For Quick Alerts
  ALLOW NOTIFICATIONS  
  For Daily Alerts

  ಮತ್ತೊಬ್ಬ ರಾಜಕಾರಣಿಯ ಪುತ್ರ ಸಿನಿಮಾಕ್ಕೆ? ಅನುಮಾನ ಮೂಡಿಸಿದ ನಿರ್ದೇಶಕನ ಭೇಟಿ

  |

  ಸಿನಿಮಾಕ್ಕೂ ರಾಜಕಾರಣಕ್ಕೂ ಅತ್ಯಾಪ್ತ ಸಂಬಂಧ. ಸಿನಿಮಾ ನಟ-ನಟಿಯರು ರಾಜಕಾರಣಕ್ಕೆ ಹೋಗುವುದು, ರಾಜಕಾರಣಿಗಳ ಮಕ್ಕಳು ನಟರಾಗುವುದು ಸಿನಿರಂಗಕ್ಕೆ ಹೊಸದು ಅಲ್ಲವೇ ಅಲ್ಲ.

  ಮೊದಲ ಸಿನಿಮಾದಲ್ಲೇ Superstar Niranjan 6 packs | Filmibeat Kannada

  ಇದೀಗ ಕರ್ನಾಟಕದ ರಾಜಕಾರಣಿಯ ಪುತ್ರ ಸಿನಿಮಾ ನಟರಾಗುತ್ತಾರಾ ಎಂಬ ಕುತೂಹಲ ಎದ್ದಿದೆ. ಪ್ರಸ್ತುತ ಸಕ್ರಿಯ ರಾಜಕಾರಣಿಯ ಮಗನನ್ನು ನಿರ್ದೇಶಕ ನಂದ ಕಿಶೋರ್ ಭೇಟಿ ಮಾಡಿದ್ದಾರೆ. ಆ ಚಿತ್ರ ಸಖತ್ ವೈರಲ್ ಆಗಿದ್ದಾರೆ.

  ಬಿಜೆಪಿ ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಮನೆಗೆ ನಿರ್ದೇಶಕ ನಂದ ಕಿಶೋರ್ ಭೇಟಿ ಮಾಡಿದ್ದಾರೆ. ಇದೇ ಸಮಯ ರೇಣುಕಾಚಾರ್ಯ ಪುತ್ರನೊಂದಿಗೆ ನಂದ ಕಿಶೋರ್ ಮಾತನಾಡಿದ್ದಾರೆ.

  ಪುತ್ರನೊಂದಿಗೆ ನಂದ ಕಿಶೋರ್ ಮಾತುಕತೆ

  ಪುತ್ರನೊಂದಿಗೆ ನಂದ ಕಿಶೋರ್ ಮಾತುಕತೆ

  ಈ ಬಗ್ಗೆ ಸ್ವತಃ ರೇಣುಕಾಚಾರ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, 'ಖ್ಯಾತ ನಿರ್ದೇಶಕ, ಕತಾ ಲೇಖಕ ನಂದ ಕಿಶೋರ್, ಬೆಂಗಳೂರಿನ ನಮ್ಮ ನಿವಾಸಕ್ಕೆ ಆಗಮಿಸಿ, ಪುತ್ರ ಚಂದನ್ ಜೊತೆಗೆ ಹಲವು ವಿಚಾರಗಳ ಬಗ್ಗೆ ವಿಚಾರ ವಿನಿಮಯ ಮಾಡಿದರು' ಎಂದಿದ್ದಾರೆ.

  ಹಾರೈಸಿದ್ದಾರೆ ಹಲವರು

  ಹಾರೈಸಿದ್ದಾರೆ ಹಲವರು

  ರೇಣುಕಾಚಾರ್ಯ ಅವರ ಪೋಸ್ಟ್‌ಗೆ ಕಮೆಂಟ್ ಮಾಡಿರುವ ಹಲವರು, ಪುತ್ರ ಚಂದನ್ ಅನ್ನು ಹೀರೋ ಮಾಡುತ್ತಿದ್ದೀರಾ ಎಂದು ಕಮೆಂಟ್ ಮಾಡಿದ್ದಾರೆ. ಕೆಲವರು ಈಗಾಗಲೇ ಶುಭ ಹಾರೈಕೆಗಳನ್ನು ಸಹ ಹೇಳಿಬಿಟ್ಟಿದ್ದಾರೆ.

  ಪೊಗರು ಸಿನಿಮಾ ನಿರ್ದೇಶಿಸಿರುವ ನಂದ ಕಿಶೋರ್

  ಪೊಗರು ಸಿನಿಮಾ ನಿರ್ದೇಶಿಸಿರುವ ನಂದ ಕಿಶೋರ್

  ನಂದ ಕಿಶೋರ್ ಅವರು ಪ್ರಸ್ತುತ ಪೊಗರು ಸಿನಿಮಾ ನಿರ್ದೇಶಿಸಿ ಬಿಡುಗಡೆಗೆ ಕಾಯುತ್ತಿದ್ದಾರೆ. ಧೃವ ಸರ್ಜಾ, ರಶ್ಮಿಕಾ ಮಂದಣ್ಣ ನಟನೆಯ ಈ ಸಿನಿಮಾ ಚಿತ್ರಮಂದಿರಗಳು ತೆರೆದ ಬಳಿಕ ಬಿಡುಗಡೆ ಆಗಲಿದೆ.

  ನಿಖಿಲ್ ಕುಮಾರಸ್ವಾಮಿ ಅತ್ಯುತ್ತಮ ಉದಾಹರಣೆ

  ನಿಖಿಲ್ ಕುಮಾರಸ್ವಾಮಿ ಅತ್ಯುತ್ತಮ ಉದಾಹರಣೆ

  ಈಗಾಗಲೇ ಹಲವು ರಾಜಕಾರಣಿಗಳ ಪುತ್ರರು ಕನ್ನಡ ಸಿನಿಮಾರಂಗಕ್ಕೆ ಪ್ರವೇಶ ಮಾಡಿದ್ದಾರೆ. ನಿಖಿಲ್ ಕುಮಾರಸ್ವಾಮಿ ಇದಕ್ಕೆ ಅತ್ಯುತ್ತಮ ಉದಾಹರಣೆ. ಇನ್ನೂ ಹಲವು ರಾಜಕಾರಣಿಗಳ ಮಕ್ಕಳು ಸಿನಿಮಾ ರಂಗ ಪ್ರವೇಶಿಸಿದ್ದಾರೆ.

  English summary
  Director Nanda Kishore visited politician Renukacharya's house and talked to his son Chandan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X