»   » ಮನಸಾರೆ ಜೋಡಿಗೆ ಶುರುವಾಯ್ತು ಪ್ರಾಣಿ ಕಾಳಜಿ

ಮನಸಾರೆ ಜೋಡಿಗೆ ಶುರುವಾಯ್ತು ಪ್ರಾಣಿ ಕಾಳಜಿ

Posted By:
Subscribe to Filmibeat Kannada
ಐಂದ್ರಿತಾ ರೈ ಹಾಗು ದಿಗಂತ್ ರಿಂದ ಪ್ರಾಣಿ ಕಾಳಜಿ | Filmibeat Kannada

ಕನ್ನಡ ಸಿನಿಮಾ ಕಲಾವಿದರು ನಾವು ಅಭಿನಯಕ್ಕೆ ಮಾತ್ರ ಸೀಮಿತವಾಗಿಲ್ಲ ಎನ್ನುವುದನ್ನ ಆಗಾಗ ನಿರೂಪಿಸುತ್ತಾ ಇರುತ್ತಾರೆ. ನಿನ್ನೆಯಷ್ಟೇ ನಟಿ ರಾಧಿಕಾ ಪಂಡಿತ್ ಪಕ್ಷಿಗಳಿಗೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಆಗಬಾರದು ಎಂದು ತಮ್ಮ ಮನೆಯಂಗಳದಲ್ಲಿ ನೀರಿನ ಪಾತ್ರೆ ಇಡುವ ಮೂಲಕ ತಮ್ಮ ಅಭಿಮಾನಿಗಳಿಗೆ ಬಿಸಿಲಿನಿಂದ ಪಕ್ಷಿಗಳನ್ನ ರಕ್ಷಿಸಿ ಎಂದು ಸಂದೇಶ ಸಾರಿದ್ದರು.

ಸಾಕಷ್ಟು ವರ್ಷಗಳಿಂದ ಪ್ರಾಣಿಗಳ ಬಗ್ಗೆ ಕಾಳಜಿ ತೋರುತ್ತಿರುವ ನಟಿ ಐಂದ್ರಿತಾ ಈ ಬಾರಿಯೂ ಎಂದಿನಂತೆ ಪ್ರಾಣಿಗಳಿಗಾಗಿ ಕೆಲಸ ಶುರು ಮಾಡಿದ್ದಾರೆ. ವಿಶೇಷ ಎಂದರೆ ಈ ಬಾರಿ ದೂದ್ ಪೇಡಾ ದಿಗಂತ್ ಕೂಡ ಐಂದ್ರಿತಾ ಜೊತೆ ಕೈ ಜೋಡಿಸಿದ್ದಾರೆ.

diganth and Aindrita kept water bowls for birds to save birds from Summer

ಪಕ್ಷಿಗಳ ಕಾಳಜಿಗೆ ಮುಂದಾದ ಯಶ್ ಮಡದಿ ರಾಧಿಕಾ

ಬೇಸಿಗೆಯಲ್ಲಿ ಬೀದಿ ನಾಯಿಗಳಿಗೆ, ಪಕ್ಷಿಗಳಿಗೆ ನೀರು ಸಿಗುವುದು ಕಷ್ಟವಾಗುತ್ತದೆ ಆದ್ದರಿಂದ ನಮ್ಮ ಕೈಲಾಗುವಂತ ಸಹಾಯ ಮಾಡೋಣ ಎನ್ನುವ ನಿಟ್ಟಿನಲ್ಲಿ ಐಂದ್ರಿತಾ ಮತ್ತು ದಿಗಂತ್ ಈ ಕೆಲಸಕ್ಕೆ ಮುಂದಾಗಿದ್ದಾರೆ.

diganth and Aindrita kept water bowls for birds to save birds from Summer

ಸನ್ನಿ(sunny) ಎನ್ನುವ ತಂಡದಿಂದ ಪ್ರಾಣಿ-ಪಕ್ಷಿಗಳಿಗಳಿಗೆ ನೀರಿ ಮತ್ತು ಆಹಾರ ವ್ಯವಸ್ಥೆ ಮಾಡಲು ಮಣ್ಣಿನ ಪಾತ್ರೆಗಳನ್ನ ನೀಡುತ್ತಿದ್ದಾರೆ. ಅವರಿಂದ ಸಹಾಯ ಪಡೆದ ಐಂದ್ರಿತಾ ಹಾಗೂ ದಿಗಂತ್ ತಮ್ಮ ಮನೆಯ ಸುತ್ತಾ ಮುತ್ತಾ ಮಣ್ಣಿನ ಪಾತ್ರೆಗಳನ್ನ ಪ್ರಾಣಿಗಳಿಗಾಗಿ ಮೀಸಲಿಟ್ಟಿದ್ದಾರೆ. ಪ್ರತಿ ವರ್ಷ ಬೇಸಿಗೆಯಲ್ಲೂ ರಸ್ತೆಗಿಳಿದು ಬೀದಿ ನಾಯಿಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಮನಸಾರೆ ಬೆಡಗಿ ಈ ಬಾರಿಯೂ ಅನೇಕ ಅಭಿಮಾನಿಗಳಿಗೆ ಸ್ಫೂರ್ತಿ ಆಗಿದ್ದಾರೆ.

ಇದೇ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ದಿಗಂತ್-ಐಂದ್ರಿತಾ ರೇ!

English summary
Kannada actors Aindrita ray and Diganth has kept water bowls for birds on the rooftop to save birds from dehydration in Summer. By doing this, The Actress has delivered a message to her fans to save bird species in Summer.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X