For Quick Alerts
  ALLOW NOTIFICATIONS  
  For Daily Alerts

  ಅರೇ..ಅಭಿಮಾನಿಗಳಿಗಾಗಿ ಮತ್ತೆ 'ಗಾಳಿಪಟ' ಹಾರಿಸ್ತಾರಂತೆ ಭಟ್ಟರು!

  By Pavithra
  |
  ಗಾಳಿಪಟ ಸಿನಿಮಾ ಮತ್ತೆ ಬರ್ತಿದೆ | Filmibeat Kannada

  'ಗಾಳಿಪಟ' ಯೋಗರಾಜ್ ಭಟ್ ಅವರ 'ಮುಂಗಾರು ಮಳೆ' ಸಿನಿಮಾ ನಂತರ ಮತ್ತೆ ಅಭಿಮಾನಿಗಳ ಮನಸ್ಸು ಮುಟ್ಟಿದ ಚಿತ್ರ. ಕನ್ನಡ ಸಿನಿಮಾರಂಗದಲ್ಲಿ ಬೇರೆಯದ್ದೇ ರೀತಿಯ ಚಿತ್ರಗಳು ತೆರೆಗೆ ಬರ್ತಿವೆ ಎನ್ನುವುದನ್ನು ತೋರಿಸಿಕೊಟ್ಟಂತ ಚಿತ್ರಗಳಲ್ಲಿ 'ಗಾಳಿಪಟ' ಸಿನಿಮಾ ಕೂಡ ಒಂದು.

  ಒಂದು ವರ್ಗದ ಜನರಿಗೆ ಮಾತ್ರವಲ್ಲದೆ ಕುಟುಂಬ ಸಮೇತರಾಗಿ ಕುಳಿತು ನೋಡಿ ಎಂಜಾಯ್ ಮಾಡಿದ ಚಿತ್ರ 'ಗಾಳಿಪಟ'. ಕೇವಲ ಪ್ರೇಕ್ಷಕರ ಮನಸ್ಸನ್ನು ಮಾತ್ರವಲ್ಲದೆ ಬಾಕ್ಸ್ ಆಫೀಸ್ ನಲ್ಲಿ ಸಖತ್ ಸುದ್ದಿ ಮಾಡಿದ ಚಿತ್ರ 'ಗಾಳಿಪಟ'.

  ಇದರ ಜೊತೆಯಲ್ಲಿ ಸಿನಿಮಾದಲ್ಲಿ ಅಭಿನಯ ಮಾಡಿದ ಕಲಾವಿದರು ಹಾಗೂ ತಂತ್ರಜ್ಞರಿಗೆ ಕನ್ನಡ ಸಿನಿಮಾರಂಗ ಹಾಗೂ ಬೇರೆ ಚಿತ್ರರಂಗದಲ್ಲಿಯೂ ಅವಕಾಶ ಪಡೆಯುವಂತೆ ಮಾಡಿದ ಚಿತ್ರಗಳ ಸಾಲಿನಲ್ಲಿ 'ಗಾಳಿಪಟ' ಸೇರಿಕೊಳ್ಳುತ್ತದೆ. ಎಲ್ಲಾ ವಿಚಾರದಲ್ಲಿಯೂ ಯಶಸ್ಸು ಪಡೆದುಕೊಂಡಿದ್ದ ಗಾಳಿಪಟವನ್ನು ಮತ್ತೆ ಹಾರಿಸಲು ಮನಸ್ಸು ಮಾಡಿದ್ದಾರಂತೆ ಭಟ್ಟರು. ಹಾಗಾದರೆ 'ಗಾಳಿಪಟ' ಮತ್ತೆ ರೀ ರಿಲೀಸ್ ಆಗುತ್ತಾ? ಅಥವಾ ಮತ್ತೆ ಅದೇ ತಂಡದ ಜೊತೆ ಸಿನಿಮಾ ಮಾಡ್ತಾರಾ ಭಟ್ಟರು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಮುಂದೆ ಓದಿ

  'ಗಾಳಿಪಟ 2' ಸಿನಿಮಾ ಮಾಡ್ತಾರಂತೆ ಭಟ್ಟರು

  'ಗಾಳಿಪಟ 2' ಸಿನಿಮಾ ಮಾಡ್ತಾರಂತೆ ಭಟ್ಟರು

  ರೊಮ್ಯಾಂಟಿಕ್ -ಕಾಮಿಡಿ ಸಿನಿಮಾಗಳನ್ನ ನಿರ್ದೇಶನ ಮಾಡಿ ಸಕ್ಸಸ್ ಪಡೆದುಕೊಂಡಿರುವ ನಿರ್ದೇಶಕ ಯೋಗರಾಜ್ ಭಟ್ ಮತ್ತೆ 'ಗಾಳಿಪಟ' ಹಾರಿಸಲು ಸಜ್ಜಾಗಿದ್ದಾರೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಅಂದರೆ 'ಗಾಳಿಪಟ 2 'ಚಿತ್ರಕ್ಕೆ ಭಟ್ಟರು ಆಕ್ಷನ್ ಕಟ್ ಹೇಳಲಿದ್ದಾರಂತೆ.

  ಭಟ್ಟರ ನಿರ್ದೇಶನದಲ್ಲಿ 'ಗಾಳಿಪಟ 2'

  ಭಟ್ಟರ ನಿರ್ದೇಶನದಲ್ಲಿ 'ಗಾಳಿಪಟ 2'

  'ಗಾಳಿಪಟ 2' ಸಿನಿಮಾವನ್ನು ನಿರ್ದೇಶನ ಮಾಡಲು ಮನಸ್ಸು ಮಾಡಿರುವ ಯೋಗರಾಜ್ ಭಟ್ ಹೊಸ ಕಲಾವಿದರನ್ನು ಚಿತ್ರಕ್ಕೆ ನಾಯಕರನ್ನಾಗಿ ಆಯ್ಕೆ ಮಾಡಿಕೊಂಡು ಸಿನಿಮಾ ಮಾಡುತ್ತಾರಂತೆ.

  'ಗಾಳಿಪಟ 2' ಚಿತ್ರಕ್ಕೆ ತಯಾರಿ

  'ಗಾಳಿಪಟ 2' ಚಿತ್ರಕ್ಕೆ ತಯಾರಿ

  ಸದ್ಯ 'ಪಂಚತಂತ್ರ' ಸಿನಿಮಾದ ಪೋಸ್ಟ್ ಪ್ರೊಡಕ್ಷನ್ಸ್ ನಲ್ಲಿ ಬ್ಯುಸಿ ಆಗಿರುವ ಯೋಗರಾಜ್ ಭಟ್ 'ಪಂಚತಂತ್ರ' ಚಿತ್ರೀಕರಣ ಮುಗಿಸಿದ ನಂತರ 'ಗಾಳಿಪಟ 2' ಸಿನಿಮಾ ತಯಾರಿ ಮಾಡಿಕೊಳ್ಳಲಿದ್ದಾರಂತೆ.

  'ಗಾಳಿಪಟ 2' ಚಿತ್ರಕ್ಕೆ ಇದೆ ನಿರೀಕ್ಷೆ

  'ಗಾಳಿಪಟ 2' ಚಿತ್ರಕ್ಕೆ ಇದೆ ನಿರೀಕ್ಷೆ

  ಯೋಗರಾಜ್ ಭಟ್ 'ಗಾಳಿಪಟ 2' ಸಿನಿಮಾ ನಿರ್ದೇಶನ ಮಾಡುತ್ತಾರೆ ಎನ್ನುವ ವಿಚಾರ ಹಬ್ಬುತ್ತಿದ್ದ ಹಾಗೆ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಸಂಭಾಷಣೆ, ಕಥೆ, ಹಾಡುಗಳು ಹಾಗೂ ಕರ್ನಾಟಕದ ಅದ್ಬುತ ತಾಣಗಳನ್ನು ಪ್ರೇಕ್ಷಕರ ಮುಂದಿಟ್ಟ 'ಗಾಳಿಪಟ' ಚಿತ್ರದಂತೆ 'ಗಾಳಿಪಟ 2' ಕೂಡ ಇರಲಿ ಎನ್ನುವುದು ಅಭಿಮಾನಿಗಳ ಆಶಯವಾಗಿದೆ.

  English summary
  Kannada director Yogaraj Bhat is directing Gaalipata 2 movie. Gaalipata 2 was released in 2008.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X