»   » ಕಗ್ಗಂಟಾದ ಚೇರನ್ ಪುತ್ರಿ ರಿಯಲ್ ಲವ್ ಸ್ಟೋರಿ

ಕಗ್ಗಂಟಾದ ಚೇರನ್ ಪುತ್ರಿ ರಿಯಲ್ ಲವ್ ಸ್ಟೋರಿ

Posted By:
Subscribe to Filmibeat Kannada

'ಸವಿ ಸವಿ ನೆನಪು ಸಾವಿರ ನೆನಪು...' ಎಂದು ಸೈಕಲ್ ಹತ್ತಿ ಕಿಚ್ಚ ಸುದೀಪ್ 'ಮೈ ಆಟೋಗ್ರಾಫ್ 'ಚಿತ್ರದಲ್ಲಿ ಹಾಡುತ್ತಾ ಸಾಗಿದ್ದು ಎಲ್ಲರಿಗೂ ನೆನಪಿದೆ ಅಲ್ವಾ, ಇದೇ ಚಿತ್ರದ ಮೂಲ ಚಿತ್ರದ ನಾಯಕ ಕಮ್ ನಿರ್ದೇಶಕ ಚೇರನ್ ಈಗ ರೀಲ್ ಲೈಫ್ ನಲ್ಲಿ ಲವ್ ಸ್ಟೋರಿ ಜಂಜಾಟದಲ್ಲಿ ಸಿಲುಕಿದ್ದಾರೆ.

ನಿರ್ದೇಶಕ ಚೇರನ್ ಅವರು ತನ್ನ ಮಗಳ ಪ್ರೇಮಕಥೆಗೆ ಸುಖಾಂತ್ಯ ನೀಡಲಾಗದೆ ಚೆನ್ನೈ ಪೊಲೀಸರ ನೆರವು ಬೇಡಿರುವ ಘಟನೆ ನಡೆದಿದೆ. ತಮ್ಮ ಮಗಳನ್ನು ಪ್ರೀತಿಸುತ್ತಿರುವ ಚಂದ್ರಶೇಖರನ್ ವಿರುದ್ಧ ಕ್ರಮ ಜರುಗಿಸುವಂತೆ ಚೇರನ್ ಅವರು ಚೆನ್ನೈ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.

ಚೇರನ್ ಅವರ ಜೊತೆಗೆ ಶರತ್ ಕುಮಾರ್, ರಾಧಾರವಿ, ಆಮೀರ್ ಹಾಗೂ ಎಸ್ಪಿ ಜನಾನಾಥನ್ ಮುಂತಾದವರು ಪೊಲೀಸರ ಕಚೇರಿಗೆ ಭೇಟಿ ಕೊಟ್ಟು ಎಂಒಪಿ ವೈಷ್ಣವ್ ಕಾಲೇಜಿನ 20ರ ಹರೆಯದ ಚೇರನ್ ಪುತ್ರಿ ದಾಮಿನಿ ಹಾಗೂ ಚಂದ್ರಶೇಖರ್ ಪ್ರೇಮಕಥೆಯನ್ನು ಹೇಳಿದ್ದಾರೆ.

ಇತ್ತೀಚೆಗೆ ಚೇರನ್ ಪುತ್ರಿ ದಾಮಿನಿ ಅವರು ಪೊಲೀಸ್ ಠಾಣೆಗೆ ಭೇಟಿ ಕೊಟ್ಟು ತಮ್ಮ ತಂದೆ ಅವರು ನನ್ನ ಪ್ರಿಯಕರ ಚಂದ್ರಶೇಖರನ್ ಗೆ ಬೆದರಿಕೆ ಹಾಕುತ್ತಿದ್ದಾರೆ. ಚಂದ್ರುನ ಮನೆಗೆ ಕರೆಸಿಕೊಂಡು ಮಾತನಾಡಿದ ನಂತರ ಅವನಿಗೆ ಚೆನ್ನಾಗಿ ಬೈದರು. ಮಗಳ ತಂಟೆಗೆ ಬಂದರೆ ಕೊಲೆ ಮಾಡುತ್ತೇನೆ ಎಂದು ಹೆದರಿಸಿದರು. ನನಗೆ ತುಂಬಾ ಭಯವಾಗಿದೆ ರಕ್ಷಣೆ ಕೊಡಿ ಎಂದು ದೂರು ನೀಡಿದ್ದಳು. ಇದಕ್ಕೆ ಚೇರನ್ ನೀಡಿದ ಸಮರ್ಥನೆ ಏನು, ಪ್ರೇಮ ಚಿತ್ರಗಳ ನಿರ್ದೇಶಕ ಪ್ರೀತಿಗೆ ಅಡ್ಡಿಪಡಿಸುತ್ತಿರುವುದೇಕೆ ಮುಂದೆ ಓದಿ...

ಚೇರನ್ ಸುದ್ದಿಗೋಷ್ಠಿ

ಪತ್ನಿ ಸೆಲ್ವರಾಣಿ ಜೊತೆ ಚೇರನ್ ಸುದ್ದಿಗೋಷ್ಠಿ. 'ನಾನು ಪ್ರೀತಿಗೆ ಎಂದಿಗೂ ವಿರೋಧಿಯಲ್ಲ. ಆದರೆ, ಚಂದ್ರು ಉತ್ತಮ ವ್ಯಕ್ತಿಯಲ್ಲ. ನನ್ನ ಮಗಳ ಭವಿಷ್ಯದ ದೃಷ್ಟಿಯಿಂದ ನಾಲ್ಕು ಒಳ್ಳೆ ಮಾತು ಹೇಳಿ ಕಳಿಸಿದೆ. ನಾನು ನನ್ನ ಪತ್ನಿ ಸೆಲ್ವರಾಣಿ ಇಬ್ಬರು ಪ್ರೀತಿಸಿ ಮದುವೆಯಾಗಿದ್ದು ಎಲ್ಲರಿಗೂ ಗೊತ್ತಿರುವ ವಿಷಯ.

ನಾನು ಜಾತಿ, ಮತ ಪಂಥ, ಭಾಷೆಗಳನ್ನು ಮೀರಿದ ಪ್ರೀತಿಯನ್ನು ಬೆಂಬಲಿಸಿದ್ದೇನೆ. ಆದರೆ, ಇವರಿಬ್ಬರ ಪ್ರೇಮಕ್ಕೆ ಅಡ್ದಿಯಾಗಿರುವುದು ಚಂದ್ರುವಿನ ಕೆಟ್ಟ ವ್ಯಕ್ತಿತ್ವ ಎಂದು ಚೇರನ್ ಹೇಳಿದ್ದಾರೆ.

ಕಣ್ಣೀರಿಟ್ಟ ನಿರ್ದೇಶಕ

ಪುತ್ರಿ ದಾಮಿನಿ ಪೋಷಕರ ವಿರುದ್ಧ ದೂರು ನೀಡಿದ ವಿಷಯ ಸಹಿಸಿಕೊಳ್ಳಲಾಗದೆ ಕಣ್ಣೀರಿಟ್ಟ ನಿರ್ದೇಶಕ ಚೇರನ್

ಚೇರನ್ ಜೊತೆಗೆ ಆಮೀರ್

ಚೇರನ್ ಅವರ ಜೊತೆಗೆ ಶರತ್ ಕುಮಾರ್, ರಾಧಾರವಿ, ಆಮೀರ್ ಹಾಗೂ ಎಸ್ಪಿ ಜನಾನಾಥನ್ ಮುಂತಾದವರು ಪೊಲೀಸರ ಕಚೇರಿಗೆ ಭೇಟಿ ಕೊಟ್ಟು ದೂರು ಸಲ್ಲಿಸಿದ ನಂತರ ಸುದ್ದಿಗೋಷ್ಠಿ ನಡೆಸಿದರು.

ಸೆಲ್ವರಾಣಿ ಅಸ್ವಸ್ಥ

ಚೇರನ್ ಅವರ ಪತ್ನಿ ಸೆಲ್ವರಾಣಿ ಅವರು ತೀವ್ರ ಮಾನಸಿಕ ನೋವು ಅನುಭವಿಸಿ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ.

ದಾಮಿನಿಗೂ ಸಮನ್ಸ್

ದಾಮಿನಿ ಹಾಗೂ ಚಂದ್ರಶೇಖರನ್ ಅವರನ್ನು ಪ್ರತ್ಯೇಕವಾಗಿ ಕರೆಸಿಕೊಂಡ ಪೊಲೀಸರು ವಿಚಾರಣೆ ನಡೆಸಿ ವಾಪಸ್ ಕಳಿಸಿದ್ದಾರೆ.

ಚೇರನ್ ಪ್ರಶ್ನೆ

ಪ್ರಣಯ ಚಿತ್ರಗಳನ್ನು ಭಾವನಾತ್ಮಕ ದೃಶ್ಯಗಳನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿರುವ ನಿರ್ದೇಶಕ ಚೇರನ್ ಅವರು ಮಾತು ಮುಂದುವರೆಸಿ, ಕಂಡು ಕಂಡು ಮಗಳನ್ನು ಒಬ್ಬ ಕೆಟ್ಟ ಹುಡುಗನ ಕೈಗೆ ನೀಡುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ.

ನಿರ್ದೇಶಕ ಅಮೀರ್

ದಾಮಿನಿಗೆ ಚಂದ್ರು ಮೋಡಿ ಮಾಡಿಬಿಟ್ಟಿದ್ದಾನೆ. ಹೀಗಾಗಿ ಸಮಸ್ಯೆ ಉಲ್ಬಣಿಸಿದೆ. ದಾಮಿನಿ ಜು.10ರಂದು ಚಂದ್ರು ವಿರುದ್ಧವೇ ದೂರು ನೀಡಿದ್ದಾರೆ. ಚಂದ್ರು ಒಬ್ಬ ವಿಕೃತ ಮನಸ್ಸಿನ ವ್ಯಕ್ತಿ ಅವನಿಂದ ದೂರು ಉಳಿಯುತ್ತೇನೆ ಎಂದು ದಾಮಿನಿ ಹೇಳಿಕೊಂಡಿದ್ದಳು. ಅದರೆ, ಇತ್ತೀಚೆಗೆ ಮನಸ್ಸು ಬದಲಾಯಿಸಿ ತನ್ನ ಪೋಷಕರ ವಿರುದ್ಧವೇ ದೂರು ನೀಡಿದ್ದಾಳೆ

ದಾಮಿನಿ ಮನೆಗೆ ಬರ್ತಾಳಾ

ಚೆನ್ನೈನ ಥೌಸಂಡ್ ಲೈಟ್ಸ್ ಪೊಲೀಸ್ ಠಾಣೆಗೆ ಚಂದ್ರು ಹಾಗೂ ದಾಮಿನಿ ಇಬ್ಬರು ಭೇಟಿ ನೀಡಿದ್ದಾರೆ. ಇಬ್ಬರನ್ನು ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಲಾಗಿದೆ. ಸರ್ಕಾರಿ ವಸತಿ ಗೃಹದಲ್ಲಿ ದಾಮಿನಿ ನೆಲೆಸಿದ್ದು ,ಚಂದ್ರು ತನ್ನ ಮನೆಗೆ ತೆರಳಿದ್ದಾನೆ. ತಮ್ಮ ಪುತ್ರಿ ಚಂದ್ರುವನ್ನು ತೊರೆದು ಮನೆಗೆ ಹಿಂತಿರುಗುವ ಭರವಸೆ ಇದೆ ಎಂದು ಚೇರನ್ ಹೇಳಿದ್ದಾರೆ.

English summary
Tamil film director Cheran approached the Chennai city 
 police commissioner to seek action against Chandrasekhar, the lover of his daughter.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada