»   » ಹುಚ್ಚ ವೆಂಕಟ್ ಅವರೇ... ಇದೆಲ್ಲ ನಿಮಗೆ ಮರೆತು ಹೋಯ್ತಾ.?

ಹುಚ್ಚ ವೆಂಕಟ್ ಅವರೇ... ಇದೆಲ್ಲ ನಿಮಗೆ ಮರೆತು ಹೋಯ್ತಾ.?

Posted By:
Subscribe to Filmibeat Kannada

ಎರಡು ದಿನಗಳಿಂದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆಗೆ ಮಾತನಾಡಲು ಹುಚ್ಚ ವೆಂಕಟ್ ಪ್ರಯತ್ನ ಪಟ್ಟಿದ್ದಾರೆ. ಆದ್ರೆ, ಅವರ ಕೈಗೆ ಶಿವಣ್ಣ ಸಿಕ್ಕಿಲ್ಲ. ಮನೆ ಹತ್ತಿರ ಹೋದಾಗ, ಮನೆಯಲ್ಲಿ ಶಿವಣ್ಣ ಇರಲಿಲ್ಲ. ಶಿವಣ್ಣ ಕಾರ್ ಡ್ರೈವರ್ ಹಾಗೂ ಸೆಕ್ಯೂರಿಟಿ ಗಾರ್ಡ್ ಸರಿಯಾಗಿ ಪ್ರತಿಕ್ರಿಯೆ ನೀಡಿಲ್ಲ. ಅಷ್ಟಕ್ಕೆ, ಶಿವಣ್ಣ ಬಗ್ಗೆ ಹುಚ್ಚ ವೆಂಕಟ್ ಬಾಯಿಗೆ ಬಂದಂತೆ ಮಾತನಾಡುವುದು ಸರಿಯೇ.? ಎಂಬ ಪ್ರಶ್ನೆ ಇದೀಗ 'ಶಿವ'ಭಕ್ತರಲ್ಲಿ ಕಾಡುತ್ತಿದೆ.

ಎರಡು ದಿನಗಳಿಂದ ಶಿವಣ್ಣ ಸಿಕ್ಕಿಲ್ಲ ಅಂತ ನಾಲಿಗೆ ಬಿಗಿ ಹಿಡಿಯದೆ ಮಾತನಾಡುತ್ತಿರುವ ಹುಚ್ಚ ವೆಂಕಟ್, ಕಳೆದ ವರ್ಷ ನಡೆದ ಸಂಗತಿಯೊಂದನ್ನ ಮರೆತಿರುವಂತಿದೆ.

ಜುಲೈ 12, 2017.... ಅಂದು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಹುಟ್ಟುಹಬ್ಬ. ಜನ್ಮದಿನದಂದು ಶಿವಣ್ಣನಿಗೆ ಶುಭ ಕೋರಲು ದೂರದ ಊರುಗಳಿಂದ ಅಭಿಮಾನಿಗಳು ಬಂದಿದ್ದರು. ಶಿವಣ್ಣನ ಮನೆ ಮುಂದೆ ಶಿವ'ಭಕ್ತ'ರು ಜಮಾಯಿಸಿದ್ದರು. ಇದರ ನಡುವೆಯೇ ಹುಚ್ಚ ವೆಂಕಟ್ ಕೂಡ ಶಿವಣ್ಣನ ಮನೆಯಲ್ಲಿ ಪ್ರತ್ಯಕ್ಷವಾಗಿದ್ದರು.

ಹುಚ್ಚ ವೆಂಕಟ್ ಗೆ ಉಗಿದು ಉಪ್ಪಿನಕಾಯಿ ಹಾಕಿದ ಶಿವಣ್ಣನ ಅಭಿಮಾನಿಗಳು!

Did Huccha Venkat forget Shiva Rajkumar's down to earth nature.?

ಹುಚ್ಚ ವೆಂಕಟ್ ರನ್ನ ಆತ್ಮೀಯವಾಗಿ ಸ್ವಾಗತಿಸಿದ ಶಿವರಾಜ್ ಕುಮಾರ್, ಹುಚ್ಚ ವೆಂಕಟ್ ಜೊತೆಗೆ ಫೋಟೋ ಕ್ಲಿಕ್ ಮಾಡಿಸಿಕೊಂಡರು. ಸಾಲದಕ್ಕೆ, ಹುಚ್ಚ ವೆಂಕಟ್ ಗೆ ಸಿಹಿ ಕೂಡ ತಿನ್ನಿಸಿದರು.

ವಿಡಿಯೋ: ಶಿವಣ್ಣ ಬಗ್ಗೆ ಬಾಯಿಗೆ ಬಂದ್ಹಂಗೆ ಮಾತನಾಡಿರುವ ಹುಚ್ಚ ವೆಂಕಟ್

ಅಂದು ಹುಚ್ಚ ವೆಂಕಟ್ ಜೊತೆಗೆ ಶಿವಣ್ಣ ಆತ್ಮೀಯವಾಗಿದ್ದರು. ಬಿಜಿ ಶೆಡ್ಯೂಲ್ ನಡುವೆಯೂ ಹುಚ್ಚ ವೆಂಕಟ್ ಜೊತೆಗೆ ಹರಟಿದ್ದರು. ಇಂದು ಇದನ್ನೆಲ್ಲ ಹುಚ್ಚ ವೆಂಕಟ್ ಮರೆತಿದ್ದಾರಾ.? ಅಥವಾ ಪಬ್ಲಿಸಿಟಿ ಗೀಳು ಹುಚ್ಚ ವೆಂಕಟ್ ಗೆ ಅಂಟಿದ್ಯಾ.?

English summary
Did Huccha Venkat forget Shiva Rajkumar's down to earth nature.?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada