For Quick Alerts
  ALLOW NOTIFICATIONS  
  For Daily Alerts

  ನನಗೆ ಎಲ್ಲರೂ 'ಬಾಸ್‌'ಗಳೇ: ವಿವಾದಕ್ಕೆ ತೆರೆ ಎಳೆದ ಪವನ್ ಒಡೆಯರ್

  By ಫಿಲ್ಮ್ ಡೆಸ್ಕ್
  |

  ಚಿತ್ರರಂಗದಲ್ಲಿ ಫ್ಯಾನ್ಸ್ ವಾರ ಹೊಸದಲ್ಲ. ಈಗ ಎರಡು ತಿಂಗಳಿಂದ ಸಿನಿಮಾಗಳು ಬಿಡುಗಡೆಯಾಗದೆ ಇದ್ದರೂ ಅಭಿಮಾನಿಗಳ ಕದನ ಕಡಿಮೆಯಾಗಿಲ್ಲ. ಈಗ ಕೆಲವು ದಿನಗಳಿಂದೀಚೆಗೆ ಫ್ಯಾನ್ಸ್ ವಾರ್ ಜೋರಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹೀರೋಗಳ ಅಭಿಮಾನಿಗಳ ಸಮರ ಹೆಚ್ಚಾಗುತ್ತಲೇ ಇದೆ.

  ಮತ್ತೆ ಕಿತ್ತಾಡಿ ಕೊಳ್ಳುತ್ತಿದ್ದಾರೆ ದರ್ಶನ್ ಮತ್ತು ಯಶ್ ಫ್ಯಾನ್ಸ್ | Yash | Darshan | FILMIBEAT KANNADA

  ಇತ್ತೀಚಿನ ವಿವಾದ ಶುರುವಾಗಿದ್ದು ಸಿನಿಮಾ ಕಾರಣದಿಂದ ಅಲ್ಲ, 'ಬದಲಾಗು ನೀನು ಬದಲಾಯಿಸು ನೀನು' ಎಂಬ ದೃಶ್ಯ ರೂಪಕದ ವಿಚಾರದಲ್ಲಿ. ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಕನ್ನಡದ ಅನೇಕ ನಟ-ನಟಿಯರು, ಕ್ರಿಕೆಟಿಗರು ಕೊರೊನಾ ವೈರಸ್ ಕುರಿತಾದ ಜಾಗೃತಿ ಗೀತೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪವನ್ ಒಡೆಯರ್ ನಿರ್ದೇಶನದ ಈ ಹಾಡು ಸೋಮವಾರ ಬಿಡುಗಡೆಯಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಮುಂದೆ ಹೋಗಿದೆ. ಮುಂದೆ ಓದಿ...

  ಹಾಡಿನ ಪೋಸ್ಟರ್

  ಹಾಡಿನ ಪೋಸ್ಟರ್

  ಈ ಹಾಡಿನ ಪೋಸ್ಟರ್ ಮೊದಲು ಬಿಡುಗಡೆಯಾದಾಗ ಯಶ್ ಹಾಗೂ ಸುದೀಪ್ ಅವರ ಫೋಟೊ ಇಲ್ಲದೆ ಇರುವುದು ಅವರ ಅಭಿಮಾನಿಗಳನ್ನು ಕೆರಳಿಸಿತ್ತು. ಇದು ಸರ್ಕಾರದ ಯೋಜನೆಯಂತೆ ಸಿದ್ಧಗೊಳ್ಳುತ್ತಿರುವ ಹಾಡಾಗಿದ್ದರೂ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿರುವುದು ನಿರ್ದೇಶಕ ಪವನ್ ಒಡೆಯರ್.

  ಶಿವಣ್ಣ, ಪುನೀತ್, ದರ್ಶನ್, ಕನ್ನಡದ ಸ್ಟಾರ್ ನಟರೆಲ್ಲರೂ ಒಂದೇ ಹಾಡಿನಲ್ಲಿ!

  ಪವನ್ ಒಡೆಯರ್ ವಿರುದ್ಧ ಆಕ್ರೋಶ

  ಪವನ್ ಒಡೆಯರ್ ವಿರುದ್ಧ ಆಕ್ರೋಶ

  ಪವನ್ ಒಡೆಯರ್ ಬರಹ ದರ್ಶನ್ ಅಭಿಮಾನಿಗಳನ್ನು ಕೆರಳಿಸಿತ್ತು. ಬಾಸ್ ಎಂದರೆ ದರ್ಶನ್ ಮಾತ್ರ. ಕನ್ನಡ ಚಿತ್ರರಂಗಕ್ಕೆ ಒಬ್ಬರೇ ಬಾಸ್. ಅದು ಡಿ ಬಾಸ್ ಎಂದಿದ್ದಲ್ಲದೆ, ಪವನ್ ಒಡೆಯರ್ ಅವರ ವಿರುದ್ಧ ಅವಾಚ್ಯ ಪದಗಳಿಂದ ನಿಂದಿಸಿದ್ದರು. ಯಶ್ ಅವರ ವಿರುದ್ಧ ಕೂಡ ಕೆಟ್ಟ ಕಾಮೆಂಟ್‌ಗಳನ್ನು ನಡೆಸಿದ್ದರು.

  ಯಶ್ 'ಬಾಸ್' ಎಂದ ಪವನ್ ಒಡೆಯರ್ ವಿರುದ್ಧ ಮುಗಿಬಿದ್ದ ಡಿ ಬಾಸ್ ಅಭಿಮಾನಿಗಳು

  ಆಪ್ತರಿಗೆ ಬಾಸ್ ಎಂದೇ ಕರೆಯುವುದು...

  ಆಪ್ತರಿಗೆ ಬಾಸ್ ಎಂದೇ ಕರೆಯುವುದು...

  ಯಶ್ ಅವರನ್ನು ಬಾಸ್ ಎಂದಿದ್ದೇಕೆ ಎಂದು ಸ್ವತಃ ಪವನ್ ಒಡೆಯರ್ ಸ್ಪಷ್ಟನೆ ನೀಡಿದ್ದಾರೆ. 'ನಾನು ಪ್ರತಿಯೊಬ್ಬರನ್ನೂ ಬಾಸ್ ಎಂದೇ ಕರೆಯುವುದು. ನನಗೆ ಆಪ್ತರಾದವರು ಯಾರೇ ಸಿಕ್ಕರೂ ಬಾಸ್ ಎನ್ನುತ್ತೇನೆ. ನಾನು ಎಲ್ಲ ನಾಯಕ ನಟರೊಂದಿಗೂ ಆತ್ಮೀಯವಾಗಿದ್ದೇನೆ. ಹೀಗಾಗಿ ಯಾರಿಗೂ ಅವಮಾನ ಉಂಟಾಗುವಂತೆ ಮಾಡಿಲ್ಲ' ಎಂದು ಫಿಲ್ಮಿಬೀಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

  ಎಲ್ಲರಿಗೂ ಅವರ ಹೀರೋಗಳೇ ಬಾಸ್

  ಎಲ್ಲರಿಗೂ ಅವರ ಹೀರೋಗಳೇ ಬಾಸ್

  'ತಮ್ಮ ನೆಚ್ಚಿನ ಹೀರೋಗಳನ್ನು ಅಭಿಮಾನಿಗಳು ಬಾಸ್ ಎಂದು ಕರೆಯುವುದನ್ನು ತಪ್ಪು ಎನ್ನುವುದಿಲ್ಲ. ಪ್ರತಿಯೊಬ್ಬರಿಗೂ ಅವರವರ ಹೀರೋಗಳೇ ಬಾಸ್‌ಗಳು. ನಮ್ಮನ್ನು ಬಾಸ್ ಎಂದು ಕರೆಯಿರಿ ಎಂದು ಯಾವ ನಟರೂ ಹೇಳುವುದಿಲ್ಲ. ಅಭಿಮಾನಿಗಳು ಅದನ್ನು ಅರ್ಥ ಮಾಡಿಕೊಳ್ಳಬೇಕು. ಹೀರೋಗಳು ಕೂಡ ಅಭಿಮಾನಿಗಳಿಗೆ ಹೇಳುವುದು ನಿಮ್ಮ ಲೈಫಲ್ಲಿ ನೀವೇ ಬಾಸ್ ಎಂದು. ನಮ್ಮ ಹೀರೋಗಳೆಲ್ಲರೂ ಅಷ್ಟು ದೊಡ್ಡ ಮನಸಿನವರು' ಎಂದಿದ್ದಾರೆ.

  ಪೊಲೀಸ್ ಆಗಬೇಕೆಂದುಕೊಂಡಿದ್ದ ನಿರ್ದೇಶಕ ಪವನ್ ಒಡೆಯರ್ ಹೀಗಾದರು...

  ಬೈಗುಳಗಳು ಆಶೀರ್ವಾದದಂತೆ

  ಬೈಗುಳಗಳು ಆಶೀರ್ವಾದದಂತೆ

  'ಅಭಿಮಾನಿಗಳು ತಮ್ಮ ಇಷ್ಟದ ಹೀರೋನನ್ನು ದೇವರು ಎಂದೇ ಪರಿಗಣಿಸುತ್ತಾರೆ. ಹಾಗೆಯೇ ನಾಯಕ ನಟರೂ ಅಭಿಮಾನಿಗಳಿಗೆ ಅನೇಕ ಬಾರಿ ಸಹಾಯ ಮಾಡಿರುತ್ತಾರೆ. ಅವರ ನಡುವಿನ ಬಾಂಧವ್ಯ ಚೆನ್ನಾಗಿ ಇರುತ್ತದೆ. ಕೆಲವು ಸಂದರ್ಭದಲ್ಲಿ ಅವರ ಪ್ರೀತಿ ಹೀಗೆ ಹೊರಬರುತ್ತದೆ. ನನಗೆ ಅವರ ಬೈಗುಳಗಳೆಲ್ಲ ಆಶೀರ್ವಾದವೇ. ಈ ರೀತಿಯ ಹೀರೋ ಪ್ರೀತಿಯನ್ನು ಕಂಡಾಗ ಖುಷಿಯಾಗುತ್ತದೆ. ಏಕೆಂದರೆ ಅಭಿಮಾನಿಗಳು ಸಿನಿಮಾ ನಟರ ಮೇಲಿನ ಪ್ರೀತಿಯಿಂದ ದುಡ್ಡು ಖರ್ಚು ಮಾಡಿ ಸಿನಿಮಾ ನೋಡಿರುತ್ತಾರೆ. ಆ ದುಡ್ಡಿನಿಂದಲೇ ಚಿತ್ರರಂಗ ಬೆಳೆಯುತ್ತದೆ. ಈ ಬೈಗುಳಗಳಿಂದ ನಾನು ಕುಗ್ಗುವುದೂ ಇಲ್ಲ, ಹಿಗ್ಗುವುದೂ ಇಲ್ಲ. ಎಲ್ಲವನ್ನೂ ಸಮಚಿತ್ತದಿಂದ ಸ್ವೀಕರಿಸುತ್ತೇನೆ' ಎಂದು ತಿಳಿಸಿದ್ದಾರೆ.

  ಸಚಿವರೇ ಉತ್ತರ ನೀಡಲಿದ್ದಾರೆ

  ಸಚಿವರೇ ಉತ್ತರ ನೀಡಲಿದ್ದಾರೆ

  ಯಶ್ ಮತ್ತು ದರ್ಶನ್ ಅಭಿಮಾನಿಗಳ ಆಕ್ರೋಶವಷ್ಟಕ್ಕೇ ಇದು ಮುಗಿದಿಲ್ಲ. ಸುದೀಪ್ ಒಳಗೊಂಡಂತೆ ಕೆಲವು ನಟರ ಫೋಟೊ ಇದರಲ್ಲಿ ಇಲ್ಲ ಎನ್ನುವುದು ಕೆಲವು ಹೀರೋಗಳ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಇದು ಸರ್ಕಾರದ ಕಾರ್ಯಕ್ರಮವಾಗಿರುವುದರಿಂದ ಹಾಡಿನ ಬಿಡುಗಡೆಯ ಸಂದರ್ಭದಲ್ಲಿ ಸಚಿವ ಸುಧಾಕರ್ ಅವರೇ ಇದಕ್ಕೆ ಉತ್ತರ ನೀಡಲಿದ್ದಾರೆ.

  English summary
  Director Pavan Wadeyar said he used to call everyone who are close to him as Boss. His clarification came after a war between Darshan and Yash fans.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more
  X