For Quick Alerts
  ALLOW NOTIFICATIONS  
  For Daily Alerts

  ಫ್ಯಾಂಟಮ್ ಬಳಿಕ ಕಿಚ್ಚನ ಜೊತೆ ಅನೂಪ್ ಭಂಡಾರಿ ಮತ್ತೊಂದು ಚಿತ್ರ

  |

  'ರಂಗಿತರಂಗ' ಖ್ಯಾತಿಯ ಅನೂಪ್ ಭಂಡಾರಿ ಸದ್ಯ ಕಿಚ್ಚ ಸುದೀಪ್ ಜೊತೆ 'ಫ್ಯಾಂಟಮ್' ಸಿನಿಮಾ ಮಾಡ್ತಿದ್ದಾರೆ. ಸುದೀಪ್ ಅವರ ಪಾತ್ರ, ಚಿತ್ರದ ಮೇಕಿಂಗ್, ಅದಕ್ಕಾಗಿ ನಿರ್ಮಿಸಿರುವ ಸೆಟ್ ಹಾಗೂ ಫಸ್ಟ್ ಲುಕ್ ಪೋಸ್ಟರ್ ಮತ್ತು ಟೀಸರ್‌ಗಳಿಂದ ಭಾರಿ ಕುತೂಹಲ ಮೂಡಿಸಿರುವ ಫ್ಯಾಂಟಮ್ ಇಂಡಸ್ಟ್ರಿಯಲ್ಲಿ ಹೊಸ ಟ್ರೆಂಡ್ ಸೃಷ್ಟಿಸುವ ಸಾಧ್ಯತೆ ಹೆಚ್ಚಿದೆ.

  25 ಸಲ ಹುಚ್ಚ ಸಿನಿಮಾನ ಥಿಯೇಟರ್ ನಲ್ಲಿ ನೋಡಿದ್ದೀನಿ | Kirik Keerthi | Filmibeat Kannada

  ಫ್ಯಾಂಟಮ್ ಬಿಡುಗಡೆಗೂ ಮುಂಚೆಯೇ ಕಿಚ್ಚ ಸುದೀಪ್ ಜೊತೆ ಇನ್ನೊಂದು ಚಿತ್ರ ಮಾಡಲು ಅನೂಪ್ ಭಂಡಾರಿಗೆ ಅವಕಾಶ ಸಿಕ್ಕಿದೆ. ಈ ಸಿನಿಮಾದ ಶೀರ್ಷಿಕೆ ಸಹ ಬಹಿರಂಗವಾಗಿದ್ದು, ಟೈಟಲ್ ಸಖತ್ ಸೌಂಡ್ ಮಾಡ್ತಿದೆ. ಮುಂದೆ ಓದಿ...

  ಸುದೀಪ್ ಜೊತೆ ಹೊಸ ಸಿನಿಮಾ ಘೋಷಣೆ

  ಸುದೀಪ್ ಜೊತೆ ಹೊಸ ಸಿನಿಮಾ ಘೋಷಣೆ

  ಅನೂಪ್ ನಿರ್ದೇಶನಕ್ಕೆ ಮತ್ತೊಂದು ಅವಕಾಶ ಕೊಟ್ಟ ಕಿಚ್ಚ ಸುದೀಪ್, ತಮ್ಮ ಕಿಚ್ಚ ಕ್ರಿಯೇಷನ್ಸ್ ಸಂಸ್ಥೆಯಲ್ಲಿ ತಯಾರಾಗಲಿರುವ ಮುಂದಿನ ಚಿತ್ರಕ್ಕೆ ಭಂಡಾರಿಯನ್ನು ನಿರ್ದೇಶಕರಾಗಿ ಆಯ್ಕೆ ಮಾಡಿದ್ದಾರೆ. ಈ ಕುರಿತು ಅಧಿಕೃತವಾಗಿ ಘೋಷಣೆಯಾಗಿದೆ.

  'ಫ್ಯಾಂಟಮ್' ಲೋಕಕ್ಕೆ ಲಂಡನ್ ನಿಂದ ಬಂದ ಸಂಜು: ವಿಶ್ ಮಾಡಿದ ವಿಕ್ರಾಂತ್ ರೋಣ

  ಹೆಸರು 'ಅಶ್ವತ್ಥಾಮ'

  ಹೆಸರು 'ಅಶ್ವತ್ಥಾಮ'

  ಸುದೀಪ್ ಬ್ಯಾನರ್‌ನಲ್ಲಿ ನಿರ್ಮಾಣವಾಗಲಿರುವ ಹೊಸ ಚಿತ್ರಕ್ಕೆ 'ಅಶ್ವತ್ಥಾಮ' ಎಂದು ಹೆಸರಿಡಲಾಗಿದ್ದು, ಟೈಟಲ್ ಪೋಸ್ಟರ್ ಬಿಡುಗಡೆಯಾಗಿದೆ. ಮಹಾಭಾರತದಲ್ಲಿರುವ ಅಶ್ವತ್ಥಾಮನ ಕುರಿತು ಕಥೆನಾ ಅಥವಾ ಅಶ್ವತ್ಥಾಮ ವ್ಯಕ್ತಿತ್ವವುಳ್ಳ ವ್ಯಕ್ತಿಯ ಕಥೆನಾ ಎಂಬ ಕುತೂಹಲ ಕಾಡ್ತಿದೆ. ಏಕಂದ್ರೆ, ಪೋಸ್ಟರ್‌ನಲ್ಲಿ ಬಿಲ್ಲು ಹಿಡಿದಿರುವ ಅಶ್ವತ್ಥಾಮನೂ ಇದ್ದಾನೆ, ಗನ್ ಹಿಡಿದಿರುವ ವ್ಯಕ್ತಿನೂ ಇದ್ದಾನೆ.

  ಹೀರೋ ಸದ್ಯಕ್ಕೆ ಅಂತಿಮ ಆಗಿಲ್ಲ

  ಹೀರೋ ಸದ್ಯಕ್ಕೆ ಅಂತಿಮ ಆಗಿಲ್ಲ

  ಅಂದ್ಹಾಗೆ, ಸುದೀಪ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ನಾಯಕ ಯಾರು ಎಂದು ಇನ್ನು ಅಂತಿಮವಾಗಿಲ್ಲ. ಹೀರೋ ಸೇರಿದಂತೆ ಉಳಿದ ಯಾವ ಕಲಾವಿದರು ಸಹ ಆಯ್ಕೆಯಾಗಿಲ್ಲ.

  ಫ್ಯಾಂಟಮ್ ಚಿತ್ರದ ಬಗ್ಗೆ

  ಫ್ಯಾಂಟಮ್ ಚಿತ್ರದ ಬಗ್ಗೆ

  ಅನೂಪ್ ಭಂಡಾರಿ ನಿರ್ದೇಶನ ಹಾಗೂ ಸುದೀಪ್ ನಾಯಕನಾಗಿ ನಟಿಸುತ್ತಿರುವ ಫ್ಯಾಂಟಮ್ ಸಿನಿಮಾ ಹೈದರಾಬಾದ್‌ನಲ್ಲಿ ಶೂಟಿಂಗ್ ನಡೆಯುತ್ತಿದೆ. ಈ ಚಿತ್ರದಲ್ಲಿ ನಿರೂಪ್ ಭಂಡಾರಿ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  English summary
  After Phantom, Anup Bhandari will directing new Movie 'Ashwatthama' under Kichcha Creations banner.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X