»   » ಕನ್ನಡ ವಾಹಿನಿಗಳಿಗೆ ರಾಜೇಂದ್ರಸಿಂಗ್ ಬಾಬು ಎಚ್ಚರಿಕೆ

ಕನ್ನಡ ವಾಹಿನಿಗಳಿಗೆ ರಾಜೇಂದ್ರಸಿಂಗ್ ಬಾಬು ಎಚ್ಚರಿಕೆ

Posted By:
Subscribe to Filmibeat Kannada
 Director Rajendra Sing Babu warning to TV channels
ಕಳೆದ ಎರಡು ವರ್ಷದಿಂದ ಕೆಲವು ವಾಹಿನಿಗಳು ಕನ್ನಡ ಚಲನಚಿತ್ರಗಳನ್ನು ಕೊಳ್ಳುವುದನ್ನು ನಿಲ್ಲಿಸಿವೆ. ಪ್ರಮುಖ ಐದಾರು ನಟರ ಸಿನಿಮಾಗಳನ್ನು ಮಾತ್ರ ಒಂದೆರಡು ವಾಹಿನಿಗಳು ತೆಗೆದುಕೊಂಡು ಉಳಿದವರಿಗೆ ತಾರತಮ್ಯದ ನೀತಿ ಅನುಸರಿಸುತ್ತಿವೆ ಎಂದು ನೇರವಾಗಿ ಆರೋಪಿಸುತ್ತಾರೆ ಹಿರಿಯ ನಿರ್ದೇಶಕರಾದ ರಾಜೇಂದ್ರಸಿಂಗ್‍ ಬಾಬು.

ಕನ್ನಡದ ಕೆಲವು ನೊಂದ ನಿರ್ಮಾಪಕರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. ಇತ್ತೀಚೆಗಂತೂ ವಾಹಿನಿಗಳು ನಮ್ಮನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಬಾಬು ಸಹಿತ ಬಿ.ಆರ್.ಕೇಶವ, ಜೋಸೈಮನ್ ಮತ್ತಿತರರು ಬೇಸರ ವ್ಯಕ್ತ ಪಡಿಸುತ್ತಾರೆ.

ಗೋಷ್ಠಿಯಲ್ಲಿ ಮಾತನಾಡುತ್ತಿದ್ದ ರಾಜೇಂದ್ರಸಿಂಗ್ ಬಾಬು, ಎಲ್ಲಿಂದಲೋ ಸಾಲಸೋಲ ಮಾಡಿ ನಿರ್ಮಾಪಕ ಸಿನಿಮಾ ತಯಾರಿಸುತ್ತಾನೆ. ವಾಹಿನಿಗಳು ಯಾವುದೇ ಮಾನದಂಡವಿಲ್ಲದೇ ಏಕಾಏಕಿ ನಾವು ಸಿನಿಮಾಗಳನ್ನು ತೆಗೆದುಕೊಳ್ಳೋದಿಲ್ಲ. ನಮಗೆ ಕೆಲವು ಸ್ಟಾರ್ ನಟರ ಚಿತ್ರಗಳು ಮಾತ್ರ ಸಾಕು ಎನ್ನುತ್ತಿವೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ರಾಜೇಂದ್ರ ಸಿಂಗ್ ಬಾಬು ಕಳವಳ ವ್ಯಕ್ತ ಪಡಿಸಿದ್ದಾರೆ.

ನಾಗರಹಾವು, ಅಂತ, ಮೆಜೆಸ್ಟಿಕ್ ಚಿತ್ರಗಳೆಲ್ಲಾ ಮೊದಲು ಸ್ಟಾರ್‍ಲೆಸ್ ಸಿನಿಮಾಗಳೇ ಆಗಿದ್ದವು. ತದನಂತರವೇ ಅದು ಹಿಟ್ ಆಗಿದ್ದು , ಇದನ್ನು ವಾಹಿನಿಯವರು ಅರ್ಥಮಾಡಿಕೊಳ್ಳಬೇಕು.

ತಕ್ಷಣವೇ ಕನ್ನಡ ಸಿನಿಮಾಗಳನ್ನು ಕೊಳ್ಳಬೇಕು ಎಂದು ಬಾಬು ಟಿವಿ ವಾಹಿನಿಯವರಿಗೆ ತಾಕೀತು ಮಾಡಿದರು. ಸಣ್ಣ ನಿರ್ಮಾಪಕರೇ ಮುಂದೆ ದೊಡ್ಡ ನಿರ್ಮಾಪಕರಾಗುವುದು, ಚಿತ್ರರಂಗದ ಬುನಾದಿ ಸಣ್ಣ ನಿರ್ಮಾಪಕರು.

ಅಂಥವರ ಸಿನಿಮಾಗಳನ್ನೇ ತೆಗೆದುಕೊಳ್ಳದಿದ್ದ ಮೇಲೆ ಆ ಟಿವಿ ವಾಹಿನಿಗಳನ್ನು ಮುಚ್ಚಿಸಬೇಕಾಗುತ್ತದೆ ಎಂದು ರಾಜೇಂದ್ರ ಸಿಂಗ್ ಬಾಬು ಎಚ್ಚರಿಕೆ ನೀಡಿದ್ದಾರೆ.

English summary
Senior director Rajendra Singh Babu has given a warning to TV channels for not taking satellite rights of new comer films.
Please Wait while comments are loading...