For Quick Alerts
  ALLOW NOTIFICATIONS  
  For Daily Alerts

  ಹೊಸ ಬಾಳಿನ ಹೊಸಿಲಲಿ ಸಾಯಿಕುಮಾರ್ ಮಗಳು

  By ಅನಂತರಾಮು, ಹೈದರಾಬಾದ್
  |

  ಡೈಲಾಗ್ ಕಿಂಗ್ ಸಾಯಿ ಕುಮಾರ್ ಅವರ ಏಕೈಕ ಪುತ್ರಿ ಜ್ಯೋತಿರ್ಮಯಿ ಅವರ ಮದುವೆ ಆರತಕ್ಷತೆ ಕಾರ್ಯಕ್ರಮ ಹೈದರಾಬಾದಿನಲ್ಲಿ ಗುರುವಾರ (ಆ.9) ಅದ್ದೂರಿಯಾಗಿ ನೆರವೇರಿತು. ಎಂಬಿಬಿಎಸ್ ಓದಿರುವ ಜ್ಯೋತಿರ್ಮಯಿ ಅವರು ಬಿ.ಟೆಕ್ ಪದವೀಧರ ಕೃಷ್ಣ ಫಲ್ಗುಣ ಅವರನ್ನು ಬಾಳ ಸಂಗಾತಿಯಾಗಿ ಬರಮಾಡಿಕೊಂಡರು.

  ಹೈದರಾಬಾದಿನ ಮಾಧಾಪುರ್ ನಲ್ಲಿರುವ 'N' ಕನ್ವೆಷನ್ ಸೆಂಟರ್ ನಲ್ಲಿ ಇವರಿಬ್ಬರ ಮದುವೆ ಆರತಕ್ಷತೆ ನೆರವೇರಿತು. ನೂತನ ದಾಂಪತ್ಯಕ್ಕೆ ಅಡಿಯಿಟ್ಟ ಇವರಿಬ್ಬರಿಗೆ ಚಿತ್ರರಂಗದ ಹಲವಾರು ಗಣ್ಯರು ಶುಭಕೋರಿದರು.

  ಆಗಸ್ಟ್ 9ರಂದು ರಾತ್ರಿ ಏಳು ಗಂಟೆಗೆ ಆರಂಭವಾದ ಆರತಕ್ಷತೆ ಕಾರ್ಯಕ್ರಮ ಮಧ್ಯರಾತ್ರಿವರೆಗೂ ನಡೆಯಿತು. ಇಬ್ಬರನ್ನೂ ನೋಡಿ ಜೋಡಿ ತುಂಬಾ ಚೆನ್ನಾಗಿದೆ ಎಂದು ಬಂದವರು ನಾಲ್ಕು ಒಳ್ಳೆ ಮಾತುಗಳನ್ನೂ ಆಡಿದರು.

  ಈ ಸಂದರ್ಭದಲ್ಲಿ ಖ್ಯಾತ ಹಿನ್ನೆಲೆ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಹಾಗೂ ಮನೋ ಅವರು ಸುಮಧುರ ಗೀತೆಗಳನ್ನು ಹಾಡಿ ಮದುವೆ ಸಂಭ್ರಮಕ್ಕೆ ಮತ್ತಷ್ಟು ಕಳೆತಂದರು. ದಕ್ಷಿಣ ಚಿತ್ರರಂಗದ ಹಲವಾರು ತಾರೆಗಳು ಮದುವೆಗೆ ಸಾಕ್ಷಿಯಾದರು.

  ಈ ಮದುವೆ ರಿಸೆಪ್ಷನ್ ಗಾಗಿ ಸಾಯಿಕುಮಾರ್ ವಿಶೇಷ ಆಹ್ವಾನ ಪತ್ರಿಕೆಯನ್ನೂ ಹಂಚಿದ್ದರು. ಪತ್ರಿಕೆ ತೆರೆಯುತ್ತಿದ್ದಂತೆ ಸಾಯಿಕುಮಾರ್ ಅವರ ಧ್ವನಿ ಕೇಳಿಬರುತ್ತಿತ್ತು. ಪತ್ರಿಕೆಯಲ್ಲಿರುವ ವಿಷಯವನ್ನು ಅವರೇ ಓದಿ ಆಹ್ವಾನಿಸುತ್ತಿದ್ದಾರೇನೋ ಎಂಬಂತಿತ್ತು.

  ಖಾಕಿ ತೊಟ್ಟು ಕೈಯಲ್ಲೊಂದು ಲಾಠಿ ಹಿಡಿದು ಸರ ಸರನೆ ನಡೆದು ಬಂದು ತಲೆಯನ್ನೊಮ್ಮೆ ಮೇಲಕೆತ್ತಿ ನಿರರ್ಗಳವಾಗಿ ಡೈಲಾಗ್ ಹೊಡೆಯೊ ಡೈಲಾಗ್ ಕಿಂಗ್ ಸಾಯಿಕುಮಾರ್ ಅವರೇ ಸ್ವತಃ ತಮ್ಮನ್ನು ಮದುವೆ ಆಹ್ವಾನಿಸುತ್ತಿದ್ದಾರೇನೋ ಎಂಬಂತೆ ಭಾಸವಾಗುತ್ತಿತ್ತು.

  ಇದರ ಜೊತೆಗೆ ನಾಲ್ಕು ಸಿಂಹಗಳ ಫೋಟೋವನ್ನೂ ಹಾಕಿದ್ದರು ಅವರ ಪಕ್ಕದಲ್ಲಿ ಕಾಣಿಸದ ನಾಲ್ಕನೇ ಸಿಂಹವೇ ನಿಮ್ಮ ಸಾಯಿಕುಮಾರ್ ಎಂದೂ ಉಳಿದ ಸಿಂಹಗಳಲ್ಲಿ ಮರಿ ಸಿಂಹ ತಮ್ಮ ಪುತ್ರ, ಹೆಣ್ಣು ಸಿಂಹ ತಮ್ಮ ಧರ್ಮಪತ್ನಿ ಹಾಗೂ ವೃದ್ಧ ಸಿಂಹ ತಮ್ಮ ತಂದೆಯವರು ಎಂದು ಬರೆದಿದ್ದರು. ವಿನೋದಭರಿತ ಶೈಲಿಯಲ್ಲಿದ್ದ ಈ ಆಹ್ವಾನ ಪತ್ರಿಕೆ ಎಲ್ಲರಿಗೂ ಮೆಚ್ಚುಗೆಯಾಗಿತ್ತು.

  English summary
  Dialogue King Sai Kumar's daughter Jyothirmayi tied the nuptial knot with Krishna Khalguna at the grand marriage ceremony earlier this week. The popular South Indian actor hosted a wedding reception party for the film fraternity and this high profile event witnessed a host of leading Telugu actors swarming in and wishing the newly-wed couple.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X