For Quick Alerts
  ALLOW NOTIFICATIONS  
  For Daily Alerts

  'ಬಡವ ರಾಸ್ಕಲ್'ಗಾಗಿ ಮತ್ತೆ ಒಂದಾದ 'ಸ್ಪೆಷಲ್' ಜೋಡಿ ಧನಂಜಯ್ ಮತ್ತು ಗುರುಪ್ರಸಾದ್

  |

  ಸ್ಯಾಂಡಲ್ ವುಡ್ ನಟ ಧನಂಜಯ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಧನಂಜಯ್ ನಿರ್ಮಾಣದ ಮತ್ತು ನಟನೆಯ ಬಡವ ರಾಸ್ಕಲ್ ಸಿನಿಮಾದ ಚಿತ್ರೀಕರಣ ಮುಕ್ತಾಯಗೊಳಿಸಿದ್ದಾರೆ. ವಿಶೇಷ ಅಂದರೆ ಈ ಸಿನಿಮಾದಲ್ಲಿ ಮಠ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಕಾಣಿಸಿಕೊಂಡಿದ್ದಾರೆ.

  ಧನಂಜಯ್ ನಟನೆಯ ಮೊದಲ ಸಿನಿಮಾ ಡೈರೆಕ್ಟರ್ ಸ್ಪೆಷಲ್ ಚಿತ್ರಕ್ಕೆ ಗುರು ಪ್ರಸಾದ್ ನಿರ್ದೇಶನ ಮಾಡಿದ್ದಾರೆ. ಬಳಿಕ ಎರಡನೇ ಸಲ ಸಿನಿಮಾ ಮೂಲಕ ಮತ್ತೆ ಇಬ್ಬರು ಒಂದಾಗಿದ್ದಾರೆ. ಈ ಸಿನಿಮಾ ಬಳಿಕ ಇಬ್ಬರ ನಡುವೆ ವೈಮನಸ್ಸು ಮೂಡಿ ಇಬ್ಬರು ಮಾತನಾಡುತ್ತಿರಲಿಲ್ಲ. ಆದರೀಗ ಇಬ್ಬರು ವೈಮನಸ್ಸು ಮರೆತು ಒಂದೇ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ.

  ತನ್ನ ಆಸೆಗೆ ಜೊತೆಯಾಗಿ ನಿಂತ ನೂರು ಕಾರ್ಮಿಕರಿಗೆ ಉಡುಗೊರೆ ನೀಡಿದ ಧನಂಜಯ್ತನ್ನ ಆಸೆಗೆ ಜೊತೆಯಾಗಿ ನಿಂತ ನೂರು ಕಾರ್ಮಿಕರಿಗೆ ಉಡುಗೊರೆ ನೀಡಿದ ಧನಂಜಯ್

  ಬಡವ ರಾಸ್ಕಲ್ ಸಿನಿಮಾದಲ್ಲಿ ಗುರುಪ್ರಸಾದ್ ನಟಿಸಬೇಕು ಎನ್ನುವುದು ಧನಂಜಯ್ ಆಸೆಯಂತೆ. ಧನಂಜಯ್ ಬಯಕೆಯಂತೆ ಗುರು ಪ್ರಸಾದ್ ಬಡವ ರಾಸ್ಕಲ್ ಸಿನಿಮಾದಲ್ಲಿ ನಟಿಸಿದ್ದಾರೆ. ಇಬ್ಬರನ್ನು ಮತ್ತೆ ಒಟ್ಟಿಗೆ ನೋಡುತ್ತಿರುವುದು ಅಭಿಮಾನಿಗಳಿಗೆ ಸಂತಸ ಮೂಡಿಸಿದೆ.

  ಅಂದ್ಹಾಗೆ ಗುರುಪ್ರಸಾದ್ ಬಡವ ರಾಸ್ಕಲ್ ಸಿನಿಮಾದ ಕ್ಲೈಮ್ಯಾಕ್ಸ್ ನಲ್ಲಿ ಕಾಣಿಸಿಕೊಳ್ಳುತ್ತಾರಂತೆ. ಗುರು ಪ್ರಸಾದ್ ಎಂಟ್ರಿಯಿಂದ ಬಡವ ರಾಸ್ಕಲ್ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಇದೀಗ ಚಿತ್ರೀಕರಣ ಮುಗಿಸಿ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ.

  'ಬಡವ ರಾಸ್ಕಲ್' ಸಿನಿಮಾ ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿದ ಖುಷಿಗೆ ಧನಂಜಯ್, ಜೊತೆಯಲ್ಲಿ ನಿಂತು ಕೆಲಸ ಮಾಡಿದ ಕಾರ್ಮಿಕರಿಗೆ ವಿಶೇಷವಾದ ಉಡುಗೊರೆ ನೀಡಿದ್ದಾರೆ. ಚಿತ್ರೀಕರಣದ ಕೊನೆಯ ದಿವಸ ಚಿತ್ರಕ್ಕಾಗಿ ದುಡಿದ ನೂರಕ್ಕೂ ಹೆಚ್ಚು ಕಾರ್ಮಿಕರಿಗೆ ದಿನಬಳಕೆಯ ‌ವಸ್ತುಗಳಾದ ಕುಕ್ಕರ್, ತವ, ಹಾಟ್ ವಾಟರ್ ಬಾಟಲ್ ಮುಂತಾದ ವಸ್ತುಗಳನ್ನು ಉಡುಗೊರೆ ನೀಡಿ ಗಮನ ಸೆಳೆದಿದ್ದಾರೆ.

  ಪ್ರೇಮ್, ರಚಿತಾ ರಾಮ್ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ರಾಣಾ | Filmibeat Kannada

  ಧನಂಜಯ್ ನಿರ್ಮಾಣದ ಮೊದಲ ಚಿತ್ರ ಬಡವ ರಾಸ್ಕಲ್ ಗೆ ಶಂಕರ್ ಗುರು ನಿರ್ದೇಶನ ಮಾಡಿದ್ದಾರೆ. ಅಮೃತಾ ಅಯ್ಯಂಗರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ವಾಸುಕಿ ವೈಭವ್ ಸಂಗೀತ ನೀಡಿದ್ದು, ಪ್ರೀತಾ ಜಯರಾಂ ಅವರ ಛಾಯಾಗ್ರಹಣ ಇದೆ.

  English summary
  Director Guru Prasad playing important role in Dhananjay starrer Badava Rascal movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X