»   » ಕನ್ನಡಕ್ಕೆ ಬರಲಿದೆ ತಮಿಳಿನ ಗಲ್ಲಿ ಕ್ರಿಕೆಟ್ ಚಿತ್ರ

ಕನ್ನಡಕ್ಕೆ ಬರಲಿದೆ ತಮಿಳಿನ ಗಲ್ಲಿ ಕ್ರಿಕೆಟ್ ಚಿತ್ರ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಗಲ್ಲಿ ಕ್ರಿಕೆಟ್, ನವಿರಾದ ಪ್ರೇಮಕಥಾನಕ, ಸ್ನೇಹಿತರ ಸವಾಲುಗಳನ್ನು ಹೊಂದಿದ್ದ ಹಾಸ್ಯಪ್ರಧಾನ ಕಥಾ ಹಂದರವಿದ್ದ 'ಚೆನ್ನೈ 600028 ತಮಿಳು ಚಿತ್ರ 2007ರಲ್ಲಿ ಭರ್ಜರಿ ಯಶಸ್ಸುಗಳಿಸಿತ್ತು, ಈಗ ಈ ಚಿತ್ರ ಬಾಲಿವುಡ್ ಗೆ ಹಾರಿ ನಂತರ ಬೆಂಗಳೂರಿನ ಗಾಂಧಿನಗರಕ್ಕೆ ಬಂದಿದೆ. ರಿಮೇಕ್ ನಿರ್ದೇಶಕ ಪ್ರದೀಪ್ ರಾಜ್ ಅವರು ಈ ಚಿತ್ರವನ್ನು ನಿರ್ದೇಶಿಸುವುದಾಗಿ ಘೋಷಿಸಿದ್ದಾರೆ.

ನೀನಾಸಂ ಸತೀಶ ಅವರು ನಟಿಸಿದ್ದ ಅಂಜದ ಗಂಡು ಚಿತ್ರ ಮಕಾಡೆ ಮಲಗಿದ ಮೇಲೆ ಪ್ರದೀಪ್ ರಾಜ್ ಅವರು ಚೆನ್ನೈ 600028 ಚಿತ್ರವನ್ನು ಕನ್ನಡಕ್ಕೆ ಭಟ್ಟಿ ಇಳಿಸುತ್ತಿದ್ದಾರೆ. ಕನ್ನಡ ಅವೃತ್ತಿಗೆ ಇನ್ನೂ ಹೆಸರಿಟ್ಟಿಲ್ಲವಂತೆ. ಕಿರಾತಕ, ಮಿ. 420, ರಜನಿಕಾಂತಾ ಚಿತ್ರಗಳನ್ನು ನಿರ್ದೇಶಿಸಿರುವ ಪ್ರದೀಪ್ ಈ ಬಾರಿ ಕ್ರಿಕೆಟ್ ಕಥೆಯೊಂದಿಗೆ ಬರುತ್ತಿದ್ದಾರೆ. ಚಿತ್ರದ ತಾರಾಗಣ ಆಯ್ಕೆ ನಡೆದಿದೆಯಾದರೂ ಪ್ರಧಾನ ಪಾತ್ರಗಳಲ್ಲಿ ಜೈ ಕಾರ್ತೀಕ್(ಜೆಕೆ), ಧ್ರುವ ಶರ್ಮ, ರಾಜೀವ್ ಹಾಗೂ ಚಂದನ್ ನಟಿಸುವುದು ಗ್ಯಾರಂಟಿಯಾಗಿದೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

Pradeep Raj to remake 'Chennai 600028' in to Kannada

ಸಿಸಿಎಲ್ ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡದಲ್ಲಿ ಎದುರಾಳಿಗಳ ಎಸೆತವನ್ನು ಹಿಗ್ಗಾ ಮುಗ್ಗ ಚೆಚ್ಚುತ್ತಿದ್ದ ರಾಜೀವ್ ಅವರು ಈ ಚಿತ್ರದಲ್ಲೂ ಕ್ರಿಕೆಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಉಳಿದವರೂ ಕೂಡಾ ಗಲ್ಲಿ ಕ್ರಿಕೆಟ್ ತಂಡದ ಸದಸ್ಯರೇ. ಸಂಜನಾ ಹಾಗೂ ಶಿವಾನಿ ಚಿತ್ರದ ನಾಯಕಿಯರು. ಸಾಧುಕೋಕಿಲ, ಚಿಕ್ಕಣ್ಣ ಮುಂತಾದವರು ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಹಿಂದಿ ವರ್ಷನ್ ನಲ್ಲಿ ದಿಗಂತ್: ಚೆನ್ನೈ 600028 ಚಿತ್ರದ ಹಿಂದಿ ರಿಮೇಕ್ 'ಫಟಕ್' ನಲ್ಲಿ ದಿಗಂತ್ ನಟಿಸುತ್ತಿರುವುದು ಎಲ್ಲರಿಗೂ ತಿಳಿದೇ ಇದೆ.ದಿಗಂತ್ ಜತೆಗೆ ನಟ ಶಕ್ತಿ ಕಪೂರ್ ಅವರ ಮಗ ಸಿದ್ಧಾಂತ್ ಕಪೂರ್ ನಟಿಸುತ್ತಿದ್ದಾರೆ.'ಡೇವಿಡ್' ಚಿತ್ರ ಖ್ಯಾತಿಯ ವಿಜಯ್ ನಂಬಿಯಾರ್ ಅವರ ಸಹ ನಿರ್ಮಾಣದ ಈ ಚಿತ್ರವನ್ನು ಅವರ ಸಹಾಯಕ ಯಜಾದ್ ನಿರ್ದೇಶಿಸುತ್ತಿದ್ದಾರೆ. ಸಿದ್ಧಾಂತ್ ಮೂಲ ಚಿತ್ರದಲ್ಲಿದ್ದ ಶಿವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದರೆ, ದಿಗಂತ್ ಅವರು ಜೈ ಪಾತ್ರಧಾರಿಯಾಗಿದ್ದಾರೆ. ಕನ್ನಡದಲ್ಲಿ ಯಾರು ಶಿವ, ಯಾರು ಜೈ ಪಾತ್ರಧಾರಿ ಎಂಬುದು ಇನ್ನೂ ತಿಳಿದು ಬಂದಿಲ್ಲ.

ಮೂಲ ಚಿತ್ರದ 'ಕಥೆ': ಚೆನ್ನೈ 600028 ಎಂಬುದು ಚೆನ್ನೈನ ಮಂಡವೇಲಿ ಪ್ರದೇಶ ಪಿನ್ ಕೋಡ್ ನಂಬರ್ ಈ ಪ್ರದೇಶದಲ್ಲಿ ಕಥೆ ನಡೆಯುವುದರಿಂದ ಈ ಹೆಸರು ಇಡಲಾಗಿತ್ತು. ವೆಂಕಟ್ ಪ್ರಭು ನಿರ್ದೇಶನದ ಈ ಚಿತ್ರದಲ್ಲಿ ಜೈ, ಶಿವ, ನಿತಿನ್, ಅರವಿಂದ್, ಪ್ರೇಮ್ ಜಿ ಅಮರನ್, ಅಜ್ಯ್, ಪ್ರಸನ್ನ ಮುಂತಾದವರು ನಟಿಸಿದ್ದರು. ಎಸ್ ಪಿಬಿ ಚರಣ್ ನಿರ್ಮಾಣದ ಈ ಚಿತ್ರಕ್ಕೆ ಯುವನ್ ಶಂಕರ್ ರಾಜ ಸಂಗೀತ ನಿರ್ದೇಶನ ಮಾಡಿದ್ದರು. ಭರ್ಜರಿ ಯಶಸ್ಸು ಗಳಿಸಿದ ಈ ಚಿತ್ರ ಈಗಾಗಲೇ ಶ್ರೀಲಂಕಾದಲ್ಲಿ ಸೂಪರ್ ಸಿಕ್ಸ್ ಹಾಗೂ ಬೆಂಗಾಲಿಯಲ್ಲಿ ಲೆ ಛಕ್ಕಾ ಎಂಬ ಹೆಸರಿನಲ್ಲಿ ತೆರೆ ಕಂಡಿದೆ.

English summary
Director Pradeep Raj has decided to remake the Tamil movie Chennai 600028 in to Kannada. His previous films Anjada Gandu, Mr 42O and Rajanikantha failed to rake up moolah at the BO. Kirataka is sole hit movie he has given so far.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada