For Quick Alerts
  ALLOW NOTIFICATIONS  
  For Daily Alerts

  ಅಂದು ಅಪ್ಪು ಅಭಿಮಾನಿ, ಇಂದು ಜನಪ್ರಿಯ ನಿರ್ದೇಶಕ: ಯಾರಿವರು ಹೇಳಿ.?

  |

  ಸ್ಯಾಂಡಲ್ ವುಡ್ ಗೆ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಮತ್ತು 'ರಾಜಕುಮಾರ' ಅಂತಹ ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿದವರು ನಿರ್ದೇಶಕ ಸಂತೋಷ್ ಆನಂದ್ ರಾಮ್.

  ಇಂದು 'ಸ್ಟಾರ್ ನಿರ್ದೇಶಕ', 'ಜನಪ್ರಿಯ ನಿರ್ದೇಶಕ' ಅಂತೆಲ್ಲಾ ಕರೆಯಿಸಿಕೊಳ್ಳುವ ಸಂತೋಷ್ ಆನಂದ್ ರಾಮ್, ಸರಿಯಾಗಿ ಹನ್ನೊಂದು ವರ್ಷಗಳ ಹಿಂದಿನ ಫ್ಲ್ಯಾಶ್ ಬ್ಯಾಕ್ ಗೆ ಹೋದರೆ ಅಪ್ಪಟ ಅಪ್ಪು ಅಭಿಮಾನಿ ಆಗಿದ್ದರು.

  ಶೇಷಾದ್ರಿಪುರಂ ಕಾಲೇಜಿನಲ್ಲಿ ಓದುತ್ತಿದ್ದ ಸಂತೋಷ್ ಆನಂದ್ ರಾಮ್, ತಮ್ಮ ಕಾಲೇಜಿನ ಫೆಸ್ಟ್ ಗಾಗಿ ರಾಘವೇಂದ್ರ ರಾಜ್ ಕುಮಾರ್ ಮುಖಾಂತರ ಪುನೀತ್ ರಾಜ್ ಕುಮಾರ್ ರನ್ನ ಕರ್ಕೊಂಡು ಬಂದಿದ್ದರಂತೆ.

  ಮೆಗಾ ಸಿನಿಮಾದ ಟೈಟಲ್ ಅನಾವರಣ: 'ಯುವರತ್ನ'ನಾದ ಪವರ್ ಸ್ಟಾರ್

  ಅಂದು ಅಭಿಮಾನಿಯಾಗಿ ಪರಿಚಯಗೊಂಡು ಕಾರಿನಲ್ಲಿ ಪುನೀತ್ ಪಕ್ಕದಲ್ಲಿ ಕುಳಿತುಕೊಂಡು ಬಂದಿದ್ದ ಸಂತೋಷ್ ಆನಂದ್ ರಾಮ್ ಇಂದು ಅಪ್ಪು ಕುಟುಂಬಕ್ಕೆ ಅತ್ಯಾಪ್ತವಾಗಿದ್ದಾರೆ. ಅದೃಷ್ಟ ಅಂದ್ರೆ ಇದೇ ಅಲ್ವೇ.?

  ತಮ್ಮ ಈ ಮೆಮೊರಿ ಮ್ಯಾಜಿಕ್ ನ ಸಂತೋಷ್ ಆನಂದ್ ರಾಮ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

  ''2007 ರಲ್ಲಿ ನಾನು ಮತ್ತು ಪವರ್ ಸ್ಟಾರ್. ನಮ್ಮ ಶೇಷಾದ್ರಿಪುರಂ ಕಾಲೇಜ್ ಫೆಸ್ಟ್ ಗೆ ಬಂದಿದ್ದರು. ನಾನೇ ರಾಘಣ್ಣನ್ನ ಅಪ್ರೋಚ್ ಮಾಡಿ ಅಪ್ಪು ಸರ್ ನ ಕಾಲೇಜಿಗೆ ಕರೆತಂದಿದ್ದೆ. ಅವರ ಕಾರಲ್ಲೇ ನನ್ನನ್ನ ಕುಳಿಸಿಕೊಂಡು ಬಂದರು. ಫ್ಯಾನ್ ಆಗಿ ಪರಿಚಯವಾದೆ. ಇಂದು 2017 ಅವರು ನನ್ನ ಫ್ಯಾಮಿಲಿ ಮೆಂಬರ್ ತರಹ ನೋಡ್ತಾರೆ. 'ತಮ್ಮ' ಅಂತಾರೆ'' ಎಂದು ಸಂತೋಷ್ ಆನಂದ್ ರಾಮ್ ಟ್ವೀಟ್ ಮಾಡಿದ್ದಾರೆ.

  ಹೊಂಬಾಳೆ ಫಿಲ್ಮ್ಸ್ ನಲ್ಲಿ ಮತ್ತೆರಡು ಸಿನಿಮಾ ಮಾಡ್ತಾರೆ ಸಂತೋಷ್

  'ರಾಜಕುಮಾರ' ಬಳಿಕ ಪುನೀತ್ ರಾಜ್ ಕುಮಾರ್ ಮತ್ತು ಸಂತೋಷ್ ಆನಂದ್ ರಾಮ್ ಹಿಟ್ ಕಾಂಬಿನೇಶನ್ 'ಯುವರತ್ನ' ಮೂಲಕ ಮುಂದುವರೆಯಲಿದೆ.

  English summary
  Director Santhosh Ananddram shares Memory Magic with Power Star Puneeth Rajkumar in Twitter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X