»   » ರಜನಿ,ಕಮಲ್ ಸಂಭಾವನೆ:ನಿರ್ದೇಶಕರು ಹೇಳಿದ್ದೇನು

ರಜನಿ,ಕಮಲ್ ಸಂಭಾವನೆ:ನಿರ್ದೇಶಕರು ಹೇಳಿದ್ದೇನು

Posted By:
Subscribe to Filmibeat Kannada

ಸೂಪರ್ ಸ್ಟಾರ್ ರಜನೀಕಾಂತ್ ಮತ್ತು ಯುನಿವರ್ಸಲ್ ಸ್ಟಾರ್ ಕಮಲಹಾಸನ್ ಹಿಂದಿನಿಂದಲೂ ಆಪ್ತಮಿತ್ರರು. ದಶಕಗಳ ಹಿಂದೆ ಕಾಲಿವುಡ್ ನಲ್ಲಿ ಹಿಡಿತ ಸಾಧಿಸಲು ಇಬ್ಬರೂ ಆರೋಗ್ಯಕರ ಪೈಪೋಟಿ ನಡೆಸಿದವರು.

ಮೂರು ದಶಕಗಳ ಹಿಂದೆ ಇಬ್ಬರೂ ತಮ್ಮ ತಮ್ಮ ಚಿತ್ರಗಳನ್ನು ಶುಕ್ರವಾರದಂದು ಬಿಡುಗಡೆಗೊಳಿಸಿ ಪೈಪೋಟಿಗೆ ಇಳಿಯುತ್ತಿದ್ದರು. ಅಭಿಮಾನಿಗಳ ವಿಚಾರದಲ್ಲಿ ಮತ್ತು ಜನಪ್ರಿಯತೆಯ ವಿಚಾರದಲ್ಲಿ ರಜನೀಕಾಂತ್, ಕಮಲಹಾಸನ್ ಅವರಿಗಿಂತ ತುಸು ಮೇಲುಗೈ ಸಾಧಿಸಿದರೂ ಸಂಭಾವನೆಯ ವಿಚಾರದಲ್ಲಲ್ಲ.

1977ರಲ್ಲಿ ರಜನಿ, ಕಮಲ್ ಮತ್ತು ಶ್ರೀದೇವಿ ಪ್ರಮುಖ ಭೂಮಿಕೆಯಲ್ಲಿದ್ದ '16 ವಾಯತಿನಾಲೆ' ಚಿತ್ರ ಬಿಡುಗಡೆಗೊಂಡಿತ್ತು. ಭಾರತೀರಾಜ ನಿರ್ದೇಶನದಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ ಭರ್ಜರಿ ಯಶಸ್ಸುಯನ್ನೂ ಸಾಧಿಸಿತ್ತು.

ಸಣ್ಣ ಬಜೆಟಿನ ಅಂದರೆ ಸುಮಾರು ನಾಲ್ಕುವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ಕುಂಬಳಕಾಯಿ ಹೊಡೆದಿದ್ದ ಆ ಚಿತ್ರ ತಮಿಳುನಾಡಿನ ಕೆಲವು ಸೆಂಟರ್ ಗಳಲ್ಲಿ 175 ದಿನ ಸತತ ಪ್ರದರ್ಶನ ಕಂಡಿತ್ತು.

ಈಗ ಆ ಚಿತ್ರ ಡಿಜಿಟಲ್ ಫಾರ್ಮ್ಯಾಟ್ ನಲ್ಲಿ ಮತ್ತೆ ತೆರೆಗೆ ಬರಲು ಸಜ್ಜಾಗಿದೆ. ಆ ಚಿತ್ರದಲ್ಲಿ ರಜನಿ ಮತ್ತು ಕಮಲ್ ಪಡೆದಿದ್ದ ಸಂಭಾವನೆ ಎಷ್ಟು? ಮುಂದೆ ಓದಿ...

16 ವಾಯತಿನಾಲೆ

15.09.1977ರಲ್ಲಿ ಈ ಚಿತ್ರ ಬಿಡುಗಡೆಗೊಂಡಿತ್ತು. ಕಮಲಹಾಸನ್, ರಜನೀಕಾಂತ್, ಶ್ರೀದೇವಿ, ಗೌಂಡಮಣಿ, ಕಾಂತಿಮತಿ ಪ್ರಮುಖ ಭೂಮಿಕೆಯಲ್ಲಿದ್ದ ಈ ಚಿತ್ರಕ್ಕೆ ಇಳಯರಾಜ ಸಂಗೀತ ನೀಡಿದ್ದರು. ಅಮ್ಮನ್ ಕ್ರಿಯೇಶನ್ಸ್ ಬ್ಯಾನರಿನಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರವನ್ನು ಎಸ್ ಎ ರಾಜಕನ್ನು ನಿರ್ಮಿಸಿದ್ದರು.

ಕಮಲ್ ಸಂಭಾವನೆ

ಕಮಲಹಾಸನ್ ಆ ಚಿತ್ರಕ್ಕೆ ಪಡೆದ ಸಂಭಾವನೆ ಎಷ್ಟು ಗೊತ್ತೇ? ಕೇವಲ 27 ಸಾವಿರ. ಈ ವಿಚಾರವನ್ನು ಆ ಚಿತ್ರದ ನಿರ್ದೇಶಕರು ಶುಕ್ರವಾರ (ಅ 4) ನಡೆದ ಪತ್ರಿಕಾಘೋಷ್ಠಿಯಲ್ಲಿ ಬಹಿರಂಗ ಪಡಿಸಿದ್ದಾರೆ.

ರಜನಿ ಕೇಳಿದ್ದೆಷ್ಟು

ಚಿತ್ರದಲ್ಲಿನ ನಟನೆಗೆ ಸೂಪರ್ ಸ್ಟಾರ್ ರಜನೀಕಾಂತ್ ನಿರ್ಮಾಪಕರಲ್ಲಿ ಕೇಳಿದ್ದು ಕೇವಲ ಐದು ಸಾವಿರ. ಆದರೆ ಮೂರು ಸಾವಿರಕ್ಕೆ ಚೌಕಾಸಿ ನಡೆದು ಒಪ್ಪಿಗೆಯಾಗಿತ್ತಂತೆ.

ರಜನಿಗೆ ಕೊಟ್ಟಿದೆಷ್ಟು

ಐದು ಸಾವಿರಕ್ಕೆ ಡಿಮಾಂಡ್ ಇಟ್ಟಿದ್ದ ರಜನಿಯನ್ನು ಮೂರು ಸಾವಿರಕ್ಕೆ ಒಪ್ಪಿಸಿದ್ದರು. ಆದರೆ ಕೊನೆಯಲ್ಲಿ ನಾವು ರಜನಿಗೆ ಕೊಟ್ಟಿದ್ದು ಎರಡುವರೆ ಸಾವಿರ ಮಾತ್ರ. ಬಜೆಟ್ ಮೀರಬಾರದೆನ್ನುವುದಕ್ಕಾಗಿ ರಜನಿಗೆ ಕಮ್ಮಿ ಸಂಭಾವನೆಗೆ ಒಪ್ಪಿಸಿದೆವು ಎನ್ನುತ್ತಾರೆ ನಿರ್ದೇಶಕ ಭಾರತೀರಾಜ.

ತೆಲುಗಿಗೆ ಡಬ್

16 ವಾಯತಿನಾಲೆ ಚಿತ್ರ ಭರ್ಜರಿ ಯಶಸ್ಸು ಪಡೆದು ಆ ಚಿತ್ರವು ಪದಹರೆಲ್ಲಾ ವಾಯಸು ಎಂದು ತೆಲುಗಿಗೆ ರಿಮೇಕ್ ಆಯಿತು. ಚಂದ್ರ ಮೋಹನ್, ಮೋಹನ್ ಬಾಬು ಮತ್ತು ಶ್ರೀದೇವಿ ತೆಲುಗು ಚಿತ್ರದ ಪ್ರಮುಖ ಭೂಮಿಕೆಯಲ್ಲಿದ್ದರು.

English summary
Director Bharathiraja reveals Kamal Hassan and Rajini remuneration details in the press meet of 16 Vayathinile.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada