For Quick Alerts
  ALLOW NOTIFICATIONS  
  For Daily Alerts

  ತಮ್ಮ ದಿನಕರ್ ಮುಂದಿನ ಸಿನಿಮಾ ಬಗ್ಗೆ ಸುಳಿವು ಬಿಟ್ಟುಕೊಟ್ಟ ದರ್ಶನ್

  |

  ನಟ ದರ್ಶನ್ ಅವರ ಸಹೋದರ ದಿನಕರ್ ತೂಗುದೀಪ್ ಚಂದನವನದ ಪ್ರತಿಭಾವಂತ ನಿರ್ದೇಶಕರಲ್ಲಿ ಒಬ್ಬರು. ಅಪರೂಪಕ್ಕೆ ಸಿನಿಮಾ ಮಾಡಿದರು ಹಿಟ್ ಸಿನಿಮಾವನ್ನೇ ನೀಡುತ್ತಾರೆ ದಿನಕರ್.

  ದಿನಕರ್ ತೂಗುದೀಪ್ ನಿರ್ದೇಶನದ ಎರಡು ಸಿನಿಮಾದಲ್ಲಿ ದರ್ಶನ್ ನಾಯಕರಾಗಿ ನಟಿಸಿದ್ದಾರೆ ಮತ್ತು ಎರಡೂ ಸಿನಿಮಾ ಸೂಪರ್-ಡೂಪರ್ ಹಿಟ್ ಆಗಿವೆ. ದರ್ಶನ್ ಅಭಿಮಾನಿಗಳಂತೂ ದಿನಕರ್ ಜೊತೆ ಮತ್ತೊಂದು ಸಿನಿಮಾ ಮಾಡಲು ಒತ್ತಾಯ ಹೇರುತ್ತಲೇ ಇರುತ್ತಾರೆ.

  ರಾಬರ್ಟ್ ಸಿನಿಮಾದ ಪ್ರಚಾರ ಕಾರ್ಯದಲ್ಲಿರುವ ದರ್ಶನ್‌ಗೆ ಈಗ ಮತ್ತೊಮ್ಮೆ ದಿನಕರ್ ಅವರ ನಿರ್ದೇಶನದ ಸಿನಿಮಾದಲ್ಲಿ ಯಾವಾಗ ನಟಿಸುತ್ತೀರಿ ಎಂಬ ಪ್ರಶ್ನೆ ಎದುರಾಯಿತು. ಇದಕ್ಕೆ ಸಕಾರಾತ್ಮಕವಾಗಿಯೇ ಉತ್ತರಿಸಿದ ದರ್ಶನ್, ದಿನಕರ್ ನಿರ್ದೇಶಿಸುತ್ತಿರುವ ಮುಂದಿನ ಸಿನಿಮಾ ಬಗ್ಗೆ ಸುಳಿವು ನೀಡಿದರು.

  ಇತರ ಹೀರೋಗಳೊಂದಿಗೂ ಕೆಲಸ ಮಾಡಲಿ: ದರ್ಶನ್

  ಇತರ ಹೀರೋಗಳೊಂದಿಗೂ ಕೆಲಸ ಮಾಡಲಿ: ದರ್ಶನ್

  ಸಂದರ್ಶನದಲ್ಲಿ ಮಾತನಾಡಿದ ದರ್ಶನ್, ದಿನಕರ್ ಇತರ ಹೀರೋಗಳೊಂದಿಗೂ ಕೆಲಸ ಮಾಡಲಿ. ಈಗ ಪುನೀತ್ ರಾಜ್‌ಕುಮಾರ್ ಸಿನಿಮಾವನ್ನು ದಿನಕರ್ ನಿರ್ದೇಶನ ಮಾಡಲಿದ್ದಾರೆ. ಉದ್ಯಮದ ಇನ್ನೂ ಬೇರೆ ನಟರೊಂದಿಗೂ ದಿನಕರ್ ಕೆಲಸ ಮಾಡಲಿ ಎಂದರು.

  ನಾವಿಬ್ಬರು ಒಟ್ಟಿಗೆ ಸಿನಿಮಾ ಮಾಡುತ್ತೇವೆ: ದರ್ಶನ್

  ನಾವಿಬ್ಬರು ಒಟ್ಟಿಗೆ ಸಿನಿಮಾ ಮಾಡುತ್ತೇವೆ: ದರ್ಶನ್

  'ದಿನಕರ್ ನಾನು ಸಿನಿಮಾ ಮಾಡುತ್ತೇವೆ. ನಾವು ಒಟ್ಟಿಗೆ ಇರುವವರು ಯಾವಾಗ ಬೇಕಾದರೂ ಸಿನಿಮಾ ಮಾಡಬಹುದು. ಮಾಡುತ್ತೇವೆ ಸಹ ಎಂದಿದ್ದಾರೆ ದರ್ಶನ್. ಈ ಮೊದಲು ದಿನಕರ್ ನಿರ್ದೇಶನದ ಸಾರಥಿ, ನವಗ್ರಹ ಸಿನಿಮಾಗಳಲ್ಲಿ ದರ್ಶನ್ ನಟಿಸಿದ್ದಾರೆ. ಜೊತೆ-ಜೊತೆಯಲಿ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ ದರ್ಶನ್.

  ಸೆಟ್ಟೇರಲಿಲ್ಲ 'ಸರ್ವಾಂತರ್ಯಾಮಿ'

  ಸೆಟ್ಟೇರಲಿಲ್ಲ 'ಸರ್ವಾಂತರ್ಯಾಮಿ'

  ದಿನಕರ್ ತೂಗುದೀಪ್ ನಿರ್ದೇಶನದ 'ಸರ್ವಾಂತರ್ಯಾಮಿ' ಹೆಸರಿನ ಸಿನಿಮಾದಲ್ಲಿ ದರ್ಶನ್ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಈ ಸಿನಿಮಾ ಯಾಕೋ ಸೆಟ್ಟೇರಲೇ ಇಲ್ಲ. 2019 ರ ಸಮಯದಲ್ಲಿ 'ಶಿವನಂದಿ' ಟೈಟಲ್ ಅನ್ನು ದಿನಕರ್ ನೊಂದಣಿ ಮಾಡಿಸಿದರು. ಆಗ ದರ್ಶನ್ ಅವರಿಗಾಗಿ ಶಿವನಂದಿ ಹೆಸರಿನ ಸಿನಿಮಾ ದಿನಕರ್ ಮಾಡಲಿದ್ದಾರೆ ಎನ್ನಲಾಯಿತು.

  ರಿಲೀಸ್ ಗೂ ಮೊದಲೇ ಮೈಸೂರಿನಲ್ಲಿ ಅಬ್ಬರಿಸಲಿದ್ದಾನೆ ಯುವರತ್ನ | Yuvaratna | Puneeth Rajkumar|Filmibeat Kannada
  'ಜೇಮ್ಸ್' ಬಳಿಕ ಸೆಟ್ಟೇರಲಿದೆ ಸಿನಿಮಾ

  'ಜೇಮ್ಸ್' ಬಳಿಕ ಸೆಟ್ಟೇರಲಿದೆ ಸಿನಿಮಾ

  ಆದರೆ ಅಂತಿಮವಾಗಿ ನಟ ಪುನೀತ್ ರಾಜ್‌ಕುಮಾರ್ ಅವರಿಗಾಗಿ ಸಿನಿಮಾ ನಿರ್ದೇಶಿಸುತ್ತಿದ್ದಾರೆ ದಿನಕರ್ ತೂಗುದೀಪ್. ಈ ಕುರಿತು ಕೆಲವು ದಿನಗಳಿಂದಲೂ ಸುದ್ದಿ ಹರಿದಾಡುತ್ತಿತ್ತು. ಆದರೆ ನಟ ದರ್ಶನ್ ಅವರು ಸುದ್ದಿಯನ್ನು ಕನ್‌ಫರ್ಮ್ ಮಾಡಿದ್ದಾರೆ. 'ಜೇಮ್ಸ್' ಸಿನಿಮಾದ ಬಳಿಕ ದಿನಕರ್-ಪುನೀತ್ ಅವರ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ.

  English summary
  Actor Darshan said Dinakar Thoogudeepa directing movie for Puneeth Rajkumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X