»   » 'ಸೈನೈಡ್' ನಿರ್ದೇಶಕರ ಅಡ್ಡಾದಲ್ಲಿ ತಯಾರಾಗುತ್ತಿದೆ ಹೊಸ ಬಾಂಬ್.!

'ಸೈನೈಡ್' ನಿರ್ದೇಶಕರ ಅಡ್ಡಾದಲ್ಲಿ ತಯಾರಾಗುತ್ತಿದೆ ಹೊಸ ಬಾಂಬ್.!

Posted By:
Subscribe to Filmibeat Kannada

ಸದಾ ನಿಜ ಜೀವನಾಧರಿತ ಕಥೆಗಳಿಗೆ ಹೆಚ್ಚಿನ ಒತ್ತು ನೀಡುವ 'ಅಟ್ಟಹಾಸ' ಖ್ಯಾತಿಯ ನಿರ್ದೇಶಕ ಎ.ಎಂ.ಆರ್ ರಮೇಶ್, ಇದೀಗ ಮತ್ತೊಂದು ನಿಜ ಜೀವನಾಧರಿತ ಕಥೆಯುಳ್ಳ ಸಿನಿಮಾ ಮಾಡಲು ಎಲ್ಲಾ ತಯಾರಿ ನಡೆಸುತ್ತಿದ್ದಾರೆ.

'ಗೇಮ್' ಅಷ್ಟಾಗಿ ಯಶಸ್ಸು ಕಾಣದ ಪರಿಣಾಮ, ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ 'ಅಸ್ಫೋಟ' ಚಿತ್ರವನ್ನು ,ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರದಲ್ಲಿ ರಾಜೀವ್ ಗಾಂಧಿ ಅವರ ಹತ್ಯೆ ಮತ್ತು ತನಿಖೆಯಾಧರಿತ ಕಥೆಯನ್ನು ತೆರೆಯ ಮೇಲೆ ತೋರಿಸಲಿದ್ದಾರೆ.[ರಾಡ್ ಶ್ಯಾಮನ ಕತೆ ಕೈಗೆತ್ತಿಕೊಂಡ ಎ ಎಂ ಆರ್ ರಮೇಶ್]

Director AMR Ramesh's Kannada Movie 'Aaspota' in 4 languages

ಅಂದಹಾಗೆ ಈ ಸಿನಿಮಾ ಬರೋಬ್ಬರಿ 4 ಭಾಷೆಗಳಲ್ಲಿ ಮೂಡಿಬರಲಿದೆ ಅನ್ನೋದೇ ವಿಶೇಷ. ರಾಜೀವ್ ಗಾಂಧಿ ಮತ್ತು LTTE ಪ್ರಭಾಕರನ್ ಅವರ ಕಥೆಯನ್ನು ಎಳೆ-ಎಳೆಯಾಗಿ AMR ರಮೇಶ್ ಅವರು ತೆರೆಯ ಮೇಲೆ ಬಿಡಿಸಿಡಲಿದ್ದಾರೆ.

Director AMR Ramesh's Kannada Movie 'Aaspota' in 4 languages

ಕನ್ನಡದಲ್ಲಿ ಈ ಸಿನಿಮಾ 'ಅಸ್ಫೋಟ' ಎಂಬ ಹೆಸರಿನಲ್ಲಿ ಬರಲಿದ್ದು, ಹಿಂದಿ ಮತ್ತು ತೆಲುಗಿನಲ್ಲಿ 'ಹ್ಯುಮನ್ ಬಾಂಬ್', ಹಾಗೂ ತಮಿಳಿನಲ್ಲಿ 'ಮನಿಧ ವೆಡಿಗುಂಡು' ಎಂಬ ಹೆಸರಿನಲ್ಲಿ ತೆರೆ ಕಾಣಲಿದೆ.

ರಾಜೀವ್ ಗಾಂಧಿ ಅವರ ಹತ್ಯೆಗೆ ಸಂಬಂಧಿಸಿದಂತೆ ನಿರ್ದೇಶಕ ರಮೇಶ್‌ ಅವರು ಕಳೆದ 15 ವರ್ಷಗಳಿಂದ ಭಯಂಕರ ರಿಸರ್ಚ್ ಮಾಡಿದ್ದಾರಂತೆ. ಆದ್ದರಿಂದ ಜನರಿಗೆ ಗೊತ್ತಿಲ್ಲದ ಕೆಲವು ಸಂಗತಿಗಳು 'ಅಸ್ಫೋಟ'ದಲ್ಲಿ ಸ್ಫೋಟಗೊಳ್ಳಲಿವೆ.[ಹಿಂದಿ ಸೈನೈಡ್ ನಲ್ಲಿ ನಟಿಸಲು ಅಮಿತಾಬ್ ನಕಾರ]

Director AMR Ramesh's Kannada Movie 'Aaspota' in 4 languages

ಆಗಸ್ಟ್ 20, ರಾಜೀವ್ ಗಾಂಧಿ ಅವರ ಹುಟ್ಟುಹಬ್ಬದ ದಿನದಂದು ಈ ಸಿನಿಮಾವನ್ನು ಲಾಂಚ್ ಮಾಡಲು ರಮೇಶ್ ಅವರು ಪ್ಲ್ಯಾನ್ ಮಾಡುತ್ತಿದ್ದು, ಈಗಾಗಲೇ ಕೆಲವು ಫಸ್ಟ್ ಲುಕ್ ಪೋಸ್ಟರ್ ಗಳು ಬಿಡುಗಡೆ ಆಗಿವೆ.[ರಾಜೀವ್ ಗಾಂಧಿ ಹತ್ಯೆ ತನಿಖೆಯಲ್ಲಿ ದರ್ಶನ್ ಕೈವಾಡ ಇಲ್ವಂತೆ]

Director AMR Ramesh's Kannada Movie 'Aaspota' in 4 languages

ಇನ್ನು ಈ ಮೊದಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಸುದ್ದಿ ಇತ್ತು. ಆದರೆ ಕೆಲವಾರು ಬದಲಾವಣೆಗಳಿಂದ ದರ್ಶನ್ ಅವರು ಈ ಚಿತ್ರದ ಭಾಗವಾಗುತ್ತಿಲ್ಲ. ಯಾರು ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಅನ್ನೋದು ಇನ್ನೇನು ಕೆಲವೇ ದಿನಗಳಲ್ಲಿ ತಿಳಿದು ಬರಲಿದೆ.

English summary
Director AMR Ramesh's Kannada Movie 'Aaspota' in 4 languages. The film is about the assassination of former prime minister Rajiv Gandhi and the events following that to find his killers.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada