»   » ಮುತ್ತಾತನನ್ನು ಕಳೆದುಕೊಂಡ ದುಃಖದಲ್ಲಿ 'ರಾಜಕುಮಾರ' ನಿರ್ದೇಶಕ

ಮುತ್ತಾತನನ್ನು ಕಳೆದುಕೊಂಡ ದುಃಖದಲ್ಲಿ 'ರಾಜಕುಮಾರ' ನಿರ್ದೇಶಕ

Posted By:
Subscribe to Filmibeat Kannada

ನಿರ್ದೇಶಕ ಸಂತೋಷ್ ಆನಂದ್ ರಾಮ್ ಈಗ ದುಃಖದಲ್ಲಿ ಇದ್ದಾರೆ. ಪ್ರೀತಿಯ ಮುತ್ತಾತನನ್ನು ಕಳೆದುಕೊಂಡಿದ್ದಾರೆ. ಸಂತೋಷ್ ಆನಂದ್ ರಾಮ್ ತಮ್ಮ ಮುತ್ತಾತ ನಿಧನರಾದ ವಿಷಯವನ್ನು ಟ್ಟಿಟ್ಟರ್ ಖಾತೆಯಲ್ಲಿ ತಿಳಿಸಿದ್ದಾರೆ.

''104 ವರುಷ ಮುತ್ತಿನಂತೆ ಬದುಕಿದ ನನ್ನ ಮುತ್ತಾತ ಇನ್ನಿಲ್ಲ!. ಆ ಆಲದ ಮರ ನನ್ನ ಮದುವೆಗೆ ಬಂದು ನನ್ನ ಹರಸಿದ್ದರು ಅದು ನನ್ನ ಪುಣ್ಯ. ಸ್ವಾವಲಂಬಿಯಾಗಿ 100 ವರುಷ ಬಾಳಿದ ನೀವು ಮತ್ತು ನಿಮ್ಮ ಬದುಕು ನಮಗೆ ಆದರ್ಶ. ನಮ್ಮ ಕುಟುಂಬದ ಅಜರಾಮರ ಇನ್ನು ಪಂಚಭೂತಗಳಲ್ಲಿ ಅಮರ'' ಎಂದು ಸಂತೋಷ್ ಆನಂದ್ ರಾಮ್ ಬರೆದುಕೊಂಡಿದ್ದಾರೆ.


Director Santhosh Anandrams great grandfather pass away

ತಮ್ಮ ಕುಟುಂಬದ ಆಲದ ಮರದಂತೆ ಇದ್ದ ಮುತ್ತಾತನ ಆಗಲಿಗೆ ಸಂತೋಷ್ ಕಣ್ಣೀರು ಹಾಕಿದ್ದಾರೆ. ಅಂದಹಾಗೆ, ಸಂತೋಷ್ ಆನಂದ್ ರಾಮ್ ಕನ್ನಡದಲ್ಲಿ ಎರಡು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಸಂತೋಷ್ ಅವರ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಮತ್ತು 'ರಾಜಕುಮಾರ' ಚಿತ್ರಗಳ ಸೂಪರ್ ಹಿಟ್ ಆಗಿದ್ದು, ಮೂರನೇ ಸಿನಿಮಾವನ್ನು ಸಹ ಪುನೀತ್ ರಾಜ್ ಕುಮಾರ್ ಅವರ ಜೊತೆಗೆ ಮಾಡುತ್ತಿದ್ದಾರೆ.

English summary
Kannada Director Santhosh Anandram's great grandfather pass away.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X