For Quick Alerts
  ALLOW NOTIFICATIONS  
  For Daily Alerts

  ತರುಣ್ ಸುಧೀರ್ ನಿರ್ದೇಶಕರಾಗಲು ಕಾರಣರಾಗಿದ್ದು ಈ ಗೆಳೆಯ

  |

  ನಿರ್ದೇಶಕ ತರುಣ್ ಸುಧೀರ್ ಇಂದು 'ರಾಬರ್ಟ್'ದಂತಹ ದೊಡ್ಡ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇಂದು ನಿರ್ಮಾಪಕರು ಅವರನ್ನು ನಂಬಿ ಬಂಡವಾಳ ಹಾಕುತ್ತಾರೆ, ನಟರು ಕಾಲ್ ಶೀಟ್ ನೀಡುತ್ತಾರೆ. ಆದರೆ, ಅಂದು ಅವರನ್ನು ನಂಬಿದ್ದು, ಒಬ್ಬರು ಮಾತ್ರ.

  ತರುಣ್ ಸುಧೀರ್ ನಿರ್ದೇಶಕ ಆಗಬಹುದು ಎಂದು ಮೊದಲು ನಂಬಿಕೆ ಇಟ್ಟಿದ್ದು, ಅವರಿಗೆ ಧೈರ್ಯ ತುಂಬಿದ್ದು, ಅವರ ಆಪ್ತ ಗೆಳೆಯ ಶರಣ್. ಇಂದು ನಟ ಶರಣ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಗೆಳೆಯನಿಗೆ ತರುಣ್ ಶುಭಾಶಯ ತಿಳಿಸಿದ್ದಾರೆ.

  ಶರಣ್-ತರುಣ್ ಸುಧೀರ್ ಸ್ನೇಹವನ್ನ 4 ವರ್ಷ ದೂರ ಮಾಡಿತ್ತು ಆ ಒಂದು ಹಾಡು.!ಶರಣ್-ತರುಣ್ ಸುಧೀರ್ ಸ್ನೇಹವನ್ನ 4 ವರ್ಷ ದೂರ ಮಾಡಿತ್ತು ಆ ಒಂದು ಹಾಡು.!

  ಸೋಷಿಯಲ್ ಮೀಡಿಯಾದಲ್ಲಿ ಶರಣ್ ಬಗ್ಗೆ ಬರೆದಿರುವ ತರುಣ್ ''ನನ್ನನ್ನು ಯಾರೊಬ್ಬರು ನಂಬದೆ ಇರುವ ಸಮಯದಲ್ಲಿ, ನಂಬಿಕೆ ಇಟ್ಟು, ಪ್ರೋತ್ಸಾಹ ನೀಡಿದ ಒಬ್ಬನೇ ವ್ಯಕ್ತಿ ಶರಣ್. ಸಹೋದರನ ರೀತಿ ನನಗೆ ಶಕ್ತಿ ತುಂಬಿದ್ದಾನೆ. ಹುಟ್ಟುಹಬ್ಬದ ಶುಭಾಶಯಗಳು. ಅಣ್ಣ'' ಎಂದು ಶುಭಾಶಯ ತಿಳಿಸಿದ್ದಾರೆ. ತಮ್ಮ ಹಾಗೂ ಶರರ್ಣ ಜೊತೆಗಿನ ಫೋಟೋವನ್ನು ತರುಣ್ ಹಂಚಿಕೊಂಡಿದ್ದಾರೆ.

  ತರುಣ್ ಮತ್ತು ಶರಣ್ ಇಬ್ಬರು ಒಳ್ಳೆಯ ಗೆಳೆಯರು. ಶರಣ್ ಮೊದಲ ಸಿನಿಮಾದಿಂದ ಇಲ್ಲಿಯವರೆಗೆ ಅವರ ಜೊತೆಗೆ ತರುಣ್ ನಿಂತಿದ್ದಾರೆ. ಶರಣ್ ಕೂಡ ತರುಣ್ ಗೆ ಬೆಂಬಲವಾಗಿ ಇದ್ದಾರೆ.

  ಶರಣ್ ಹೀರೋ ಆಗಲು ಹೊರಟಾಗ ಎದುರಾದ ಕಷ್ಟಗಳು ಒಂದೆರಡಲ್ಲ.!ಶರಣ್ ಹೀರೋ ಆಗಲು ಹೊರಟಾಗ ಎದುರಾದ ಕಷ್ಟಗಳು ಒಂದೆರಡಲ್ಲ.!

  'ರಾಂಬೋ', 'ರಾಂಬೋ 2', 'ಅಧ್ಯಕ್ಷ' 'ಅಧ್ಯಕ್ಷ 2' ಸಿನಿಮಾಗಳಲ್ಲಿ ಶರಣ್ ಹಾಗೂ ತರುಣ್ ಒಟ್ಟಿಗೆ ಕೆಲಸ ಮಾಡಿದ್ದಾರೆ.

  English summary
  Director Tharun Sudhir wihes for actor Sharan birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X