For Quick Alerts
  ALLOW NOTIFICATIONS  
  For Daily Alerts

  ಆಸ್ಪತ್ರೆಯಿಂದ ದಿಗಂತ್ ಡಿಸ್ಚಾರ್ಜ್: ವೈದ್ಯರ ಸಲಹೆ ಏನು?

  |

  ದಿಗಂತ್ ಹಾಗೂ ಐಂದ್ರಿತಾ ರೇ ಇಬ್ಬರೂ ಗೋವಾಗೆ ಟ್ರಿಪ್‌ ಹೋಗಿದ್ದರು. ಈ ವೇಳೆ ದಿಗಂತ್ ಸೊಮರ್ ಸಾಲ್ಟ್‌ ಮಾಡುವಾಗ ಆಯಾತಪ್ಪಿ ಬಿದ್ದು ಕತ್ತಿಗೆ ಪೆಟ್ಟು ಮಾಡಿಕೊಂಡಿದ್ದರು. ಸರಿಯಾದ ಸಮಯಕ್ಕೆ ಗೋವಾದಿಂದ ಏರ್‌ಲಿಫ್ಟ್ ಮೂಲಕ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ತಕ್ಷಣವೇ ದಿಗಂತ್‌ಗೆ ಶಸ್ತ್ರ ಚಿಕಿತ್ಸೆ ಕೂಡ ಮಾಡಲಾಗಿತ್ತು.

  ಶಸ್ತ್ರಚಿಕಿತ್ಸೆ ಬಳಿಕ ದಿಗಂತ್ ಆರೋಗ್ಯ ಹೇಗಿದೆ?ಶಸ್ತ್ರಚಿಕಿತ್ಸೆ ಬಳಿಕ ದಿಗಂತ್ ಆರೋಗ್ಯ ಹೇಗಿದೆ?

  ಶಸ್ತ್ರ ಚಿಕಿತ್ಸೆಯ ಬಳಿಕ ದೂದ್‌ ಪೇಡಾ ದಿಗಂತ್ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಶಸ್ತ್ರ ಚಿಕಿತ್ಸೆಯ ಬಳಿಕ ದಿಗಂತ್ ಅವರನ್ನುವಾರ್ಡ್‌ಗೆ ಡಿಸ್ಚಾರ್ಜ್ ಮಾಡಲಾಗಿತ್ತು. ಇಂದು (ಜೂನ್ 22) ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದರಿಂದ ಆಸ್ಪತ್ರೆಯಿಂದ ಡಿಸ್ಚಾಜ್ ಮಾಡಲಾಗಿದೆ. ಸದ್ಯ ದಿಗಂತ್ ಆರೋಗ್ಯವಾಗಿದ್ದು, ವೈದ್ಯರು ಸಲಹೆ ನೀಡಿ ಕಳುಹಿಸಿದ್ದಾರೆ.

  ದೂದ್ ಪೇಡಾ 3 ತಿಂಗಳು ಬೆಡ್ ರೆಸ್ಟ್

  ದೂದ್ ಪೇಡಾ 3 ತಿಂಗಳು ಬೆಡ್ ರೆಸ್ಟ್

  ದೂದ್ ಪೇಡಾ ದಿಗಂತ್‌ ಆರೋಗ್ಯದ ಬಗ್ಗೆ ಅವರ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದರು. ಅದರಲ್ಲೂ ಗೋವಾದಿಂದ ಏರ್‌ಲಿಫ್ಟ್ ಮಾಡುತ್ತಿರುವ ವಿಷಯ ಕೇಳಿ ಸ್ಯಾಂಡಲ್‌ವುಡ್ ದಂಗಾಗಿ ಹೋಗಿತ್ತು. ದಿಗಂತ್ ಬೆಂಗಳೂರಿಗೆ ತಲುಪಿದ ಬಳಿಕ ಆರೋಗ್ಯದ ಸ್ಥಿತಿಯನ್ನು ತಿಳಿದು ನಿಟ್ಟುಸಿರು ಬಿಟ್ಟಿದ್ದರು. ಸದ್ಯ ಶಸ್ತ್ರ ಚಿಕಿತ್ಸೆ ನಡೆದ ಒಂದು ದಿನದ ಬಳಿಕ ವೈದ್ಯರು ಡಿಸ್ಚಾರ್ಚ್ ಮಾಡಿದ್ದಾರೆ. ಅಲ್ಲದೆ ಮೂರು ತಿಂಗಳು ಬೆಡ್ ರೆಸ್ಟ್ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ ಎಂದು ವರದಿಯಾಗಿದೆ.

  ದಿಗಂತ್‌ಗೆ 3 ಗಂಟೆ ಶಸ್ತ್ರ ಚಿಕಿತ್ಸೆ

  ದಿಗಂತ್‌ಗೆ 3 ಗಂಟೆ ಶಸ್ತ್ರ ಚಿಕಿತ್ಸೆ

  ದಿಗಂತ್‌ಗೆ ಮಣಿಪಾಲ್ ಆಸ್ಪತ್ರೆಯ ವೈದ್ಯ ಡಾ. ವಿದ್ಯಾಧರ್ ಹಾಗೂ ಅವರ ತಂಡ ಶಸ್ತ್ರಚಿಕಿತ್ಸೆಯನ್ನು ನಡೆಸಿತ್ತು. ಮೂರು ಗಂಟೆಗಳ ಕಾಲ ಈ ಶಸ್ತ್ರ ಚಿಕಿತ್ಸೆ ನಡೆದಿದೆ ಎನ್ನಲಾಗಿದೆ. ಐಂದ್ರಿತಾ ರೇ ಗೋವಾದಿಂದ ಬೆಂಗಳೂರಿಗೆ ಬರುವ ಮುನ್ನವೇ ದಿಗಂತ್ ಹೆಲ್ತ್ ರಿಪೋರ್ಟ್‌ಗಳನ್ನು ಕಳುಹಿಸಿಕೊಟ್ಟಿದ್ದರು. ಅದನ್ನು ಆಧಾರವಾಗಿಟ್ಟುಕೊಂಡು ಶಸ್ತ್ರ ಚಿಕಿತ್ಸೆಗೆ ಮೊದಲೇ ತಯಾರಿ ನಡೆಸಿಕೊಂಡಿದ್ದರು. ದಿಗಂತ್ ಆಸ್ಪತ್ರೆಗೆ ತಲುಪುತ್ತಿದ್ದಂತೆ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ.

  'ಪಲ್ಟಿ' ಹೊಡೆಯುವಾಗ ಆಯಾತಪ್ಪಿದ ದಿಗಂತ್

  'ಪಲ್ಟಿ' ಹೊಡೆಯುವಾಗ ಆಯಾತಪ್ಪಿದ ದಿಗಂತ್

  ದಿಗಂತ್ ಮೊದಲಿನಿಂದಲೂ ಸೋಮರ್ ಸಾಲ್ಟ್ ಹೊಡೆಯುವುದಂದರೆ ಇಷ್ಟ. ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ ಪಲ್ಟಿ ಹೊಡೆಯುವಾಗ ಆಯಾ ತಪ್ಪಿದ ದಿಗಂತ್‌ಗೆ ಕತ್ತಿಗೆ ಬಲವಾದ ಏಟು ಬಿದ್ದಿತ್ತು. ಹೀಗಾಗಿ ಅವರ ಆರೋಗ್ಯದ ಬಗ್ಗೆ ಆತಂಕ ಎದ್ದಿತ್ತು. ಪೆಟ್ಟಾದ ಬಳಿಕ ಹೆಚ್ಚು ತಡಮಾಡುವಂತಿರಲಿಲ್ಲ. ಅಪಾಯ ಎದುರಾಗುವ ಸಾಧ್ಯತೆ ಇತ್ತು ಎಂದು ಐಂದ್ರಿತಾ ರೇ ಮಾಧ್ಯಮಗಳಿಗೆ ಹೇಳಿದ್ದಾರೆ. ಈ ಕಾರಣಕ್ಕೆ ದಿಗಂತ್‌ರನ್ನು ಏರ್‌ಲಿಫ್ಟ್ ಮೂಲಕ ಬೆಂಗಳೂರಿಗೆ ಕರೆದುಕೊಂಡು ಬರಲಾಗಿತ್ತು.

  ದಿಗಂತ್ ಸಾಹಸ ಮಾಡುವುದಕ್ಕೆ ಇಷ್ಟ

  ದಿಗಂತ್ ಸಾಹಸ ಮಾಡುವುದಕ್ಕೆ ಇಷ್ಟ

  ದಿಗಂತ್‌ಗೆ ಮೊದಲಿನಿಂದಲೂ ಅಡ್ವೆಂಚರ್ ಅಂದರೆ ಇಷ್ಟ. ಆಗಾಗ ಅವರು ಸೋಮರ್ ಸಾಲ್ಟ್ ಮಾಡಿದ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಲೇ ಇದ್ದರು. ಇದೊಂದೇ ಅಲ್ಲ ಹಲವು ಸ್ಟಂಟ್‌ಗಳನ್ನು ಮಾಡಿದ್ದರು. ನಟಿ ಐಂದ್ರಿತಾ ಕೂಡ ದಿಗಂತ್ ಜೊತೆ ಅಡ್ವೆಂಚರ್ ಟ್ರಿಪ್ ಹೋಗಿದ್ದು ಇದೆ. ಆರೋಗ್ಯ ಸರಿಹೊಂದಿದ ಬಳಿಕ ಮತ್ತೆ ಸೋಮರ್ ಸಾಲ್ಟ್‌ಗೆ ತಯಾರಿ ನಡೆಸಬಹುದು ಎನ್ನಲಾಗಿದೆ.

  English summary
  Diganth Discharged from Hospital, doctor adviced for 3 months bed rest, Know More.
  IIFA Banner

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X