»   » ನಟಿ ಅಮಲಾ ಪೌಲ್ - ವಿಜಯ್ ಗಲಾಟೆ ಸಂಸಾರದ ಗುಟ್ಟು ರಟ್ಟು.!

ನಟಿ ಅಮಲಾ ಪೌಲ್ - ವಿಜಯ್ ಗಲಾಟೆ ಸಂಸಾರದ ಗುಟ್ಟು ರಟ್ಟು.!

Posted By:
Subscribe to Filmibeat Kannada

ನಟಿ ಅಮಲಾ ಪೌಲ್ ಹಾಗೂ ನಿರ್ದೇಶಕ ಎ.ಎಲ್.ವಿಜಯ್ ರವರ ದಾಂಪತ್ಯ ಹಳಿ ತಪ್ಪಿರುವುದು ರಹಸ್ಯವಾಗಿ ಉಳಿದಿಲ್ಲ.

ಪರಸ್ಪರ ಒಪ್ಪಿಗೆ ಮೇರೆಗೆ ದಂಪತಿ ವಿಚ್ಛೇದನಕ್ಕೆ ಮುಂದಾಗಿರುವುದು 100% ನಿಜ ಅಂತ ಸ್ವತಃ ಎ.ಎಲ್.ವಿಜಯ್ ರವರ ತಂದೆ ಅಳಗಪ್ಪನ್ ಬಾಯಿ ಬಿಟ್ಟಿದ್ದರು.

ಸಾಲದಕ್ಕೆ, ''ಕುಟುಂಬದಲ್ಲಿ ಮನಸ್ತಾಪ ಶುರು ಆಗಲು ಅಮಲಾ ಪೌಲ್ ಕಾರಣ'' ಅಂತ ಅಳಗಪ್ಪನ್ ತಮಿಳು ಸುದ್ದಿ ವಾಹಿನಿಗಳಿಗೆ ಹೇಳಿಕೆ ನೀಡಿದ್ದರು. [ಸೊಸೆ ಅಮಲಾ ಪೌಲ್ ವಿರುದ್ಧ ವಿಜಯ್ ತಂದೆ ಕಿಡಿ.! ಯಾಕೆ.?]

ಇಷ್ಟಾದರೂ, ಅಮಲಾ ಪೌಲ್ ತುಟಿ ಎರಡು ಮಾಡಿಲ್ಲ. ಅವರ ಪರವಾಗಿ, ಹೆಸರು ಹೇಳಲು ಇಚ್ಛಿಸದ ಆಕೆಯ ಆಪ್ತ ಗೆಳತಿ 'ಗಲಾಟೆ ಸಂಸಾರ'ಕ್ಕೆ ಕಾರಣ ಯಾರು ಎಂಬ ಗುಟ್ಟನ್ನ ತಮಿಳು ವಾಹಿನಿ ಹಾಗೂ ವೆಬ್ ತಾಣಗಳಿಗೆ ರಟ್ಟು ಮಾಡಿದ್ದಾರೆ. ಮುಂದೆ ಓದಿ....

ಗಲಾಟೆ ಸಂಸಾರಕ್ಕೆ ವಿಜಯ್ ಕುಟುಂಬ ಕಾರಣ.!

''ಅಮಲಾ ಪೌಲ್ ಸಂಸಾರದಲ್ಲಿ ಭಿನ್ನಾಭಿಪ್ರಾಯ ಮೂಡಲು ವಿಜಯ್ ಕುಟುಂಬ ಕಾರಣ'' ಅಂತ ಅಮಲಾ ಪೌಲ್ ಆಪ್ತ ಗೆಳತಿ ಹೇಳಿದ್ದಾರೆ. [ನಟಿ ಅಮಲಾ ಪೌಲ್ ಸಂಸಾರದಲ್ಲಿ ಬಿರುಗಾಳಿ..! ಕಾರಣ ಯಾರು.?]

ವಿಜಯ್ ರಿಂದ ಸಮಸ್ಯೆ ಆಗಿಲ್ಲ.!

''ನಟನೆಯಲ್ಲಿ ಅಮಲಾ ಪೌಲ್ ಮುಂದುವರೆಯುವ ಬಗ್ಗೆ ಎ.ಎಲ್.ವಿಜಯ್ ರಿಂದ ಸಮ್ಮತಿ ಇತ್ತು. ಅವರು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ'' ಎನ್ನುತ್ತಾರೆ ಅಮಲಾ ಪೌಲ್ ಗೆಳತಿ. [ಗಂಡನೊಂದಿಗೆ ಮುನಿಸಿಕೊಂಡ ತಾರೆ ಅಮಲಾ ಪೌಲ್]

ವಿಜಯ್ ತಂದೆ-ತಾಯಿ

''ಅಮಲಾ ಇಡುವ ಪ್ರತಿ ಹೆಜ್ಜೆಗೂ ವಿಜಯ್ ಸಪೋರ್ಟ್ ಮಾಡುತ್ತಿದ್ದರು. ಆದ್ರೆ, ವಿಜಯ್ ಕುಟುಂಬಸ್ಥರು ಮಾತ್ರ ಚೆನ್ನಾಗಿ ನೋಡಿಕೊಳ್ಳುತ್ತಿರಲಿಲ್ಲ. ಅಮಲಾ ಭಾವನೆಗಳಿಗೆ ಗೌರವ ನೀಡುತ್ತಿರಲಿಲ್ಲ'' - ಅಮಲಾ ಪೌಲ್ ಗೆಳತಿ [ಕೊಚ್ಚಿಯಲ್ಲಿ ಸರಳವಾಗಿ ಅಮಲಾ ಪೌಲ್ ನಿಶ್ಚಿತಾರ್ಥ]

ಮಾನಸಿಕ ಕಿರಿಕಿರಿ

''ಮೊದಮೊದಲು ಎಲ್ಲಾ ಸಮಸ್ಯೆಗಳನ್ನ ನಿಭಾಯಿಸುತ್ತಿದ್ದರು. ಆದ್ರೆ, ಮಾನಸಿಕ ಕಿರಿಕಿರಿ ಹೆಚ್ಚಾಗ್ತಿದ್ದಂತೆ ದಂಪತಿ ದೂರ ಆಗಲು ನಿರ್ಧರಿಸಿದ್ದಾರೆ'' - ಅಮಲಾ ಪೌಲ್ ಗೆಳತಿ

ಅಮಲಾ ಇಮೇಜ್ ಡ್ಯಾಮೇಜ್ ಮಾಡಲಾಗುತ್ತಿದೆ.!

''ಈಗ ಕುಟುಂಬಕ್ಕೆ ಬೆಲೆ ಕೊಡದ ಬೇಜವಾಬ್ದಾರಿ ಹೆಣ್ಣು ಎಂಬಂತೆ ಹೇಳಿಕೆ ನೀಡಿ ವಿಜಯ್ ರವರ ತಂದೆ ಅಳಗಪ್ಪನ್, ಅಮಲಾ ಪೌಲ್ ಇಮೇಜ್ ಗೆ ಡ್ಯಾಮೇಜ್ ಮಾಡುತ್ತಿದ್ದಾರೆ'' - ಅಮಲಾ ಪೌಲ್ ಗೆಳತಿ

ವಿಚ್ಛೇದನ ನೀಡುವುದು ಖಚಿತ

''ಸದ್ಯದಲ್ಲೇ ದಂಪತಿ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಲಿದ್ದಾರೆ'' ಅಂತ ಅಮಲಾ ಪೌಲ್ ಗೆಳತಿ ತಿಳಿಸಿದ್ದಾರೆ.

English summary
Even though Actress Amala Paul is still maintaining silence over the Divorce issue, one of her close family friends opened up about the real divorce reason, recently. Shockingly, the friend has slammed Vijay's family for torturing the actress.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada