»   » 'ಡಾಲಿ' ಧನಂಜಯ್ ಬಗ್ಗೆ ಕೇಳಿದ್ರೆ ಗುರುಪ್ರಸಾದ್ ಹೀಗೆ ಹೇಳಿದ್ದಾರೆ !

'ಡಾಲಿ' ಧನಂಜಯ್ ಬಗ್ಗೆ ಕೇಳಿದ್ರೆ ಗುರುಪ್ರಸಾದ್ ಹೀಗೆ ಹೇಳಿದ್ದಾರೆ !

Posted By:
Subscribe to Filmibeat Kannada

'ಮಠ' ಗುರುಪ್ರಸಾದ್ ಮತ್ತು ಧನಂಜಯ್ ನಡುವೆ ವಾರ್ ನಡೆದದ್ದು ಇಡೀ ಗಾಂಧಿನಗರಕ್ಕೆ ಗೊತ್ತಿರುವ ವಿಷಯ. ಮೊದಲೆರಡು ಹಿಟ್ ಸಿನಿಮಾ ಮಾಡಿದ್ದ ಗುರುಪ್ರಸಾದ್ ತಮ್ಮ ಮೂರನೇ ಚಿತ್ರಕ್ಕೆ ನಟ ಧನಂಜಯ್ ಅವರನ್ನು ಪರಿಚಯ ಮಾಡಿದ್ದರು. ಆ ಸಿನಿಮಾ ದೊಡ್ಡ ಕಮಾಲ್ ಮಾಡದಿದ್ದರು ಗುರು ಶಿಷ್ಯ ಇಬ್ಬರು ಸಂತೋಷದಿಂದ ಇದ್ದರು.

ಆದರೆ 'ಎರಡನೇ ಸಲ' ಸಿನಿಮಾದ ವೇಳೆಗೆ ಗುರುಪ್ರಸಾದ್ ಮತ್ತು ಧನಂಜಯ್ ನಡುವೆ ಬಿರುಕು ಮೂಡಿತು. ನಿರ್ಮಾಪಕರ ಜೊತೆಗೆ ಕಿರಿಕ್ ಆಗಿದ್ದ ಕಾರಣ ಗುರು ತಮ್ಮ ಸಿನಿಮಾವನ್ನು ತಾವೇ ಕೈ ಬಿಟ್ಟಿದ್ದರು. ಆದರೆ ಒಬ್ಬ ನಟನಾಗಿ ಧನಂಜಯ್ ಆ ಸಿನಿಮಾದ ಪ್ರಚಾರಕ್ಕೆ ಹೋಗಿದ್ದರು. ತನ್ನ ಶಿಷ್ಯ ತನ್ನ ಮಾತನ್ನೇ ಮೀರಿದಾಗ ಗುರು ಕೆಂಡಾಮಂಡಲ ಆದರು. ಮುಂದೆ ಗುರು ಶಿಷ್ಯ ಇಬ್ಬರ ನಡುವೆ ಯುದ್ಧವೇ ನಡೆಯಿತು. ಅದೆಲ್ಲ ಮುಗಿದ ಮೇಲೆ ಗುರು ಪ್ರಸಾದ್ ಧನಂಜಯ್ ಇಬ್ಬರು ತಮ್ಮ ತಮ್ಮ ದಾರಿ ನೋಡಿಕೊಂಡರು.

'ಡಾಲಿ' ಧನಂಜಯ್ ಕಷ್ಟದ ದಿನಗಳನ್ನ ಬಿಚ್ಚಿಟ್ಟ ಸ್ನೇಹಿತ 'ಸಿಂಹಾಜಿ'

ಆದರೆ ಈಗ ಧನಂಜಯ್ ಬಗ್ಗೆ ಮತ್ತೆ ಗುರುಪ್ರಸಾದ್ ಮಾತನಾಡಿದ್ದಾರೆ. 'ಡಾಲಿ' ಪಾತ್ರದ ಬಗ್ಗೆ ಕೇಳಿದ್ದಕ್ಕೆ ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ. ಮುಂದೆ ಓದಿ...

ಬಾಯಿ ಬಿಚ್ಚಿದ ಗುರು

ಧನಂಜಯ್ ಅವರ 'ಟಗರು' ಸಿನಿಮಾದ 'ಡಾಲಿ' ಪಾತ್ರದ ಬಗ್ಗೆ ಇಡೀ ಕನ್ನಡ ಚಿತ್ರರಂಗ ಮಾತನಾಡುತ್ತಿದೆ. ಆದರೆ ಈ ಬಗ್ಗೆ ನಿರ್ದೇಶಕ ಗುರುಪ್ರಸಾದ್ ಏನು ಹೇಳುತ್ತಾರೆ ಎನ್ನುವ ಕುತೂಹಲ ಅನೇಕರಲ್ಲಿ ಇತ್ತು. ಅದೇ ರೀತಿ ಈಗ ತಮ್ಮ ಶಿಷ್ಯನ ಬಗ್ಗೆ ಗುರು ಒಂದು ಹೇಳಿಕೆ ನೀಡಿದ್ದಾರೆ. ಧನಂಜಯ್ ಸಿನಿಮಾಗಳು ಸಕ್ಸಸ್ ಆಗಲ್ಲ ಎಂದಿದ್ದ ಗುರು ಈಗ ಡಾಲಿ ಬಗ್ಗೆ ಮಾತನಾಡಿದ್ದಾರೆ.

Director Guruprasad rescues a Insane Person in Gokarna
''ಚೆನ್ನಾಗಿರಲಿ.. ದೂರ ಇರಲಿ..''

''ಚೆನ್ನಾಗಿರಲಿ.. ದೂರ ಇರಲಿ..''

ಕೆಲ ದಿನಗಳ ಹಿಂದೆ ನಿರ್ದೇಶಕಿ ರೂಪ ಅಯ್ಯರ್ ಅವರ 'ನಮೋ' ಸಿನಿಮಾದ ಪತ್ರಿಕಾಗೋಷ್ಠಿ ಇತ್ತು. ಈ ಚಿತ್ರತಂಡದಲ್ಲಿ ಒಬ್ಬರಾಗಿದ್ದ ಗುರು ಪ್ರಸಾದ್ ಕೂಡ ಆ ಕಾರ್ಯಕ್ರಮಕ್ಕೆ ಬಂದಿದ್ದರು. ಈ ವೇಳೆ ವಾಹಿನಿಯ ವರದಿಗಾರ್ತಿಯೊಬ್ಬರು ಧನಂಜಯ್ ಅವರ ಡಾಲಿ ಪಾತ್ರದ ಬಗ್ಗೆ ಮೂರ್ನಾಕ್ಕು ಪ್ರಶ್ನೆ ಹೇಳಿದ್ದಾರೆ. ಆಗ ಗುರುಪ್ರಸಾದ್ ಎಲ್ಲದಕ್ಕೂ ''ಚೆನ್ನಾಗಿರಲಿ.. ದೂರ ಇರಲಿ..'' ಎಂದು ಹೇಳಿದ್ದಾರೆ.

ಅವರ ಬಗ್ಗೆ ಮಾತನಾಡಿದರೆ ಚಿಕ್ಕವನಾಗಿ ಬಿಡುತ್ತೇನೆ

''ಅವರ (ಧನಂಜಯ್) ಕೆಲಸದ ಬಗ್ಗೆ ನಾನು ಏನು ಹೇಳಲ್ಲ. ಅವರ ಬಗ್ಗೆ ಮಾತನಾಡಿದರೆ ನಾನು ಚಿಕ್ಕವನಾಗಿ ಬಿಡುತ್ತೇನೆ. ಬಲಗೈ ನಲ್ಲಿ ಮಾಡಿದ ಕೆಲಸ ಎಡಗೈಗೆ ಗೊತ್ತಾಗಬಾರದು. ನಾನು ಮಾಡುವ ಕೆಲಸವನ್ನು ನಾನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಅದನ್ನು ಉಳಿಸುವುದು ಬಿಡುವುದು ಅವರ ಕೈನಲ್ಲಿ ಇತ್ತು. ಆದರೆ ಅವರು ಆಗ ಏನೇನೋ ಮಾತನಾಡಿದರು. ಅವರಿಗೆ ಅರ್ಥ ಆದರೆ ಸಾಕು. ನಾನು ಈಗ ಅದರ ಬಗ್ಗೆ ಮತ್ತೆ ಮಾತನಾಡುವುದಿಲ್ಲ.'' ಎಂದು ಗುರು ಹೇಳಿಕೆ ನೀಡಿದ್ದಾರೆ.

ಡಾಲಿ ಪಾತ್ರದ ಬಗ್ಗೆ

'ಟಗರು' ಸಿನಿಮಾದಲ್ಲಿ ಡಾಲಿ ಅಲಿಯಸ್ ನಿಂಬೆ ಒಂದು ಬಹು ಮುಖ್ಯ ಪಾತ್ರ. ಇಡೀ ಸಿನಿಮಾಗೆ ಕಿಕ್ ನೀಡುವ ಪಾತ್ರ ಆದಾಗಿದೆ. ಈ ಪಾತ್ರವನ್ನು ನಟ ಧನಂಜಯ್ ಅಮೋಘವಾಗಿ ನಿಭಾಯಿಸಿದ್ದಾರೆ. ಟಗರು ಶಿವ ಮತ್ತು ಡಾಲಿಯ ಸೆಣಸಾದ ಕಥೆ ಸಿನಿಮಾದಲ್ಲಿದೆ. ಒಂದೇ ಪದದಲ್ಲಿ ಹೇಳಬೇಕು ಅಂದರೆ 'ಡಾಲಿ ಅಂದರೆ ಕ್ರೂರಿ.

ಆಕಸ್ಮಿಕವಾಗಿ ಸಿಕ್ಕ ಪಾತ್ರ

ನಾಯಕನಾಗಿದ್ದ ಧನಂಜಯ್ ಅವರಿಗೆ ಆಕಸ್ಮಿಕವಾಗಿ ಡಾಲಿ ಪಾತ್ರ ಸಿಕ್ಕಿತ್ತು. ಜಿಮ್ ನಲ್ಲಿ ವರ್ಕ್ ಔಟ್ ಮಾಡುವ ವೇಳೆ ನಿರ್ದೇಶಕ ಸೂರಿ ''ನೀನು ನೆಗೆಟಿವ್ ರೋಲ್ ಮಾಡುತ್ತೀಯಾ?'' ಎಂದು ಹೇಳಿದ್ದಾರೆ. ಆಗ ಧನಂಜಯ್ 'ಟಗರು' ಸಿನಿಮಾದಲ್ಲಿ ಅದರಲ್ಲಿಯೂ ಶಿವಣ್ಣ ಜೊತೆಗೆ ಇಂತಹ ಪಾತ್ರ ಸಿಗುವುದೇ ಭಾಗ್ಯ ಎಂದು ಒಪ್ಪಿಕೊಂಡರು. ಅದೇ ರೀತಿ ಪಾತ್ರಕ್ಕೆ ಬೆವರು ಹರಿಸಿದರು. ತಮ್ಮ ಶ್ರಮದ ಫಲವನ್ನು ಈಗ ಅವರು ಅನುಭವಿಸುತ್ತಿದ್ದಾರೆ.

ಶಿವಣ್ಣ ಫ್ಯಾನ್ಸ್ ಆಕ್ರೋಶದ ಬಳಿಕ 'ಡಾಲಿ' ಧನಂಜಯ್ ಹೇಳಿದ್ದೇನು.?

English summary
Director Guruprasad spoke about Dolly Dhananjay. Actor Dhananjay played dolly character in Kannada actor Shiva Rajkumar's 'Tagaru' movie. The movie is directed by Duniya Suri.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada