»   » ಮುಂದಿನ ಚಿತ್ರದ ಬಗ್ಗೆ ಕೊನೆಗೂ ಬಾಯ್ಬಿಟ್ಟ 'ರಾಜಕುಮಾರ' ನಿರ್ದೇಶಕ ಸಂತೋಷ್

ಮುಂದಿನ ಚಿತ್ರದ ಬಗ್ಗೆ ಕೊನೆಗೂ ಬಾಯ್ಬಿಟ್ಟ 'ರಾಜಕುಮಾರ' ನಿರ್ದೇಶಕ ಸಂತೋಷ್

Posted By:
Subscribe to Filmibeat Kannada

ನಿರ್ದೇಶಕ ಸಂತೋಷ್ ಆನಂದ್ ರಾಮ್ ಮುಂದಿನ ಸಿನಿಮಾ ಯಾವುದು ಎಂಬ ಪ್ರಶ್ನೆ ಅನೇಕ ದಿನಗಳಿಂದ ಕಾಡುತ್ತಿದೆ. 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಮತ್ತು 'ರಾಜಕುಮಾರ' ಸಿನಿಮಾದ ದೊಡ್ಡ ಯಶಸ್ಸಿನ ನಂತರ ನಿರ್ದೇಶಕ ಸಂತೋಷ್ ಆನಂದ್ ರಾಮ್ ಈಗ ಮತ್ತೊಂದು ದೊಡ್ಡ ಪ್ರಾಜೆಕ್ಟ್ ಗೆ ಕೈ ಹಾಕಿದ್ದಾರೆ.

ಅನೇಕ ಸ್ಟಾರ್ ನಟರ ಅಭಿಮಾನಿಗಳು 'ನಮ್ ಬಾಸ್ ಜೊತೆ ಒಂದು ಸಿನಿಮಾ ಮಾಡಿ' ಅಂತ ಸಂತೋಷ್ ಆನಂದ್ ರಾಮ್ ಅವರಿಗೆ ಫೇಸ್ ಬುಕ್ ನಲ್ಲಿ ಕೇಳಿಕೊಂಡಿದ್ದರು. ಆದರೆ ತಮ್ಮ ಮುಂದಿನ ಸಿನಿಮಾದ ಬಗ್ಗೆ ಎಲ್ಲಿಯೂ ಬಾಯಿ ಬಿಡದ ಸಂತೋಷ್, ಚಿತ್ರ ತಯಾರಿಯನ್ನು ಸೈಲೆಂಟ್ ಆಗಿಯೇ ಮಾಡಿಕೊಳ್ಳುತ್ತಿದ್ದಾರೆ.

ಸ್ಟಾರ್ ಡೈರೆಕ್ಟರ್ ಸಂತೋಷ್ ಆನಂದ್ ರಾಮ್ ಹ್ಯಾಟ್ರಿಕ್ ಸಿನಿಮಾ ಸುದ್ದಿ..!

ಇಷ್ಟು ದಿನ ಮುಂದಿನ ಸಿನಿಮಾದ ಬಗ್ಗೆ ಎಷ್ಟೇ ಕೇಳಿದರೆ ಸುಮ್ಮನಿದ್ದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಕೊನೆಗೂ ಮೌನ ಮುರಿದಿದ್ದಾರೆ. ಮುಂದೆ ಓದಿ....

'ರಾಜಕುಮಾರ' ಸಂಭ್ರಮ

'ರಾಜಕುಮಾರ' ಸಿನಿಮಾದ 100ನೇ ದಿನದ ವಿಶೇಷವಾಗಿ ನಟ ಪುನೀತ್ ಮತ್ತು ನಿರ್ದೇಶಕ ಸಂತೋಷ್ ಆನಂದ್ ರಾಮ್ 'ನರ್ತಕಿ' ಚಿತ್ರಮಂದಿರಕ್ಕೆ ಭೇಟಿ ಕೊಟ್ಟಿದ್ದರು. ಇದೇ ವೇಳೆ ಸಂತೋಷ್ ತಮ್ಮ ಮುಂದಿನ ಚಿತ್ರದ ಬಗ್ಗೆ ಮಾತನಾಡಿದ್ದಾರೆ.

'ರಣರಂಗ' ಸಿನಿಮಾ

ಈ ಹಿಂದೆ ಹರಿಡಾಡಿದ್ದ ಸುದ್ದಿ ಈಗ ನಿಜಾವಾಗಿದೆ. ಸಂತೋಷ್ ಆನಂದ್ ರಾಮ್ ತಮ್ಮ ಮುಂದಿನ ಸಿನಿಮಾವನ್ನು ನಟ ಶಿವಣ್ಣನೊಂದಿಗೆ ಮಾಡಲಿದ್ದು, ಚಿತ್ರದ ಟೈಟಲ್ 'ರಣರಂಗ' ಅಂತ ಫಿಕ್ಸ್ ಆಗಿದೆ.

ಅಪ್ಪು ಅಭಿಮಾನಿಗಳ ಆಸೆಯನ್ನ ಕೊನೆಗೂ ಈಡೇರಿಸಿದ 'ರಾಜಕುಮಾರ' ತಂಡ

ಅಭಿಮಾನಿಯ ಪ್ರಶ್ನೆ

ಚಿತ್ರಮಂದಿರಕ್ಕೆ ಭೇಟಿ ಕೊಟ್ಟಿದ್ದ ಸಂತೋಷ್ ಆನಂದ್ ರಾಮ್ ಅವರಿಗೆ ಅಭಿಮಾನಿಯೊಬ್ಬರು 'ರಣರಂಗ' ಸಿನಿಮಾ ಯಾವಾಗ ಅಂತ ಪ್ರಶ್ನಿಸಿದರು. ಆಗ ಸಂತೋಷ್ ''ಹೌದು, ರಣರಂಗನೇ.. ಶಿವಣ್ಣನೊಂದಿಗೆ ಸಿನಿಮಾ ಮಾಡಬೇಕು ಎನ್ನುವುದು ನನ್ನ ದೊಡ್ಡ ಆಸೆ. ನಾನು ಬಹಳ ದಿನದಿಂದ ಅದಕ್ಕಾಗಿ ಕಾಯುತ್ತಿದ್ದೇನೆ.'' ಅಂತ ಉತ್ತರಿಸಿದ್ದಾರೆ.

ಮುಂದಿನ ತಿಂಗಳು ಸೆಟ್ಟೇರುತ್ತೆ

ಶಿವಣ್ಣ ಮತ್ತು ಸಂತೋಷ್ ಕಾಂಬಿನೇಶನ್ 'ರಣರಂಗ' ಸಿನಿಮಾ ಮುಂದಿನ ತಿಂಗಳು ಸೆಟ್ಟೇರುವ ಸಾದ್ಯತೆ ಇದೆ. ಸದ್ಯ ಈ ಚಿತ್ರದ ಕಥೆ ಮಾಡುವುದರಲ್ಲಿ ಸಂತೋಷ್ ಬಿಜಿ ಇದ್ದಾರಂತೆ.

ತೆಲುಗು ಚಿತ್ರರಂಗದ ಕಡೆ ಮುಖ ಮಾಡ್ತಾರಾ ಕನ್ನಡಿಗ ಸಂತೋಷ್ ಆನಂದ್ ರಾಮ್.?

English summary
Kannada Director 'Santhosh Ananddram' confirms that his next movie is with Shiva Rajkumar titled 'Ranaranga'
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada