»   » 'ರಾಜಮೌಳಿ'ನ ಭೇಟಿ ಮಾಡಿದ 'ರಾಜಕುಮಾರ' ಡೈರೆಕ್ಟರ್ ಸಂತೋಷ್

'ರಾಜಮೌಳಿ'ನ ಭೇಟಿ ಮಾಡಿದ 'ರಾಜಕುಮಾರ' ಡೈರೆಕ್ಟರ್ ಸಂತೋಷ್

Posted By:
Subscribe to Filmibeat Kannada

ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರ ಮುಂದಿನ ಸಿನಿಮಾ ಯಾವುದು ಅಂತ ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ. ಆದ್ರೆ, ಇತ್ತ ಸಂತೋಷ್ ಆನಂದ್ ರಾಮ್ ಬಾಹುಬಲಿ ನಿರ್ದೇಶಕ ರಾಜಮೌಳಿ ಅವರನ್ನು ಭೇಟಿ ಮಾಡುವುದರ ಮೂಲಕ ಸಂಚಲನ ಸೃಷ್ಟಿಸಿದ್ದಾರೆ

ಇತ್ತೀಚೆಗಷ್ಟೆ ಹೈದರಾಬಾದ್ ನಲ್ಲಿ ಸಂತೋಷ್ ಆನಂದ್ ರಾಮ್ ನಿರ್ದೇಶಕ ರಾಜಮೌಳಿ ಅವರನ್ನು ಭೇಟಿ ಮಾಡಿದ್ದು, ಅವರ ಜೊತೆ ಪೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ತಮ್ಮ ಫೇಸ್ ಬುಕ್ ನಲ್ಲಿ ಫೋಟೋ ಹಾಕಿ ಸಂತಸ ಹಂಚಿಕೊಂಡಿರುವ ಅವರು ರಾಜಮೌಳಿ ಮತ್ತು ಅವರ ಭೇಟಿಯ ಬಗ್ಗೆ ತಿಳಿಸಿದ್ದಾರೆ.

Director Santhosh Ananddram Met S.S.Rajamouli

ಸ್ಟಾರ್ ಡೈರೆಕ್ಟರ್ ಸಂತೋಷ್ ಆನಂದ್ ರಾಮ್ ಹ್ಯಾಟ್ರಿಕ್ ಸಿನಿಮಾ ಸುದ್ದಿ..!

ರಾಜಮೌಳಿ ಅವನ್ನು ಭೇಟಿ ಮಾಡಿದ ವೇಳೆ ಕೆಲವು ಮಾತುಕತೆ ನಡೆದಿದೆಯಂತೆ. ಸಂತೋಷ್ ಆನಂದ್ ರಾಮ್ ಅವರ 'ರಾಜಕುಮಾರ' ಮತ್ತು 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಸಿನಿಮಾದ ಬಗ್ಗೆ ರಾಜಮೌಳಿ ಮಾತನಾಡಿದರಂತೆ. ಇದರ ಜೊತೆಗೆ ಸಂತೋಷ್ ಮುಂದಿನ ಚಿತ್ರಕ್ಕೆ ರಾಜಮೌಳಿ ಅವರು ಕೆಲವು ಸಲಹೆಗಳನ್ನು ನೀಡಿದ್ದಾರಂತೆ.

Director Santhosh Ananddram Met S.S.Rajamouli

'ರಾಜಕುಮಾರ' ನಿರ್ದೇಶಕ ಸಂತೋಷ್ ಆನಂದ್ ರಾಮ್ ಗೆಲುವಿಗೆ 'ರಿಯಲ್' ಕಾರಣ ಇವರೇ.!

ಒಟ್ನಲ್ಲಿ, ಕನ್ನಡ ಯಶಸ್ವಿ ನಿರ್ದೇಶಕ ರಾಜಕುಮಾರ ಅಂತಹ ಸೂಪರ್ ಹಿಟ್ ಸಿನಿಮಾ ನೀಡಿ, ಈಗ ಮುಂದಿನ ಚಿತ್ರಕ್ಕೆ ಅಣಿಯಾಗಿದ್ದಾರೆ. ಹೀಗಿರುವಾಗ, ರಾಜಮೌಳಿಯಿಂದ ಕೆಲವು ಸಲಹೆ ಪಡೆದುಕೊಂಡಿರುವುದು ನಿರೀಕ್ಷೆ ಹೆಚ್ಚಿದೆ.

English summary
Kannada Director 'Santhosh Anandram' Met S.S.Rajamouli in Hyderabad.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada