»   » ತಮಿಳು ನಿರ್ಮಾಪಕರ ವಿರುದ್ಧ ಕೆಂಡಕಾರುತ್ತಿರುವ ಎಸ್ ನಾರಾಯಣ್

ತಮಿಳು ನಿರ್ಮಾಪಕರ ವಿರುದ್ಧ ಕೆಂಡಕಾರುತ್ತಿರುವ ಎಸ್ ನಾರಾಯಣ್

Posted By:
Subscribe to Filmibeat Kannada

ತಮಿಳು ನಟ ಇಳೆಯದಳಪತಿ ವಿಜಯ್, ಕನ್ನಡ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಬಾಲಿವುಡ್ ನಟಿ ಶ್ರೀದೇವಿ, ನಟಿ ಶ್ರುತಿ ಹಾಸನ್ ಹಾಗೂ ನಟಿ ಹನ್ಸಿಕಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ತಮಿಳು ಚಿತ್ರ 'ಪುಲಿ' ವಿತರಣೆಯಿಂದ ನಷ್ಟ ಉಂಟಾಗಿದೆ ಎಂದು ಕನ್ನಡ ನಿರ್ದೇಶಕ ಕಮ್ ನಟ ಎಸ್ ನಾರಾಯಣ್ ಅವರು ಆರೋಪ ಮಾಡಿದ್ದಾರೆ.

ನಿರ್ದೇಶಕ ಚೆಂಬು ದೇವನ್ ಆಕ್ಷನ್-ಕಟ್ ಹೇಳಿದ್ದ 'ಪುಲಿ' ಸಿನಿಮಾವನ್ನು ಕರ್ನಾಟಕದಲ್ಲಿ ವಿತರಣೆ ಮಾಡುವ ಹಕ್ಕನ್ನು ಕನ್ನಡ ನಿರ್ದೇಶಕ-ನಟ ಕಲಾ ಸಾಮ್ರಾಟ್ ಎಸ್ ನಾರಾಯಣ್ ಅವರು ವಹಿಸಿಕೊಂಡಿದ್ದರು.[ತಮಿಳು 'ಪುಲಿ' ಬಾಲ ಹಿಡಿದು ನಿಂತ ಕಲಾ ಸಾಮ್ರಾಟ್]

Director-Actor S Narayan Unhappy with 'Puli' producers

ಇದರಿಂದ ಎಸ್ ನಾರಾಯಣ್ ಅವರಿಗೆ ಸುಮಾರು 4.5 ಕೋಟಿ ರೂಪಾಯಿ ಹಣ ನಷ್ಟವಾಗಿದೆ ಎಂದು ಇದೀಗ ಆರೋಪ ಮಾಡುತ್ತಿದ್ದಾರೆ. 'ಪುಲಿ' ಚಿತ್ರದ ಕರ್ನಾಟಕದ ವಿತರಣಾ ಹಕ್ಕನ್ನು ಎಸ್ ನಾರಾಯಣ್ ಅವರು ಸುಮಾರು 7.5 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿದ್ದರು.

ಅಂದಹಾಗೆ ಸುಮಾರು 100 ಕೋಟಿ ಬಜೆಟ್ ನಲ್ಲಿ ತಯಾರಾಗಿದ್ದ 'ಪುಲಿ' ಸಿನಿಮಾ ಬಾಕ್ಸಾಫೀಸ್ ನಲ್ಲಿ ಅಷ್ಟೊಂದು ಸದ್ದು ಮಾಡಲಿಲ್ಲ. ಆಂಧ್ರಪ್ರದೇಶ, ತಮಿಳುನಾಡು ಮತ್ತು ಮಹಾರಾಷ್ಟ್ರದ ವಿತರಕರಿಗೆ 'ಪುಲಿ' ಚಿತ್ರದ ನಿರ್ಮಾಪಕರು ನಷ್ಟ ತುಂಬಿಕೊಟ್ಟಿದ್ದಾರೆ.[ವಾವ್..! ಕಾಲಿವುಡ್ ನಲ್ಲಿ ಸುದೀಪ್ 'ಪುಲಿ' ಆರ್ಭಟ]

Director-Actor S Narayan Unhappy with 'Puli' producers

ಆದರೆ ಕರ್ನಾಟಕದಲ್ಲಿ ವಿತರಣೆ ಮಾಡಿದ್ದ ಎಸ್ ನಾರಾಯಣ್ ಅವರಿಗಾದ ನಷ್ಟಕ್ಕೆ ಪರಿಹಾರ ನೀಡಿಲ್ಲ ಎಂದು ಅವರು ಆರೋಪ ಮಾಡಿದ್ದಾರೆ. ಈ ಮೊದಲೇ ನಿರ್ಮಾಪಕರಿಗೆ ಈ ಬಗ್ಗೆ ತಿಳಿಸಿದ್ದರೂ ಸಹ ನಿರ್ಮಾಪಕರು ಅದನ್ನು ಭರಿಸಿಲ್ಲ. ಹೀಗಾಗಿ ಫಿಲ್ಮ್ ಛೇಂಬರ್ ಗೆ 4 ತಿಂಗಳ ಹಿಂದೆಯೇ ದೂರು ನೀಡಿದ್ದೇನೆ. ಪ್ರಕರಣ ಈಗಾಗಲೇ ದಕ್ಷಿಣ ಭಾರತದ ಫಿಲ್ಮ್ ಛೇಂಬರ್ ವರೆಗೂ ತಲುಪಿದೆ ಎಂದು ಕಲಾ ಸಾಮ್ರಾಟ್ ನುಡಿದಿದ್ದಾರೆ.['ಪುಲಿ'ಯಲ್ಲಿ ಜಲತರಂಗನಾಗಿ ಕಿಚ್ಚನ ದರ್ಬಾರ್ ನೋಡಿ!]

Director-Actor S Narayan Unhappy with 'Puli' producers

'ಒಂದು ವೇಳೆ ನನಗೆ ನ್ಯಾಯ ಸಿಗದಿದ್ದರೆ, ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ಧರಣಿ ಮಾಡುವುದಾಗಿ' ಎಸ್ ನಾರಾಯಣ್ ಅವರು ಭಯಂಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿರ್ಮಾಪಕರಾದ ಶಿಬು ಥಮಿನ್ಸ್ ಮತ್ತು ಪಿಟಿ ಸೆಲ್ವಕುಮಾರ್ ಅವರು 'ಪುಲಿ' ಚಿತ್ರಕ್ಕೆ ಬಂಡವಾಳ ಹೂಡಿದ್ದರು.

English summary
Kannada director S Narayan is unhappy with the producers of the Tamil film Puli. Narayan was the distributor for the film in Karnataka. But because the film flopped Narayan lost about Rs 4.25 crore. The producer of the film recently compensated distributors in Tamil Nadu.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada