ಅಂಬರ್, ದೀಕ್ಷಿತ್​ ಶೆಟ್ಟಿ, ಖುಷಿ ರವಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಕನ್ನಡದಲ್ಲಿ ಸೂಪರ್ ಸಕ್ಸಸ್ ಆದ ಬಳಿಕ ಪರಭಾಷೆಯಲ್ಲೂ ಬೇಡಿಕೆ ಹೆಚ್ಚಾಯಿತು. ಇದೀಗ ದಿಯಾ ಹಿಂದಿಗೆ ರಿಮೇಕ್​ ಆಗುತ್ತಿದೆ. ತೆಲುಗಿನಲ್ಲೂ ಈ ಸಿನಿಮಾ ರಿಮೇಕ್​ ಆಗಿ ತೆರೆಕಂಡಿದೆ.

  English summary
  Dia movie Actor Dheekshith Shetty act with Telugu Actor Nani.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X