»   » ಅಯ್ಯೋ ಬದಲಾದ್ರು ಭಟ್ರು, ನೋಡಿದ್ರಾ ಅವ್ರ ನಯಾ ಲುಕ್ಕು.!

ಅಯ್ಯೋ ಬದಲಾದ್ರು ಭಟ್ರು, ನೋಡಿದ್ರಾ ಅವ್ರ ನಯಾ ಲುಕ್ಕು.!

Posted By:
Subscribe to Filmibeat Kannada
ಟಗರು ಟೀಸರ್ ಲಾಂಚ್ : ವಿಭಿನ್ನ ಲುಕ್ ನಲ್ಲಿ ಯೋಗರಾಜ್ ಭಟ್ರು

ನಮ್ಮ ಯೋಗರಾಜ್ ಭಟ್ರನ್ನ ಯಾರಾದ್ರು ಇತ್ತೀಚಿಗೆ ನೋಡಿದ್ರಾ ಅಂದ್ರೆ, ಕೆಲವರು ಇಲ್ಲಾ ಅಂತಿದ್ದಾರೆ. ಮತ್ತೆ ಕೆಲವರು ನಿನ್ನೆ ತಾನೆ 'ಟಗರು' ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ನೋಡಿದ್ವಿ ಅಂತಿದ್ದಾರೆ. ಹೌದು, ನೀವು ಯೋಗರಾಜ್ ಭಟ್ಟರನ್ನ ನೋಡಿರ್ತಿರಾ. ಆದ್ರೆ ಅವರ ಹೊಸ ಲುಕ್ ಅನ್ನ ನೋಡಿರಲ್ಲ ಬಿಡಿ. ಯಾಕಂದ್ರೆ ಭಟ್ಟರು ಬದಲಾಗಿದ್ದಾರೆ.

ಯೋಗರಾಜ್ ಭಟ್ಟರ ಸಿನಿಮಾಗಳಲ್ಲಿ ಮಾತ್ರ ಬದಲಾಣೆ ಅಂತ ನೀವು ಅಂದುಕೊಂಡಿದ್ರೆ ಅದು ತಪ್ಪು. ಯಾಕಂದ್ರೆ ಭಟ್ಟರು ತಮ್ಮದೇ ಸ್ಟೈಲ್ ಬದಲಾಯಿಸಿಕೊಂಡಿದ್ದಾರೆ. ಸಾದಾ ಸೀದಾ ಇದ್ದ ಯೋಗರಾಜರು ಈಗ ತಮ್ಮ ಹೇರ್ ಸ್ಟೈಲ್ ಗೆ ಮೇಕ್ ಓವರ್ ಮಾಡಿಕೊಂಡಿದ್ದಾರೆ. ಹೊಸ ಜಮಾನ ನಾವು ಒಂದಿಷ್ಟು ಚೈಂಜ್ ಆಗೋಣ ಅಂತ ಸ್ಪೈಕ್ ಹೇರ್ ಸ್ಟೈಲ್ ಮಾಡಿಕೊಂಡು ನಿನ್ನೆ ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟಿದ್ದರು.

Director yograj bhat new hairstyle

ಅಭಿಮಾನಿಗಳು ಆಯೋಜಿಸಿದ ಕಾರ್ಯಕ್ರಮ ಆಗಿದ್ದರಿಂದ, ಪ್ರೇಕ್ಷಕರು ಹೆಚ್ಚಾಗಿ ಆಗಮಿಸಿದ್ದರು. ಅದೇ ಕಾರಣದಿಂದ ಭಟ್ಟರ ನಯಾ ಲುಕ್ ಕಡೆ ಯಾರು ಕಣ್ಣಾಯಿಸಿರುವುದಿಲ್ಲ. ಆದ್ರೆ ನಮ್ಮ ಕಣ್ಣಿಗಂತು ಸ್ಪೈಕ್ ಸ್ಟೈಲ್ ನಲ್ಲಿ ಬಂದಿದ್ದ ವಿಕಟಕವಿ ಸಖತ್ತಾಗಿಯೇ ಕಾಣುತ್ತಿದ್ದರು .ಇಷ್ಟು ದಿನ ಅಲ್ಲೋಂದು ಇಲ್ಲೊಂದು ಸಿನಿಮಾದಲ್ಲಿ ಬಂದು ಹೋಗ್ತಿದ್ದ ಭಟ್ರು ಒಂದು ಚೂರು ತೆಳ್ಳುಗಾದ್ರೆ ಸಿನಿಮಾ ಹೀರೋ ಕೂಡ ಆಗಬಹುದು.

English summary
Director yogaraj bhat change his hair style for makeover.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada