»   » ಹೊಸ ಪ್ರಯತ್ನಕ್ಕೆ ಕೈ ಹಾಕಿದ 'ಹುಲಿರಾಯ' ನಿರ್ದೇಶಕ

ಹೊಸ ಪ್ರಯತ್ನಕ್ಕೆ ಕೈ ಹಾಕಿದ 'ಹುಲಿರಾಯ' ನಿರ್ದೇಶಕ

Posted By:
Subscribe to Filmibeat Kannada

'ಹುಲಿರಾಯ' ಸಿನಿಮಾದ ನಂತರ ನಿರ್ದೇಶಕ ಅರವಿಂದ್ ಕೌಶಿಕ್ 'ಬೆಂಗಳೂರು ಇತ್ಯಾದಿ' ಸಿನಿಮಾ ಮಾಡುತ್ತಿರುವುದು ಎಲ್ಲರಿಗೂ ತಿಳಿದಿದೆ. ಇನ್ನು ಈಗಾಗಲೇ ಈ ಚಿತ್ರದ ಪೋಸ್ಟರ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ.

ವಿಶೇಷ ಏನೆಂದ್ರೆ, ಈಗ 'ಬೆಂಗಳೂರು ಇತ್ಯಾದಿ' ಸಿನಿಮಾದ ಮೂಲಕ ಅರವಿಂದ್ ಕೌಶಿಕ್ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಸಾಮಾನ್ಯವಾಗಿ ಎಲ್ಲರೂ ಸಿನಿಮಾ ಮುಗಿದ ನಂತರ ಪ್ರೇಕ್ಷಕರ ಬಳಿಗೆ ಹೋಗುತ್ತಾರೆ. ಆದರೆ ಇವರು ತಮ್ಮ ಹೊಸ ಚಿತ್ರ ಶುರುವಿನ ಹಂತದಲ್ಲಿಯೇ ತಮ್ಮ ಪ್ರೇಕ್ಷಕ ವರ್ಗವನ್ನು ಗುರುತಿಸಿ ಸಿನಿಮಾ ಮಾಡಲು ಹೊರಟಿದ್ದಾರೆ.

Director Arvind Koushik starred 'The Audience Film Club'

ಈಗಾಗಲೇ 'ದಿ ಆಡಿಯನ್ಸ್ ಫಿಲ್ಮ್ ಕ್ಲಬ್' ಎಂಬ ತಂಡವನ್ನು ಕಟ್ಟಿರುವ ಅವರು ಒಂದು ಒಳ್ಳೆಯ ಸಿನಿಮಾಗೆ ಒಂದು ಒಳ್ಳೆಯ ಪ್ರೇಕ್ಷಕ ವರ್ಗವನ್ನು ಸೃಷ್ಟಿ ಮಾಡುತ್ತಿದ್ದಾರೆ. ಜೊತೆಗೆ ಈ ತಂಡದ ಮೂಲಕವು ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಯೋಜನೆ ಇದೆ.

Director Arvind Koushik starred 'The Audience Film Club'

ಸೋ, ನಿಮಗೆ ಕೂಡ ಸಿನಿಮಾದಲ್ಲಿ ಆಸಕ್ತಿ ಇದ್ದು, ಹಾಡು, ಸಂಭಾಷಣೆ, ಕಥೆ ಬರೆಯುವ, ಮ್ಯೂಸಿಕ್ ನೀಡುವ ಅಥಾವ ಪೋಸ್ಟರ್ ಡಿಸೈನ್ ಮಾಡುವ ಈ ರೀತಿಯ ಪ್ರತಿಭೆ ನಿಮ್ಮ ಬಳಿ ಇದ್ದರೆ ಅದನ್ನು theaudiencefilmclub@gmail.com ಕಳುಹಿಸಬಹುದು.

English summary
'Huliraya' fame Director Arvind Koushik starred 'The Audience Film Club' ನಿರ್ದೇಶಕ ಅರವಿಂದ್ ಕೌಶಿಕ್ 'ದಿ ಆಡಿಯನ್ಸ್ ಫಿಲ್ಮ್ ಕ್ಲಬ್' ಎಂಬ ತಂಡವನ್ನು ಶುರು ಮಾಡಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada