ಸಂಸದೆ ಸುಮಲತಾ ಭೇಟಿ ಮಾಡಿದ ಗುರುದೇಶಪಾಂಡೆ: ಶೀಘ್ರದಲ್ಲೇ ಸರ್ಪ್ರೈಸ್!

ಮಂಡ್ಯ ಸಂಸದೆ ಹಾಗೂ ಹಿರಿಯ ನಟಿ ಸುಮಲತಾ ಅಂಬರೀಶ್ ಅವರನ್ನು ನಿರ್ದೇಶಕ ಗುರುದೇಶ ಪಾಂಡೆ ಭೇಟಿ ಮಾಡಿದ್ದಾರೆ. ಈ ಫೋಟೋವನ್ನು ತಮ್ಮ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ನಿರ್ದೇಶಕ ''ಸದ್ಯದಲ್ಲೇ ವಿಶೇಷವಾದ ಸುದ್ದಿ ಬರಲಿದೆ'' ಎಂದು ತಿಳಿಸಿದ್ದಾರೆ.

ಗುರು ದೇಶಪಾಂಡೆ ಸಂಸದೆ ಸುಮಲತಾ ಅವರನ್ನು ಯಾವ ವಿಚಾರಕ್ಕೆ ಭೇಟಿ ಮಾಡಿದ್ದಾರೆ ಎನ್ನುವುದು ಸದ್ಯಕ್ಕೆ ಕುತೂಹಲ ಮೂಡಿಸಿದ್ದು, ಅಧಿಕೃತವಾಗಿ ಹೊರಬೀಳಬೇಕಿದೆ.

ಈ ಕಡೆ ಜಂಟಲ್ ಮ್ಯಾನ್ ಸಿನಿಮಾ ನಿರ್ಮಾಣದ ನಂತರ ಗುರುದೇಶಪಾಂಡೆ ಮತ್ತೊಂದು ಚಿತ್ರವನ್ನು ಆರಂಭಿಸಲು ಸಜ್ಜಾಗಿದೆ. ನಟ ಅಜಯ್ ರಾವ್ ನಟಿಸಲಿರುವ ಚಿತ್ರಕ್ಕೆ ಗುರುದೇಶಪಾಂಡೆ ಬಂಡವಾಳ ಹಾಕಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

 Director guru deshpande Meet Mp Sumalatha

ಅಜಯ್ ರಾವ್ ನಟಿಸಲಿರುವ ಈ ಚಿತ್ರಕ್ಕೆ ನವನಿರ್ದೇಶಕ ಶಂಕರ್ ಆಕ್ಷನ್ ಕಟ್ ಹೇಳಲಿದ್ದು, ನಿರ್ದೇಶಕ ಶಶಾಂಕ್ ಕಥೆ ಬರೆದಿದ್ದಾರೆ. ಈ ಚಿತ್ರವನ್ನು ಗುರುದೇಶಪಾಂಡೆ ತಮ್ಮ ಜಿ ಸಿನಿಮಾಸ್ ಬ್ಯಾನರ್‌ ಅಡಿಯಲ್ಲಿ ತಯಾರಿಸಲಿದ್ದಾರೆ.

ಇನ್ನು ಸಂಸದೆಯಾದ ಬಳಿಕ ಸುಮಲತಾ ಸಿನಿಮಾಗಳಲ್ಲಿ ನಟಿಸುವುದನ್ನು ಕಡಿಮೆ ಮಾಡಿದ್ದಾರೆ. ಅಲ್ಲೊಂದು ಇಲ್ಲೊಂದು ಚಿತ್ರಕ್ಕೆ ಮಾತ್ರ ಸಹಿ ಹಾಕುತ್ತಿದ್ದಾರೆ. ಸದ್ಯ ದರ್ಶನ್ ನಟಿಸುತ್ತಿರುವ ರಾಜವೀರ ಮದಕರಿ ನಾಯಕ ಚಿತ್ರದಲ್ಲಿ ಸುಮಲತಾ ಕಾಣಿಸಿಕೊಳ್ಳುತ್ತಿದ್ದಾರೆ.

More from Filmibeat

English summary
Kannada director guru deshpande has meet Mp Sumalatha and he shared photos said ''Something interesting coming soon...........''.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X