»   » ಶಶಾಂಕ್ ನಿರ್ದೇಶನದಲ್ಲಿ ರಾಜರತ್ನ ಪುನೀತ್ ರಾಜ್ ಕುಮಾರ್ ಸಿನಿಮಾ

ಶಶಾಂಕ್ ನಿರ್ದೇಶನದಲ್ಲಿ ರಾಜರತ್ನ ಪುನೀತ್ ರಾಜ್ ಕುಮಾರ್ ಸಿನಿಮಾ

Posted By:
Subscribe to Filmibeat Kannada

ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಸಿನಿಮಾಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಸದ್ಯ 'ಅಂಜನಿಪುತ್ರ' ಸಿನಿಮಾದಲ್ಲಿ ಬ್ಯುಸಿ ಇರುವ ಪುನೀತ್ ಆ ಬಳಿಕ ನಿರ್ದೇಶಕ ಶಶಾಂಕ್ ಜೊತೆ ಸಿನಿಮಾ ಮಾಡಲಿದ್ದಾರಂತೆ.

ಪುನೀತ್ 'ಮನೆ'ಯಿಂದ ಹೊರಬಿತ್ತು 'ಬಿಗ್' ಸಿನಿಮಾ ಸುದ್ದಿ

'ಕೃಷ್ಣನ್ ಲವ್ ಸ್ಟೋರಿ', 'ಬಚ್ಚನ್', 'ಕೃಷ್ಣ ಲೀಲಾ' ಗಳಂತಹ ಬ್ಲಾಕ್ ಬಾಸ್ಟರ್ ಸಿನಿಮಾಗಳನ್ನು ಕೊಟ್ಟಿದ್ದ ಶಶಾಂಕ್ ಕಳೆದ ವರ್ಷ 'ಮುಂಗಾರು ಮಳೆ 2' ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಆ ಸಿನಿಮಾದ ನಂತರ ಈಗ ಶಶಾಂಕ್ ಪುನೀತ್ ಜೊತೆ ಒಂದು ಸಿನಿಮಾ ಮಾಡಲಿದ್ದಾರಂತೆ. ಈಗಾಗಲೇ ಶಶಾಂಕ್ ಸಿನಿಮಾದ ಸ್ಕ್ರಿಪ್ಟ್ ವರ್ಕ್ ನಲ್ಲಿ ತೊಡಗಿದ್ದು, ಆ ಸಿನಿಮಾದ ಒಂದಷ್ಟು ವಿವರಗಳು ಮುಂದಿದೆ ಓದಿ....

ಶಶಾಂಕ್ ಸಿನಿಮಾ

ಈ ಹಿಂದೆ ಶಶಾಂಕ್ ನಟ ಸುದೀಪ್, ಅಜಯ್ ರಾವ್, ಗಣೇಶ್, ಅವರಿಗೆ ಸಿನಿಮಾ ನಿರ್ದೇಶಕ ಮಾಡಿದ್ದರು. ಆದರೆ ಈಗ ಮೊದಲ ಬಾರಿಗೆ ಪುನೀತ್ ರಾಜ್ ಕುಮಾರ್ ಅವರೊಂದಿಗೆ ಶಶಾಂಕ್ ಸಿನಿಮಾ ಮಾಡಲಿದ್ದಾರೆ.

ಪುನೀತ್ ನಿರ್ಮಾಣ

ಶಶಾಂಕ್ ನಿರ್ದೇಶನದ ಈ ಸಿನಿಮಾಗೆ ಪುನೀತ್ ನಟಿಸುವುದರ ಜೊತೆಗೆ ತಾವೇ ಬಂಡವಾಳ ಹಾಕಿದ್ದಾರಂತೆ. ಪುನೀತ್ ಅವರ 'PRK' ಪ್ರೊಡಕ್ಷನ್ಸ್ ನಲ್ಲಿ ಈ ಸಿನಿಮಾ ನಿರ್ಮಾಣ ಆಗಲಿದೆ.

3ನೇ ಚಿತ್ರಕ್ಕೆ ಚಾಲನೆ ಕೊಟ್ಟ ನಿರ್ದೇಶಕ ಸಂತೋಷ್ ಆನಂದ್ ರಾಮ್

ಜನವರಿಯಲ್ಲಿ ಶುರು

ಸದ್ಯ ಸಿನಿಮಾದ ಸ್ಕ್ರಿಪ್ಟ್ ವರ್ಕ್ ನಲ್ಲಿ ಶಶಾಂಕ್ ಬ್ಯುಸಿ ಇದ್ದಾರೆ. ಜೊತೆಗೆ ಪುನೀತ್ ಸಹ ಬೇರೆ ಬೇರೆ ಸಿನಿಮಾದಲ್ಲಿ ತೊಡಗಿದ್ದಾರೆ. ಅದ್ದರಿಂದ ಚಿತ್ರವನ್ನು ಜನವರಿ ವೇಳೆಗೆ ಶುರು ಮಾಡುವ ಆಲೋಚನೆ ಇದೆಯಂತೆ.

80ರಷ್ಟು ಶೂಟಿಂಗ್ ಮುಗಿಸಿದ 'ಅಂಜನಿಪುತ್ರ', ಕ್ಲೈಮ್ಯಾಕ್ಸ್ ಎಲ್ಲಿ?

ಹೆಚ್ಚಿನ ಮಾಹಿತಿ ಇಲ್ಲ

ಸದ್ಯ ಪುನೀತ್ ಮತ್ತು ಶಶಾಂಕ್ ಅವರ ಕಾಂಬಿನೇಶನ್ ನಲ್ಲಿ ಸಿನಿಮಾ ಬರುವುದು ಪಕ್ಕಾ ಆಗಿದೆ. ಆದರೆ ಸಿನಿಮಾದ ಕಥೆ, ನಾಯಕಿ ಸೇರಿದಂತೆ ಹೆಚ್ಚಿನ ಮಾಹಿತಿ ಇನ್ನೂ ಬಹಿರಂಗ ಆಗಿಲ್ಲ.

ರಕ್ಷಿತ್ ಶೆಟ್ಟಿ ಕನಸಿಗೆ ಕೈ ಜೋಡಿಸಿದ ಪುನೀತ್ ರಾಜ್ ಕುಮಾರ್

English summary
Director Shashank will be directing a movie to Power Star Puneet Rajkumar.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada