Don't Miss!
- News
ಮಾನ್ವಿ: ಮಂಜೂರಾದ ಬಡವರ ಭೂಮಿಗೆ ಕಣ್ಣು ಹಾಕಿದ ಪ್ರಭಾವಿಗಳು, ಜನಾಕ್ರೋಶ
- Sports
LLC 2023: ಲೆಜೆಂಡ್ಸ್ ಲೀಗ್ನಲ್ಲಿ ಕೈಫ್, ಗೇಲ್, ಗಂಭೀರ್ ಸೇರಿದಂತೆ ಹಲವು ಸ್ಟಾರ್ಗಳು
- Lifestyle
ಆರೋಗ್ಯವಾಗಿರಬೇಕೆ? ಹಾಗಾದರೆ ನೀವು 3 ವಿಷಯಗಳಲ್ಲಿ ನಂಬಿಕೆ ಇಡಲೇಬೇಕು
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Automobiles
ಪೆಟ್ರೋಲ್ ಬೆಲೆ ಏರಿಕೆ ಚಿಂತೆ ಬಿಡಿ: ರೂ.1 ಲಕ್ಷ ಇದ್ರೆ ಆಕ್ಟಿವಾವನ್ನು ಎಲೆಕ್ಟ್ರಿಕ್ ಸ್ಕೂಟರ್ ಆಗಿ ಪರಿವರ್ತಿಸಬ
- Technology
ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ಫೀಚರ್ಸ್ ಪರಿಚಯಿಸಿದ ನೆಟ್ಫ್ಲಿಕ್ಸ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ದರ್ಶನ್ ವ್ಯಕ್ತಿತ್ವವನ್ನು ಒಂದೇ ಸಾಲಿನಲ್ಲಿ ಕಟ್ಟಿಕೊಟ್ಟ ಖ್ಯಾತ ನಿರ್ದೇಶಕ
ಸ್ಯಾಂಡಲ್‌ವುಡ್‌ನ ಡಿ-ಬಾಸ್ ದರ್ಶನ್ ವ್ಯಕ್ತಿತ್ವವೇ ಭಿನ್ನ. ಮಾನವೀಯತೆಯುಳ್ಳ ವ್ಯಕ್ತಿಯಾಗಿಯೂ, ಅಭಿಮಾನಿಗಳ ಆಪ್ತ ಗೆಳೆಯನಾಗಿಯೂ, ಕ್ಯಾಮೆರಾ ಹಿಡಿದು ಕಾಡು ತಿರುಗಿ ವನ್ಯ ಜೀವಿ ಪ್ರೇಮಿಯಾಗಿಯೂ, ಫಾರಂ ನಿರ್ಮಿಸಿ ಹಾಲು ಕರೆವ ಕೃಷಿಕನಾಗಿಯೂ ಇನ್ನೂ ಹಲವು ಅವತಾರಗಳಲ್ಲಿ ಅವರು ಕಾಣುತ್ತಾರೆ.
ಸಂಬಂಧಗಳ ವಿಚಾರದಲ್ಲಿಯೂ ದರ್ಶನ್ ಅವರದ್ದು ವಿವಿಧ ಆಯಾಮಗಳುಳ್ಳ ವ್ಯಕ್ತಿತ್ವವೇ. ವೈಯಕ್ತಿಕ ಸಂಬಂಧದ ಬಗ್ಗೆ ಸುದ್ದಿಯಾಗಿದ್ದ ದರ್ಶನ್, ಆ ನಂತರ ಸಂಪೂರ್ಣ ಕೌಟುಂಬಿಕ ವ್ಯಕ್ತಿಯಾಗಿ ಗುರುತಿಸಿಕೊಂಡರು.
ಬುಲೆಟ್
ಪ್ರಕಾಶ್
ಬಿಟ್ಟುಹೋದ
ದೊಡ್ಡ
ಜವಾಬ್ದಾರಿ
ಹೊತ್ತುಕೊಂಡ
ದರ್ಶನ್
ಸ್ನೇಹದ ವಿಷಯಕ್ಕೆ ಬಂದರೆ, ವೈಯಕ್ತಿಕ ಸ್ವಾಭಿಮಾನಕ್ಕೆ ಮೊದಲ ಪ್ರಾಮುಖ್ಯತೆ ನೀಡಿ ಸ್ನೇಹವನ್ನು ಮೌನವಾಗಿಯೇ ಕಡಿದುಕೊಂಡು ದೂರಾದರು. ದರ್ಶನ್ ಅವರದ್ದು ಹಲವು ಆಯಾಮಗಳಿಂದ ಕೂಡಿದ ಭಿನ್ನ ವ್ಯಕ್ತಿತ್ವ. ಇಂಥಹಾ ದರ್ಶನ್ ವ್ಯಕ್ತಿತ್ವವನ್ನು ಒಂದೇ ಸಾಲಿನಲ್ಲಿ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ ಕನ್ನಡದ ಹೆಸರಾಂತ ನಿರ್ದೇಶಕ.

ದರ್ಶನ್ ಅವರನ್ನು ಹತ್ತಿರದಿಂದ ನೋಡಿದ ವ್ಯಕ್ತಿ
ನಿರ್ದೇಶಕ ರವಿ ಶ್ರೀವತ್ಸ ಅವರು ದರ್ಶನ್ ಅವರನ್ನು ಹತ್ತಿರದಿಂದ ನೋಡಿದ ವ್ಯಕ್ತಿ. ಅವರ ವ್ಯಕ್ತಿತ್ವದ ಬಗ್ಗೆ ಅರಿವಿರೋ ಆಪ್ತ ಗೆಳೆಯ ಸಹ ಹೌದು. ಅವರು ದರ್ಶನ್ ಅವರ ಬಗ್ಗೆ ಒಂದೇ ಸಾಲಿನಲ್ಲಿ ಹೇಳಿದ್ದಾರೆ.

ರವಿ ಶ್ರೀವತ್ಸ ಅವರಿಗೆ ದರ್ಶನ್ ಅಭಿಮಾನಿ ಪ್ರಶ್ನೆ
ಟ್ವಿಟ್ಟರ್ ನಲ್ಲಿ ರವಿ ಶ್ರೀವತ್ಸ ಅವರಿಗೆ ದರ್ಶನ್ ಅಭಿಮಾನಿಯಿಂದ ಪ್ರಶ್ನೆಯೊಂದು ಇಂದು ಎದುರಾಯಿತು. ನೀವು ಕಂಡ ದರ್ಶನ್ ಅವರ ವ್ಯಕ್ತಿತ್ವದ ಬಗ್ಗೆ ಹೇಳಿ ಎಂದು ಅಭಿಮಾನಿಯೊಬ್ಬ ರವಿ ಶ್ರೀವತ್ಸ ಅವರಲ್ಲಿ ಪ್ರಶ್ನೆ ಮಾಡಿದ್ದರು.
ದರ್ಶನ್
ಅಭಿಮಾನಿಗಳ
ಕಾರ್ಯಕ್ಕೆ
ಶಹಭಾಸ್
ಎಂದ
ರಾಜಕಾರಣಿಗಳು

ರವಿ ಶ್ರೀವತ್ಸ ಕೊಟ್ಟ ಉತ್ತರವೇನು?
ಇದಕ್ಕೆ ಉತ್ತರಿಸಿದ ರವಿ ಶ್ರೀವತ್ಸ ''ಯಾರ ತಂಟೇಗು ಹೋಗ್ದೇ ಇರೋ ದೇವರು, ತಿರುಗಿ ಬಿದ್ದರೇ ತಡೆದು ನಿಲ್ಸಕ್ಕಾಗದ ತೇರು'' ಎಂದು ಸರಳವಾಗಿ ಒಂದೇ ಸಾಲಿನಲ್ಲಿ ಇಡೀಯ ದರ್ಶನ್ ವ್ಯಕ್ತಿತ್ವದ ಬಗ್ಗೆಯೇ ಹೇಳಿಬಿಟ್ಟಿದ್ದಾರೆ.

ಬದಲಾಗಿದ್ದಾರಾ ದರ್ಶನ್?
ಕಳೆದ ಲೋಕಸಭೆ ಚುನಾವಣೆಯಲ್ಲಿ ದರ್ಶನ್ ವಿರುದ್ಧ ಟೀಕಾ ಪ್ರಹಾರಗಳೇ ಕೇಳಿ ಬಂದವು ಆದರೆ ದರ್ಶನ್ ಪ್ರತಿಕ್ರಿಯಿಸಲಿಲ್ಲ, ತಮ್ಮ ಗುರಿಯತ್ತ ಮಾತ್ರವೇ ದೃಷ್ಟಿ ನೆಟ್ಟಿದ್ದರು. ಕೆಲವು ನಟರ ಅಭಿಮಾನಿಗಳು ಸಹ ದರ್ಶನ್ ತೇಜೋವಧೆಯ ಯತ್ನ ಮಾಡಿದ್ದರು ಆಗಲೂ ದರ್ಶನ್ ಅವರದ್ದು ಮೌನವೇ. ಅಪಘಾತವಾದಾಗ ಮಾಧ್ಯಮಗಳು ವಿವಾದ ಹುಟ್ಟುಹಾಕುವ ಪ್ರಶ್ನೆಗಳನ್ನು ಕೇಳಿದಾಗಲೂ ದರ್ಶನ್ ಅವರದ್ದು ನಗು ತುಂಬಿದ ಉತ್ತರಗಳೇ' ಇವೆಲ್ಲವುಗಳ ಹಿನ್ನೆಲೆಯಲ್ಲಿ ರವಿ ಶ್ರೀವತ್ಸ ಗಮನಿಸಿದರೆ ಅಕ್ಷರಶಃ ನಿಜ ಎನಿಸದೇ ಇರದು.
ಈ'
ಸ್ಟಾರ್
ನಟನಿಗೆ
ಸಿನಿಮಾ
ನಿರ್ಮಾಣ
ಮಾಡುವ
ಕನಸಿಟ್ಟುಕೊಂಡಿದ್ದರು
ಬುಲೆಟ್
ಪ್ರಕಾಶ್