For Quick Alerts
  ALLOW NOTIFICATIONS  
  For Daily Alerts

  ಸಿಸಿಬಿ ವಿಚಾರಣೆ ಮುಗಿಸಿದ ದಿಗಂತ್ ಹೊಸ ಚಿತ್ರದ ಶೂಟಿಂಗ್‌ಗೆ ಗ್ರೀನ್ ಸಿಗ್ನಿಲ್

  |

  ಎಲ್ಲ ಅಂದುಕೊಂಡಂತೆ ಆದರೆ ದೂದ್‌ಪೇಡಾ ಖ್ಯಾತಿಯ ದಿಗಂತ್ ಸೆಪ್ಟೆಂಬರ್ 18 ರಿಂದ ತಮ್ಮ ಹೊಸ ಸಿನಿಮಾದ ಚಿತ್ರೀಕರಣ ಆರಂಭಿಸಲಿದ್ದಾರೆ. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 16 ರಂದು ದಿಗಂತ್ ಮತ್ತು ಐಂದ್ರಿತಾ ರೇ ಸಿಸಿಬಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದರು.

  ದಿಗಂತ್ ದಂಪತಿ ವಿಚಾರಣೆಗೆ ಹಾಜರಾಗುತ್ತಿದ್ದಂತೆ ದಿಗಂತ್ ಚಿತ್ರದ ನಿರ್ಮಾಪಕರಿಗೆ ಸ್ವಲ್ಪ ಆತಂಕ ಕಾಡಿತ್ತು. ಶೂಟಿಂಗ್ ಪ್ಲಾನ್ ಮಾಡಿದ್ರಿ, ಈ ನಡುವೆ ಹೀಗೆ ಆಯ್ತು, ಸರಿ ಚಿತ್ರೀಕರಣ ಮುಂದಕ್ಕೆ ಹಾಕಿಕೊಳ್ಳೊಣ ಎಂದು ಚಿಂತಿಸಿದ್ದರಂತೆ. ಆದ್ರೆ, ಮೊದಲ ದಿನ ವಿಚಾರಣೆ ಮುಗಿಸಿ ಹೊರಬಂದ ದಿಗಂತ್ ಶೂಟಿಂಗ್ ನಿಲ್ಲಸಿದಂತೆ ನಿರ್ದೇಶಕರಿಗೆ ಹೇಳಿದ್ದಾರೆ. ಮುಂದೆ ಓದಿ....

  ಡ್ರಗ್ಸ್ ಪ್ರಕರಣ: ದಿಗಂತ್-ಐಂದ್ರಿತಾ ರೇಗೆ ಮೊದಲ ದಿನದ ವಿಚಾರಣೆಯಲ್ಲಿ ರಿಲೀಫ್

  'ಮಾರಿಗೋಲ್ಡ್' ಚಿತ್ರೀಕರಣಕ್ಕೆ ದಿಗಂತ್ ಸಜ್ಜು

  'ಮಾರಿಗೋಲ್ಡ್' ಚಿತ್ರೀಕರಣಕ್ಕೆ ದಿಗಂತ್ ಸಜ್ಜು

  ಹಲವು ದಿನಗಳ ಮುಂಚೆಯೇ ಮಾರಿಗೋಲ್ಡ್ ಚಿತ್ರವನ್ನು ದಿಗಂತ್ ಒಪ್ಪಿಕೊಂಡಿದ್ದರು. ಒಂದು ಹಂತದ ಶೂಟಿಂಗ್ ಸಹ ಮುಗಿಸಿದ್ದರು. ಎರಡನೇ ಹಂತದ ಚಿತ್ರೀಕರಣ ಆರಂಭಿಸುವಷ್ಟರಲ್ಲಿ ಲಾಕ್‌ಡೌನ್ ಜಾರಿಯಾಗಿತ್ತು. ಲಾಕ್‌ಡೌನ್ ಬಳಿಕ ಚಿತ್ರೀಕರಣಕ್ಕೆ ಅನುಮತಿ ಸಿಕ್ಕಿರುವ ಹಿನ್ನೆಲೆ ಮತ್ತೆ ಮಾರಿಗೋಲ್ಡ್ ಶೂಟಿಂಗ್ ಆರಂಭವಾಗುತ್ತಿದೆ.

  ಸೆಪ್ಟೆಂಬರ್ 18ಕ್ಕೆ ಶೂಟಿಂಗ್

  ಸೆಪ್ಟೆಂಬರ್ 18ಕ್ಕೆ ಶೂಟಿಂಗ್

  ಈ ಹಿಂದೆ ನಿಗದಿಯಾಗಿರುವಂತೆಯೇ ಸೆಪ್ಟೆಂಬರ್ 18 ರಂದು ಮಾರಿಗೋಲ್ಡ್ ಚಿತ್ರೀಕರಣ ನಡೆಸಲು ಚಿತ್ರತಂಡ ನಿರ್ಧರಿಸಿದ್ದು, ದಿಗಂತ್ ಸಹ ಭಾಗಿಯಾಗಲಿದ್ದಾರೆ. ಬೆಂಗಳೂರಿನಲ್ಲಿಯೇ ಚಿತ್ರೀಕರಣ ಮಾಡಲು ಮಾರಿಗೋಲ್ಡ್ ಚಿತ್ರತಂಡ ನಿರ್ಧರಿಸಿದೆ.

  ಮತ್ತೆ ವಿಚಾರಣೆಗೆ ಕರೆದರೆ....

  ಮತ್ತೆ ವಿಚಾರಣೆಗೆ ಕರೆದರೆ....

  ದಿಗಂತ್ ಮತ್ತು ಐಂದ್ರಿತಾ ರೇ ಅವರ ವಿಚಾರಣೆ ಸಂಪೂರ್ಣವಾಗಿ ಮುಗಿದಿಲ್ಲ. ಮೊದಲ ಹಂತದಲ್ಲಿ ವಿಚಾರಣೆ ಮುಗಿದಿದೆ, ಎರಡನೇ ಹಂತದ ವಿಚಾರಣೆಗೆ ಮತ್ತೆ ನೋಟಿಸ್ ಕೊಡುತ್ತೇವೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದರು. ಹೀಗಾಗಿ, ಮತ್ತೆ ವಿಚಾರಣೆಗೆ ಬುಲಾವ್ ಬಂದರೆ ಹಾಜರಾಗುತ್ತೇವೆ ಎಂದು ದಿಗಂತ್ ದಂಪತಿ ಹೇಳಿದ್ದಾರೆ. ಒಂದು ವೇಳೆ ಮತ್ತೆ ಸಿಸಿಬಿ ಪೊಲೀಸರು ಕರೆದರೆ ಒಂದು ದಿನ ಸಮಯ ಬಿಡುವು ಮಾಡಿಕೊಂಡು ಹೋಗಿ ಬರಲು ಸ್ಟಾರ್ಸ್ ನಿರ್ಧರಿಸಿದ್ದಾರೆ.

  ನನ್ನ ನಂಬಿ ಸರ್ಕಾರ ದೊಡ್ಡ ಜವಾಬ್ದಾರಿ ಕೊಟ್ಟಿದೆ | Shruthi Krishna | Filmibeat Kannada
  ಮಾರಿಗೋಲ್ಡ್ ನಿರ್ದೇಶಕ ಯಾರು?

  ಮಾರಿಗೋಲ್ಡ್ ನಿರ್ದೇಶಕ ಯಾರು?

  ಅಂದ್ಹಾಗೆ, ಮಾರಿಗೋಲ್ಡ್ ಚಿತ್ರವನ್ನು ರಾಘವೇಂದ್ರ ನಾಯಕ್ ನಿರ್ದೇಶನ ಮಾಡುತ್ತಿದ್ದು. ರಘುವರ್ಧನ್ ನಿರ್ಮಾನ ಮಾಡುತ್ತಿದ್ದಾರೆ. ಇದೊಂದು ಕ್ರೈಂ ಆಧಾರಿತ ಚಿತ್ರವಾಗಿದ್ದು, ಸೆಪ್ಟೆಂಬರ್ 18 ರಿಂದ ಅಕ್ಟೋಬರ್ 10ರವರೆಗೂ ಶೂಟಿಂಗ್ ಶೆಡ್ಯೂಲ್ ಮಾಡಲಾಗಿದೆ. ದಿಗಂತ್‌ಗೆ ಜೋಡಿಯಾಗಿ ಸಂಗೀತಾ ನಟಿಸುತ್ತಿದ್ದಾರೆ.

  English summary
  Kannada actor Diganth manchale's next movie Marigold to resume shoot as per schedule. The film directed by Raghavendra Nayak to start shooting from September18 in Bengaluru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X