Just In
Don't Miss!
- News
ಪೆಟ್ರೋಲ್, ಡೀಸೆಲ್ ದರ ಏರಿಕೆ: ಕೇಂದ್ರಕ್ಕೆ ಬಿಸಿ ಮುಟ್ಟಿಸಿದ ಮಲ್ಲಿಕಾರ್ಜುನ್ ಖರ್ಗೆ
- Education
UAS Dharwad Recruitment 2021: ಸೀನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಮಾ.10ಕ್ಕೆ ನೇರ ಸಂದರ್ಶನ
- Automobiles
ಹೊಸ ರೂಪದೊಂದಿಗೆ ರಸ್ತೆಗಿಳಿಯಲಿವೆ ತೆರೆಮರೆಗೆ ಸರಿದ ಜಟಕಾ ಬಂಡಿ
- Sports
ಐಎಸ್ಎಲ್: ಫೈನಲ್ಗಾಗಿ ನಾರ್ಥ್ ಈಸ್ಟ್, ಬಾಗನ್ ನಡುವೆ ಫೈನಲ್ ಫೈಟ್
- Lifestyle
ಮಾ.11ಕ್ಕೆ ಕುಂಭ ರಾಶಿಗೆ ಬುಧನ ಪ್ರವೇಶ: ನಿಮ್ಮ ಬದುಕಿನಲ್ಲಿ ಆಗಲಿದೆ ಈ ಬದಲಾವಣೆ
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಮಾ. 08ರ ಮಾರುಕಟ್ಟೆ ದರ ಇಲ್ಲಿದೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸುದೀಪ್ 'ಫ್ಯಾಂಟಮ್' ಸಿನಿಮಾ 'ವಿಕ್ರಾಂತ್ ರೋಣ' ಆಗಿದ್ದೇಕೆ? ನಿರ್ದೇಶಕರು ಹೇಳಿದ್ದೇನು?
ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷೆ ಫ್ಯಾಂಟಮ್ ಸಿನಿಮಾ ಈಗ ವಿಕ್ರಾಂತ್ ರೋಣ ಆಗ ಬದಲಾಗಿದೆ. ಇತ್ತೀಚಿಗಷ್ಟೆ ಚಿತ್ರದ ಟೈಟಲ್ ಬದಲಾದ ಬಗ್ಗೆ ಸಿನಿಮಾತಂಡ ಬಹಿರಂಗ ಪಡಿಸಿ, ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.
ಜನವರಿ 21ರಂದು ಚಿತ್ರದ ಬಗ್ಗೆ ದೊಡ್ಡ ಅನೌನ್ಸ್ ಮೆಂಟ್ ಇದೆ ಎಂದು ಹೇಳಿ, ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದ್ದ ಸಿನಿಮಾತಂಡ, 21ರಂದು ಸಿನಿಮಾದ ಟೈಟಲ್ ಫ್ಯಾಂಟಮ್ ಅಲ್ಲ ಇನ್ಮುಂದೆ ವಿಕ್ರಾಂತ್ ರೋಣ ಎಂದು ಬದಲಾವಣೆ ಮಾಡುವ ಅಚ್ಚರಿ ಮೂಡಿಸಿದರು. ಅಂದಹಾಗೆ ಫ್ಯಾಂಟಮ್ ಸಿನಿಮಾದ ಹೆಸರು ದಿಢೀರ್ ನೆ ವಿಕ್ರಾಂತ್ ರೋಣ ಎಂದು ಬದಲಾಗಲು ಕಾರಣವೇನು? ಎನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತಿದೆ. ಬಗ್ಗೆ ನಿರ್ದೇಶಕ ಅನೂಪ್ ಭಂಡಾರಿ ಉತ್ತರ ನೀಡಿದ್ದಾರೆ.
ಕನ್ನಡ ಬಿಗ್ಬಾಸ್ 8 ಯಾವಾಗ? ಆಯೋಜರು ಕೊಟ್ಟರು ಅಧಿಕೃತ ಉತ್ತರ
ವಿಕ್ರಾಂತ್ ರೋಣ ಸಿನಿಮಾದಲ್ಲಿ ಸುದೀಪ್ ಪಾತ್ರದ ಹೆಸರು ಸಹ ವಿಕ್ರಾಂತ್ ರೋಣ. ಕಿಚ್ಚ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಫಸ್ಟ್ ಲುಕ್ ಮತ್ತು ಪೋಸ್ಟರ್ ಗಳ ಮೂಲಕ ಗಮನ ಸೆಳೆಯುತ್ತಿರುವ ವಿಕ್ರಾಂತ್ ರೋಣ ಬಹುತೇಕ ಚಿತ್ರೀಕರಣ ಮುಗಿಸಿ, ಹಾಡಿನ ಚಿತ್ರೀಕರಣ ಬಾಕಿಯುಳಿಸಿಕೊಂಡಿದೆ.

ಟೈಟಲ್ ಬದಲಾದ ಬಗ್ಗೆ ಅನೂಪ್ ಭಂಡಾರಿ ಪ್ರತಿಕ್ರಿಯೆ
ಟೈಟಲ್ ಬದಲಾದ ಬಗ್ಗೆ ನಿರ್ದೇಶಕ ಅನೂಪ್ ಭಂಡಾರಿ 'ಫ್ಯಾಂಟಮ್ ಈಗ ವಿಕ್ರಾಂತ್ ರೋಣ ಆಗಿದೆ. ಯಾಕೆ ಅಂತ ಸುಮಾರು ಜನಕ್ಕೆ ಪ್ರಶ್ನೆ ಕಾಡುತ್ತಿರಬಹುದು. ಆದರೆ ಅದಕ್ಕೆ ಕಾರಣ ನೀವೆ. ಮೊದಲನೇ ದಿನ ಶೂಟ್ ಮಾಡಿದಾಗ ಸುದೀಪ್, ವಿಕ್ರಾಂತ್ ರೋಣ ಕೆಲಸಕ್ಕೆ ಹಾಜರಾದ ಎಂದು ಅರ್ಧ ಮುಖ ಇರುವ ಫೋಟೋ ಹಂಚಿಕೊಂಡಿದ್ದರು. ಅವತ್ತಿನಿಂದ ಇವತ್ತಿನ ವರೆಗೂ ಫ್ಯಾಂಟಮ್ ಎಷ್ಟು ಸದ್ದು ಮಾಡಿದೆಯೋ ಅದಕ್ಕಿಂತ ಹೆಚ್ಚೇ ವಿಕ್ರಾಂತ್ ರೋಣ ಹೆಸರು ಸದ್ದು ಮಾಡಿದೆ.'
ಬಿಗ್ ಬಾಸ್ ಕನ್ನಡ ಸೀಸನ್ 8: ಪ್ರೋಮೋ ಚಿತ್ರೀಕರಣದಲ್ಲಿ ಕಿಚ್ಚ ಸುದೀಪ್, ಫೋಟೋ ವೈರಲ್

ವಿಕ್ರಾಂತ್ ರೋಣ ಎಲ್ಲಿಂದನೋ ತೆಗೆದುಕೊಂಡ ಹೆಸರಿಲ್ಲ
'ವಿಕ್ರಾಂತ್ ರೋಣ ಎಲ್ಲಿಂದನೋ ತೆಗೆದುಕೊಂಡ ಹೆಸರಿಲ್ಲ. ಇದು ನಮ್ಮ ಸಿನಿಮಾದ ಹೀರೋ, ನಿಮ್ಮ ಹೀರೋ ಹೆಸರು. ನೀವೆಲ್ಲ ಮನಸಾರೆ ಇಷ್ಟ ಪಟ್ಟ ವಿಕ್ರಾಂತ್ ರೋಣ ಹೆಸರನ್ನು ಇಡೀ ಪ್ರಪಂಚಕ್ಕೆ ವಿಕ್ರಾಂತ್ ರೋಣ ಹೆಸರಲ್ಲೇ ಪರಿಚಯ ಮಾಡೋಣ ಅಂತ' ಎಂದು ಅನೂಪ್ ಭಂಡಾರಿ ಸಿನಿಮಾ ಟೈಟಲ್ ಬದಲಾದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಜನವರಿ 31ಕ್ಕೆ ಬುರ್ಜ್ ಖಲೀಫ ಮೇಲೆ ವಿಕ್ರಾಂತ್ ರೋಣ
ಅಂದಹಾಗೆ ಟೈಟಲ್ ಬದಲಾದ ಸಂತಸ ಒಂದೆಡೆಯಾದರೆ, ಪ್ರಪಂಚದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫ ಮೇಲೆ ವಿಕ್ರಾಂತ್ ರೋಣ ಟೈಟಲ್ ಲೋಗೋ ಅನಾವರಣಗೊಳಿಸಲು ಸಿನಿಮಾತಂಡ ಪ್ಲಾನ್ ಮಾಡಿದೆ. ಜನವರಿ 31 ರಂದು ಬುರ್ಜ್ ಖಲೀಫ ಮೇಲೆ ವಿಕ್ರಾಂತ್ ರೋಣ ಹೆಸರು ರಾರಾಜಿಸಲಿದೆ.

ಬುರ್ಜ್ ಖಲೀಫ ಮೇಲೆ ಕನ್ನಡದ ಮೊದಲ ನಟನ ಹೆಸರು
ಸಿನಿಮಾ ಜಗತ್ತಿನಲ್ಲಿ ಕಿಚ್ಚ ಸುದೀಪ್ 25 ವರ್ಷಗಳನ್ನು ಪೂರೈಸಿರುವ ಖುಷಿ ಹಿನ್ನೆಲೆ, ಪ್ರಪಂಚದ ಅತಿ ಎತ್ತರದ ಕಟ್ಟಡ ದುಬೈನ ಬುರ್ಜ್ ಖಲೀಫದ ಮೇಲೆ ಸುದೀಪ್ ಅವರ ಫೋಟೋ ಮತ್ತು ವಿಕ್ರಾಂತ್ ರೋಣ ಟೈಟಲ್ ಅನಾವರಣವಾಗಲಿದೆ. ಕನ್ನಡದ ಮೊದಲ ನಟನ ಫೋಟೋ ಮತ್ತು ಸಿನಿಮಾದ ಟೈಟಲ್ ಬುರ್ಜ್ ಖಲೀಫ ಮೇಲೆ ರಾರಾಜಿಸುತ್ತಿದೆ. ಸೂಪರ್ ಸ್ಟಾರ್ ರಜನಿಕಾಂತ್, ಶಾರೂಖ್ ಖಾನ್ ಅಂತಹ ಕೆಲವೇ ನಟರ ಫೋಟೋಗಳು ಈ ಬುರ್ಜ್ ಖಲೀಫ ಕಟ್ಟಡದ ಮೇಲೆ ಪ್ರದರ್ಶನವಾಗಿದೆ. ಈಗ ಸುದೀಪ್ ಅವರ ಫೋಟೋ ಪ್ರದರ್ಶನವಾಗುತ್ತಿದ್ದು, ಕನ್ನಡದ ಮೊದಲ ನಟ ಎನಿಸಿಕೊಳ್ಳುತ್ತಿದ್ದಾರೆ.