For Quick Alerts
  ALLOW NOTIFICATIONS  
  For Daily Alerts

  ಮತ್ತೆ ಕನ್ನಡ ಚಿತ್ರನಿರ್ದೇಶನದತ್ತ ಒಲವು ತೋರಿಸಿದ ಮಣಿರತ್ನಂ

  By Suneetha
  |

  ಖ್ಯಾತ ನಿರ್ದೇಶಕ ಮಣಿರತ್ನಂ ಎಲ್ಲರಿಗೂ ಗೊತ್ತು, ಅವರು ತಮ್ಮ ಸಿನಿ ವೃತ್ತಿ ಜೀವನವನ್ನು ಆರಂಭಿಸಿದ್ದು ಸ್ಯಾಂಡಲ್ ವುಡ್ ಕ್ಷೇತ್ರದಿಂದ. 1980 ರಲ್ಲಿ ಕನ್ನಡದಲ್ಲಿ 'ಪಲ್ಲವಿ ಅನುಪಲ್ಲವಿ' ಎಂಬ ಚಿತ್ರವನ್ನು ನಿರ್ದೇಶಿಸುವ ಮೂಲಕ ನಿರ್ದೇಶಕರ ಪಟ್ಟ ಹೊತ್ತುಕೊಂಡರು.

  ಆದರೆ ನಿರ್ದೇಶಕ ಮಣಿರತ್ನಂ ಅವರು ತಮ್ಮ ಮೊದಲ ಚಿತ್ರದಲ್ಲಿಯೇ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡರಾದರೂ ಆನಂತರ ಅವರು ಯಾವುದೇ ಕನ್ನಡ ಸಿನಿಮಾಗಳನ್ನು ನಿರ್ದೇಶಿಸಲಿಲ್ಲ. ಇದೀಗ ಅದೇ 'ಪಲ್ಲವಿ ಅನುಪಲ್ಲವಿ' ಮಣಿರತ್ನಂ ಅವರು ಕನ್ನಡ ಸಿನಿಮಾ ಮಾಡುವ ಸೂಚನೆ ನೀಡಿದ್ದಾರೆ.[ಜಯಾ ಬಚ್ಚನ್ 'ಬೆಂಗಳೂರು ಆಗಲ್ಲ' ಅಂದಿದ್ದಕ್ಕೆ ರೆಬೆಲ್ ಸ್ಟಾರ್ ಏನಂದ್ರು]

  8ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ನಿರ್ದೇಶಕ ಮಣಿರತ್ನಂ ಭಾಗವಹಿಸಿದ್ದ ಸಂದರ್ಭದಲ್ಲಿ, ಕನ್ನಡದಲ್ಲಿ ಚಿತ್ರ ನಿರ್ದೇಶಿಸುವ ಕುರಿತು ಕೇಳಲಾದ ಪ್ರಶ್ನೆಗೆ ಮಣಿರತ್ನಂ ಅವರು 'ಎಲ್ಲವೂ ಕೂಡಿ ಬಂದರೆ ಆದಷ್ಟು ಬೇಗ ಒಂದು ಕನ್ನಡ ಸಿನಿಮಾ ಮಾಡುವುದಾಗಿ' ಮಣಿರತ್ನಂ ಅವರು ಒಪ್ಪಿಕೊಂಡಿದ್ದಾರೆ.

  ಈ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ ರಾಜೇಂದ್ರ ಸಿಂಗ್ ಬಾಬು ಅವರು ಮಣಿರತ್ನಂ ಅವರು ಕನ್ನಡದಲ್ಲಿ ಚಿತ್ರವನ್ನೇನಾದರೂ ನಿರ್ದೇಶಿಸಿದರೆ ತಾವೇ ನಿರ್ಮಾಣದ ಜವಾಬ್ದಾರಿ ಹೊತ್ತುಕೊಳ್ಳುವುದಾಗಿ ತಿಳಿಸಿದ್ದಾರೆ.[ಚಿತ್ರಗಳು: ಅದ್ಧೂರಿಯಾಗಿ ಉದ್ಘಾಟನೆಗೊಂಡ ಸಿನಿಮೋತ್ಸವ]

  ಒಟ್ನಲ್ಲಿ ನಿರ್ದೇಶಕ ಮಣಿರತ್ನಂ ಅವರು ಮತ್ತೆ ಕನ್ನಡದಲ್ಲಿ ನಿರ್ದೇಶನ ಮಾಡಿದರೆ, ಕನ್ನಡ ಸಿನಿಪ್ರೀಯರಿಗೆ ಮತ್ತೊಮ್ಮೆ ಒಂದು ಉತ್ತಮ ಸಿನಿಮಾ ಮತ್ತು ಭರ್ಜರಿ ಮನೋರಂಜನೆ ಸಿಗೋದು ಗ್ಯಾರೆಂಟಿ.

  English summary
  Director Manirathnam started his career as a director in Kannada by directing 'Pallavi Anupallavi' in the early 1980s. However, after that Manirathnam is been away from the Kannada industry. Now if everything gets right Manirathnam may direct a Kannada film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X