For Quick Alerts
  ALLOW NOTIFICATIONS  
  For Daily Alerts

  ಫೋನ್ ಪಿಕ್ ಮಾಡ್ತಿಲ್ಲ, ಕೈ ಗೂ ಸಿಕ್ತಿಲ್ಲ, ಪಾರೂಲ್ ವಿರುದ್ದ ಗಂಭೀರ ಆರೋಪ

  By Pavithra
  |

  ನಟಿ ಪಾರೂಲ್ ಯಾದವ್ ಪತ್ತೆನೇ ಇಲ್ವಾಂತೆ. ಅದೆಲ್ಲಿ ಹೋದರು ಅಂತ ಹುಡುಕುವಂತಾಗಿದೆ. ಫೋನ್ ಮಾಡಿದ್ರೆ ಕಾಲ್ ಪಿಕ್ ಮಾಡಲ್ಲ. ಓಕೆ ಮೀಟ್ ಮಾಡೋಣ ಅಂದ್ರು ಕೈಗೆ ಸಿಗುತ್ತಿಲ್ಲ, ಏನು ಮಾಡೋದು ಗೊತ್ತಾಗುತ್ತಿಲ್ಲ. ಇದು ನಾವು ಹೇಳುತ್ತಿರುವ ಮಾತಲ್ಲ, ಸೀಜರ್ ಸಿನಿಮಾತಂಡದ ಮಾತು. ನಟಿ ಪಾರುಲ್ ಸೀಜರ್ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.

  ನಟಿ ಪಾರೂಲ್ ರವಿಚಂದ್ರನ್ ಅಭಿನಯದ ಸೀಜರ್ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಚಿತ್ರತಂಡದಿಂದ ಪಾರೂಲ್ ಅವರಿಗೆ ಒಂದು ವರೆ ಲಕ್ಷ ಹಣ ಕೂಡ ಬರಬೇಕಾಗಿದೆ. ಹಣಕೊಟ್ಟು ಚಿತ್ರದ ಪ್ರಚಾರಕ್ಕೆ ಕರೆಯೋಣ ಅಂತ ಸಂಪರ್ಕ ಮಾಡಲು ಚಿತ್ರತಂಡ ಪ್ರಯತ್ನ ಪಟ್ಟರೆ ಪಾರೂಲ್ ಕೈಗೆ ಸಿಕ್ಕಿಲ್ಲವಂತೆ. ಭೇಟಿ ಮಾಡಿ ಹಣ ಕೊಡಲು ನಿರ್ಧಾರ ಮಾಡಿಯೂ ಆಗಿದೆ ಅನ್ನುವುದು ಚಿತ್ರತಂಡದ ಮಾತು.

  ರವಿಚಂದ್ರನ್ ಸಿನಿಮಾ ಡೈಲಾಗ್ ಸೃಷ್ಡಿಸಿದೆ ಹೊಸ ವಿವಾದರವಿಚಂದ್ರನ್ ಸಿನಿಮಾ ಡೈಲಾಗ್ ಸೃಷ್ಡಿಸಿದೆ ಹೊಸ ವಿವಾದ

  ಸಿನಿಮಾ ಬಿಡುಗಡೆ ಮುಂಚೆ ಸುದ್ದಿಗೋಷ್ಠಿ ಮಾಡಿದ ಸೀಜರ್ ಚಿತ್ರತಂಡ ಸುದ್ದಿಗೋಷ್ಠಿಯಲ್ಲಿ ನಾಯಕಿ ನಟಿ ಪ್ರಚಾರಕ್ಕೆ ಬರುತ್ತಿಲ್ಲ. ಸಂಪರ್ಕ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

  ಸೀಜರ್ ಚಿತ್ರದಲ್ಲಿ ರವಿಚಂದ್ರನ್ ಹಾಗೂ ಚಿರಂಜೀವಿ ಸರ್ಜಾ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಚಂದನ್ ಶೆಟ್ಟಿ ಸಂಗೀತ ನಿರ್ದೇಶನ ಮಾಡಿದ್ದು ವಿನಯ್ ಕೃಷ್ಣ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ಇದೇ ಶುಕ್ರವಾರ ಸಿನಿಮಾ ತೆರೆಗೆ ಬರಲಿದ್ದು ಈಗಾಗಲೇ ಚಿತ್ರ ಸಂಭಾಷಣೆ ಬದಲಾಯಿಸಿ ಎನ್ನುವ ಕಾರಣಕ್ಕೆ ವಿವಾದಕ್ಕೆ ಸಿಲುಕಿಕೊಂಡಿದೆ.

  ವಿವಾದದ ಬಗ್ಗೆ ಮಾತನಾಡಿದ ನಿರ್ದೆಶಕರು ಸಂಭಾಷಣೆ ತೆಗೆಯುವ ಬಗ್ಗೆ ನಿರ್ಧಾರ ಮಾಡಿಲ್ಲ. ಪ್ರಕಾಶ್ ರೈ ಅವರು ಯಾವತ್ತಿಗೂ ಕರೆ ಮಾಡಿ ಸಂಭಾಷನೆ ಬಗ್ಗೆ ಮಾತನಾಡಿಲ್ಲ ಏಕೆಂದರೆ ಚಿತ್ರದಲ್ಲಿ ಅವರೇ ಖಳನಾಯಕ ಎಂದಿದ್ದಾರೆ. ಇದೇ ವಾರ ಬಿಡುಗಡೆ ಆಗುತ್ತಿರುವ ಸೀಜರ್ ಚಿತ್ರ ವಿವಾದ ಬಿಡುಗಡೆ ಸಮಯಕ್ಕೆ ಮತ್ಯಾವ ತಿರುವು ಪಡೆಡುಕೊಳ್ಳುತ್ತೆ ನೋಡಬೇಕು.

  English summary
  Kannada Actress Parul Yadav is not coming to Kannada Film 'Seizer' promotion, alleges Director Vinay Krishna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X