»   » ನಿಖಿಲ್ ಕುಮಾರ್ ಎರಡನೇ ಸಿನಿಮಾದಿಂದ ನಿರ್ದೇಶಕ ಚೇತನ್ ಔಟ್!

ನಿಖಿಲ್ ಕುಮಾರ್ ಎರಡನೇ ಸಿನಿಮಾದಿಂದ ನಿರ್ದೇಶಕ ಚೇತನ್ ಔಟ್!

Posted By:
Subscribe to Filmibeat Kannada

ನಟ ನಿಖಿಲ್ ಕುಮಾರ್ ಎರಡನೇ ಸಿನಿಮಾದಿಂದ ನಿರ್ದೇಶಕ ಚೇತನ್ ಹೊರಗೆ ಬಂದಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಕೆಲ ದಿನಗಳಿಂದ ಹರಿದಾಡಿತ್ತು. ಈಗ ಆ ಸುದ್ದಿ ನಿಜವಾಗಿದೆ. ನಿಖಿಲ್ ಚಿತ್ರದಿಂದ ಚೇತನ್ ಔಟ್ ಆಗಿದ್ದಾರೆ.

'ಬಹದ್ದೂರ್' ಸಿನಿಮಾದ ಗೆಲುವಿನ ನಂತರ 'ಭರ್ಜರಿ' ಸಿನಿಮಾ ಶುರು ಮಾಡಿದ್ದ ಚೇತನ್, ಆ ಚಿತ್ರದ ಜೊತೆಗೆ ನಿಖಿಲ್ ಕುಮಾರ್ ಎರಡನೇ ಸಿನಿಮಾವನ್ನೂ ನಿರ್ದೇಶನ ಮಾಡುವುದಕ್ಕೆ ಸಜ್ಜಾದರು. ಆದರೆ ಈಗ ಚೇತನ್ ನಿಖಿಲ್ ಸಿನಿಮಾದಿಂದ ಹಿಂದೆ ಸರಿದಿದ್ದಾರೆ. ಮುಂದೆ ಓದಿ...

ನಿರ್ದೇಶಕರ ಸ್ಪಷ್ಟನೆ

ನಿಖಿಲ್ ಕುಮಾರ್ ಎರಡನೇ ಸಿನಿಮಾದಿಂದ ನಿರ್ದೇಶಕ ಚೇತನ್ ಹೊರಗೆ ಬಂದಿರುವುದು ಪಕ್ಕಾ ಆಗಿದೆ. ಈ ವಿಷಯವನ್ನು ಸ್ವತಃ ಚೇತನ್ ನಿಮ್ಮ 'ಫಿಲ್ಮಿ ಬೀಟ್ ಕನ್ನಡ'ಕ್ಕೆ ಸ್ಪಷ್ಟ ಪಡಿಸಿದ್ದಾರೆ.

ಕಾರಣ ಏನು?

'ಭರ್ಜರಿ' ಸಿನಿಮಾದ ಕೆಲಸಗಳು ಇನ್ನೂ ಬಾಕಿ ಇದ್ದು, ಆ ಚಿತ್ರದ ಜೊತೆ ನಿಖಿಲ್ ಸಿನಿಮಾವನ್ನೂ ನಿರ್ದೇಶನ ಮಾಡುವುದು ಕಷ್ಟ ಆಗುತ್ತದೆ ಅಂತ ಚೇತನ್ ಈ ನಿರ್ಧಾರಕ್ಕೆ ಬಂದಿದ್ದಾರೆ.

ತಯಾರಿ ಆಗಿತ್ತು

ನಿಖಿಲ್ ಕುಮಾರ್ ಸಿನಿಮಾಗಾಗಿ ಈಗಾಗಲೇ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಚೇತನ್ ರೆಡಿ ಮಾಡಿದ್ದರು. ಆದರೆ ಈ ಸಿನಿಮಾವನ್ನು ಈಗ ಅವರು ಪೂರ್ಣಗೊಳಿಸುತ್ತಿಲ್ಲ.

ಚೇತನ್ ಕಥೆಯೇ ಇರುತ್ತೆ

ಚೇತನ್ ಅವರ ಕಥೆ ಕುಮಾರ ಸ್ವಾಮಿ ಸೇರಿದಂತೆ ಚಿತ್ರತಂಡಕ್ಕೆ ತುಂಬ ಇಷ್ಟ ಆಗಿತ್ತು. ಆ ಕಾರಣದಿಂದ ನಿಖಿಲ್ ಸಿನಿಮಾದಲ್ಲಿ ಚೇತನ್ ಅವರ ಕಥೆಯನ್ನು ಉಳಿಸಿಕೊಳ್ಳಲಾಗಿದೆಯಂತೆ.

ಹೊಸ ನಿರ್ದೇಶಕರ ಹುಡುಕಾಟ

ಚೇತನ್ ಅವರ ಕಥೆಗೆ ಈಗ ಬೇರೆ ನಿರ್ದೇಶಕರ ಕೈ ನಲ್ಲಿ ನಿರ್ದೇಶನ ಮಾಡಿಸುವ ಪ್ಲಾನ್ ನಲ್ಲಿದೆ ನಿಖಿಲ್ ಕುಮಾರ್ ಅಂಡ್ ಟೀಂ.

ಈಗಾಗಲೇ ಶುರು ಆಗಬೇಕಿತ್ತು

ಅಂದುಕೊಂಡಂತೆ ಆಗಿದ್ದರೆ ನಿಖಿಲ್ ಕುಮಾರ್ ಎರಡನೇ ಸಿನಿಮಾದ ಚಿತ್ರೀಕರಣ ಈಗಾಗಲೇ ಶುರು ಆಗಬೇಕಿತ್ತು. ಆದರೆ, ಈಗ ನಿರ್ದೇಶಕರನ್ನು ಬದಲಾಯಿಸುವ ಅನಿವಾರ್ಯತೆ ಚಿತ್ರತಂಡಕ್ಕೆ ಎದುರಾಗಿದೆ.

English summary
Kannada Director Chethan Kumar Dropped From Nikhil Kumar's 2nd Movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada