»   » ಆಸ್ಟ್ರೇಲಿಯಾದಲ್ಲಿ ಯೋಗರಾಜ್ ಭಟ್ ಸಖತ್ ಎಂಜಾಯ್.!

ಆಸ್ಟ್ರೇಲಿಯಾದಲ್ಲಿ ಯೋಗರಾಜ್ ಭಟ್ ಸಖತ್ ಎಂಜಾಯ್.!

Posted By:
Subscribe to Filmibeat Kannada

ವಿಕಟಕವಿ ಯೋಗರಾಜ್ ಭಟ್ ಸದ್ಯ, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಮುಗುಳ ನಗೆ' ಚಿತ್ರವನ್ನ ನಿರ್ದೇಶನ ಮಾಡ್ತಿದ್ದಾರೆ. ಇದಾದ ನಂತರ 'ಗಾಳಿಪಟ-2' ಚಿತ್ರವನ್ನ ಶುರುಮಾಡುವ ತಯಾರಿಯಲ್ಲಿದ್ದಾರೆ. ಅಷ್ಟರಲ್ಲಾಗಲೇ ಭಟ್ಟರು ಸೈಲಾಂಟ್ ಆಗಿ ಆಸ್ಟ್ರೇಲಿಯಾಗೆ ಹಾರಿದ್ದಾರೆ.[ಮತ್ತೆ ಹಾರಲಿದೆ 'ಗಾಳಿಪಟ': ಭಟ್ಟರ ಅಡ್ಡಾಗೆ ಬಂದ ಮತ್ತೊಬ್ಬ ಸ್ಟಾರ್ ನಟ!]

ಅಯ್ಯೋ....! ಮೊನ್ನೆ ಮೊನ್ನೆ ತಾನೆ 'ಮುಗುಳನಗೆ' ಚಿತ್ರದ ಶೂಟಿಂಗ್ ಸೆಟ್ ನಲ್ಲಿ ನೋಡಿದ್ದ ಭಟ್ಟರು ಈಗ ಸಡನ್ ಆಸ್ಟ್ರೇಲಿಯಾಗೆ ಯಾಕೆ ಹೋದ್ರು? ಯಾರ ಜೊತೆ ಹೋಗಿದ್ದಾರೆ? ಅಲ್ಲಿ ಏನ್ಮಾಡ್ತಿದ್ದಾರೆ? ಎಂಬ ಹಲವು ಪ್ರಶ್ನೆಗಳು ಕಾಡುವುದು ನಿಜಾ. ಮುಂದೆ ನೋಡಿ ಯೋಗರಾಜ್ ಭಟ್ಟರು ಆಸ್ಟ್ರೇಲಿಯಾದಲ್ಲಿ ಹೇಗೆ ಎಂಜಾಯ್ ಮಾಡ್ತಿದ್ದಾರೆ ಅಂತ ಗೊತ್ತಾಗುತ್ತೆ. ಮುಂದೆ ನೋಡಿ.....

ಸಮ್ಮರ್ ಪ್ರವಾಸದಲ್ಲಿ ಭಟ್ಟರು

ಸತತ ಸಿನಿಮಾ, ಶೂಟಿಂಗ್ ಅಂತ ಬ್ಯುಸಿಯಾಗಿದ್ದ ಯೋಗರಾಜ್ ಭಟ್ಟರು, ಈಗ ರಿಲೀಫ್ ಆಗಲು ಆಸ್ಟ್ರೇಲಿಯಾಗೆ ಟೂರ್ ಹೋಗಿದ್ದಾರೆ.[ಗಣೇಶ್-ಭಟ್ ಕಾಂಬಿನೇಷನ್ ನಲ್ಲಿ 'ಗಾಳಿಪಟ-2' ಬರಲಿದೆ.. ನಿರೀಕ್ಷಿಸಿ..]

ಫ್ಯಾಮಿಲಿ ಜೊತೆ ಪ್ರವಾಸ

ಪತ್ನಿ ರೇಣುಕ ಹಾಗೂ ಇಬ್ಬರು ಮಕ್ಕಳ ಜೊತೆ ಯೋಗರಾಜ್ ಭಟ್ ಅವರು ಹಾಲಿ ಡೇ ಎಂಜಾಯ್ ಮಾಡಲು ಆಸ್ಟ್ರೇಲಿಯಾಗೆ ಹೋಗಿದ್ದಾರೆ.

ಸೆಲ್ಫಿ ಸಂಭ್ರಮ

ತಮ್ಮ ಮುದ್ದಾದ ಕುಟುಂಬದ ಜೊತೆ ಹಾಲಿ ಡೇ ಎಂಜಾಯ್ ಮಾಡ್ತಿರುವ ಯೋಗರಾಜ್ ಭಟ್ಟರ ಸ್ಟೈಲಿಶ್ ಸೆಲ್ಫಿಗಳು ಇಲ್ಲಿದೆ ನೋಡಿ.

ಮಕ್ಕಳ ಜೊತೆ ಆಟ

ಸದಾ ಸಿನಿಮಾ ಎಂಬ ಕೆಲಸದಲ್ಲಿರುವ ವಿಕಟಕವಿಗಳು ತಮ್ಮ ಮಕ್ಕಳ ಜೊತೆ ಮಗುವಾಗಿ ಆಟವಾಡ್ತಿದ್ದಾರೆ.

ಪೋಸ್ ಲೈಕ್ 'ರಾಜಕುಮಾರ್'

ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ನಿರ್ದೇಶಕ ಯೋಗರಾಜ್ ಭಟ್ ಅವರು, ಹೆಗಲ ಮೇಲೆ ಪಾರಿವಾಳ ಕೂರಿಸಿಕೊಂಡು 'ಕಸ್ತೂರಿ ನಿವಾದ' ಅಣ್ಣಾವ್ರ ಸ್ಟೈಲ್ ನಲ್ಲಿ ಫೋಸ್ ಕೊಟ್ಟಿರುವುದು ವಿಶೇಷ.

ಸುಂದರ ತಾಣಗಳಲ್ಲಿ ನಮ್ ಭಟ್ರು

ಆಸ್ಟ್ರೇಲಿಯಾದಲ್ಲಿರುವ ಸುಂದರ ತಾಣಗಳಲ್ಲಿ ಯೋಗರಾಜ್ ಭಟ್ ಮತ್ತು ಅವರ ಪತ್ನಿ, ಮಕ್ಕಳು ಕಾಣಿಸಿಕೊಂಡಿದ್ದು ಹೀಗೆ.

English summary
Kannada Director Yograj Bhat Went To Australia With His Family For Summer Vacation.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada