»   » ಹೊಸಬರೊಂದಿಗೆ, ಹೊಸ ಪ್ರಯೋಗದೊಂದಿಗೆ ಬರ್ತಿದ್ದಾರೆ ಭಟ್ರು

ಹೊಸಬರೊಂದಿಗೆ, ಹೊಸ ಪ್ರಯೋಗದೊಂದಿಗೆ ಬರ್ತಿದ್ದಾರೆ ಭಟ್ರು

Posted By:
Subscribe to Filmibeat Kannada

ಯೋಗರಾಜ್ ಭಟ್ರೇ ಹಾಗೆ... ಹೊಸ ಪ್ರಯೋಗಗಳು, ಹೊಸ ರೀತಿಯ ಸಿನಿಮಾಗಳನ್ನ ಕನ್ನಡ ಸಿನಿಮಾರಂಗಕ್ಕೆ ಪರಿಚಯಿಸಿದ ಕೀರ್ತಿ ಅವರದ್ದು. ಹೊಸ ರೀತಿಯ ಸಿನಿಮಾಗಳನ್ನ ಜನರು ಮೆಚ್ಚಿಕೊಳ್ತಾರೆ ಹಾಗೂ ಅಂತಹ ಚಿತ್ರಗಳು ಜನರ ಮನಸ್ಸಿನಲ್ಲಿ ಅಚ್ಚಳಿಯದ ಹಾಗೆ ಉಳಿದುಕೊಂಡು ಬಿಡುತ್ತವೆ ಅನ್ನೋದನ್ನೂ ನಿರೂಪಿಸಿದ ನಿರ್ದೇಶಕರು ಯೋಗರಾಜ್ ಭಟ್.

ಮುಗುಳುನಗೆ ಸಿನಿಮಾ ಮಾಡಿ ಹೆಣ್ಣುಮಕ್ಕಳ ಕಣ್ಣಲ್ಲಿ ನೀರು ತರಿಸಿದ ಭಟ್ಟರು ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ಪ್ರಯೋಗಾತ್ಮಕ ಸಿನಿಮಾಗಳನ್ನ ಬಾಚಿ ಅಪ್ಪಿಕೊಳ್ತಿರೋ ಕನ್ನಡ ಸಿನಿಮಾ ಪ್ರೇಮಿಗಳ ಮುಂದೆ ಹೊಸ ಪ್ರಯತ್ನದೊಂದಿಗೆ ಹೊಸ ತಂಡದೊಂದಿಗೆ ಭಟ್ಟರು ಪ್ರತ್ಯಕ್ಷರಾಗಲಿದ್ದಾರೆ. ಹಾಗಾದ್ರೆ ಭಟ್ಟರು ನಿರ್ದೇಶನ ಮಾಡುತ್ತಿರೋ ಚಿತ್ರ ಯಾವುದು? ಮುಂದೆ ಓದಿ

ಹೊಸಬರೊಂದಿಗೆ ಬರ್ತಿದ್ದಾರೆ ವಿಕಟ ಕವಿ

ಸ್ಯಾಂಡಲ್ ವುಡ್ ನ ಸ್ಟಾರ್ ನಿರ್ದೇಶಕ ಯೋಗರಾಜ್ ಭಟ್ ಹೊಸ ಕತೆಯನ್ನ ಪ್ರೇಕ್ಷಕರ ಮುಂದೆ ತರಲು ಮುಂದಾಗಿದ್ದಾರೆ. ಹೊಸ ಪ್ರತಿಭೆಗಳನ್ನ ಒಟ್ಟುಗೂಡಿಸಿಕೊಂಡು ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ನಾಯಕ ನಾಯಕಿಯ ಹುಡುಕಾಟ ಶುರುವಾಗಿದ್ದು ಪ್ರೀ ಪ್ರೊಡಕ್ಷನ್ ನಲ್ಲಿ ಭಟ್ಟರು ಬ್ಯುಸಿ ಆಗಿದ್ದಾರೆ.

ಇನ್ನೂ ಫಿಕ್ಸ್ ಆಗಿಲ್ಲ ಟೈಟಲ್

ಯೋಗರಾಜ್ ಭಟ್ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾ (ಡಿಸೆಂಬರ್ 6)ಇದೇ ತಿಂಗಳ 6ರಂದು ಸೆಟ್ಟೇರಲಿದೆ. ಅಧಿಕ ಮಾಸ ಪ್ರಾರಂಭವಾಗುವ ಮುನ್ನ ಮುಹೂರ್ತ ಮುಗಿಸಲಿರುವ ಯೋಗರಾಜ್ ಭಟ್ ಮತ್ತು ತಂಡ ಆದಷ್ಟು ಬೇಗ ಚಿತ್ರೀಕರಣವನ್ನೂ ಶುರು ಮಾಡಲಿದೆ.

ಹರಿಕೃಷ್ಣ ಸಂಗೀತ ನಿರ್ದೇಶನ

ಯೋಗರಾಜ್ ಮೂವೀಸ್ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಇನ್ನು ತಾಂತ್ರಿಕ ವರ್ಗದಲ್ಲಿ ವಿ ಹರಿಕೃಷ್ಣ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸುಜ್ಞಾನ್ ಕ್ಯಾಮೆರಾ ವರ್ಕ್ ಸಿನಿಮಾಗಿರಲಿದೆ.

ಭಟ್ಟರ ಟೀಂನಲ್ಲಿ ಹೊಸತಂಡ

ಮುಗುಳುನಗೆ ಸಿನಿಮಾದ ನಂತರ ನವ ಕಲಾವಿದರಿಗೆ ಹಾಗೂ ಟ್ಯಾಲೆಂಟೆಡ್ ಬರಹಗಾರರಿಗೆ ಅವಕಾಶ ಕೊಟ್ಟಿದ್ದಾರೆ. ಚಿತ್ರಕ್ಕೆ ಮಾಸ್ತಿ ಚಿತ್ರಕತೆ ಬರೆಯುತ್ತಿದ್ದು ಕಾಂತ್ ರಾಜ್ ರ ಕತೆಗೆ ಭಟ್ಟರು ಆಕ್ಟನ್ ಕಟ್ ಹೇಳಲಿದ್ದಾರೆ.

English summary
Kannada director Director Yogaraj Bhat is ready to make a film with new artists and new writers.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada